KSRTC ಪುತ್ತೂರು: ಡ್ರಿಂಕ್ಸ್ ಪರೀಕ್ಷಿಸಲು ಮಷೀನ್ ತಂದಿದ್ದಾರೆ ಎಂದು ತಪ್ಪು ತಿಳಿದು ಹೆದರಿದ ನೌಕರ- ಮೆಟ್ಟಲುಗಳಿಂದ ಬಿದ್ದು ಎರಡೂ ಕಾಲುಗಳ ಮುರಿದುಕೊಂಡ
ಡಿಎಂ ಕಿರುಕುಳವೂ ಹೆಚ್ಚು: ಇನ್ನು ಘಟಕದಲ್ಲಿ ಇರುವ ಘಟಕ ವ್ಯವಸ್ಥಾಪಕ ಇಸ್ಮಾಯಿಲ್ ಅವರ ಮೂಲ ಹುದ್ದೆ ಸಹಾಯಕ ಅಂಕಿ ಅಂಶ ಅಧಿಕಾರಿ, ಆದರೆ ಈತ ಕಳೆದ 2011 ರಿಂದ 2019ರವರೆಗೂ ಇದೇ ಡಿಪೋನಲ್ಲಿ ಡಿಎಂ ಆಗಿದ್ದರು. ಬಳಿಕ ವರ್ಗಾವಣೆ ಮಾಡಲಾಗಿತ್ತು. ತದನಂತರ ನನಗೆ ಇದೇ ಡಿಪೋ ಬೇಕು ಎಂದು ಸ್ಥಳೀಯ ರಾಜಕಾರಣಿಗಳ ಪ್ರಭಾವ ಬೀರಿ ಮತ್ತೆ ಕಳೆದ 2 ವರ್ಷಗಳಿಂದ ಇದೇ ಡಿಪೋದಲ್ಲಿ ಡ್ಯೂಟಿ ಮಾಡುತ್ತಿದ್ದಾರೆ.

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪುತ್ತೂರು ವಿಭಾಗದ ಬಿ.ಸಿ.ರೋಡ್ ಘಟಕದಲ್ಲಿ ಡ್ರಿಂಕ್ಸ್ ಕಂಟಿನ್ಯೂಟಿ ಪರೀಕ್ಷಿಸಲು ಅಧಿಕಾರಿಗಳು ಬಂದಿದ್ದಾರೆ ಎಂದು ತಪ್ಪು ತಿಳಿದು ಹೆದರಿದ ನೌಕರನೊಬ್ಬ ಮೊದಲ ಮಹಡಿಯಲ್ಲಿದ್ದ ವಿಶ್ರಾಂತಿ ಕೋಣೆಯಿಂದ ಓಡಿಹೋಗುವ ಭರದಲ್ಲಿ ಮೆಟ್ಟಿಲುಗಳಿಂದ ಬಿದ್ದು ಎರಡು ಕಾಲುಗಳನ್ನು ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಪುತ್ತೂರು ವಿಭಾಗದ ವೀಭಾಗೀಯ ಭದ್ರತಾ ಅಧೀಕ್ಷಕ ಮಧುಸೂದನ್ ಮತ್ತು ಅವರ ತಂಡ ಜೂನ್ 16ರ ರಾತ್ರಿ 11ಗಂಟೆ ಸುಮಾರಿಗೆ ಡಿಪೋಗೆ ಭೇಟಿ ನೀಡಿದೆ. ತಮ್ಮ ಸಿಬ್ಬಂದಿ ಡ್ಯೂಟಿ ಮಾಡುತ್ತಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದ ವೇಳೆ ವಿಶ್ರಾಂತಿ ಕೋಣೆಯಲ್ಲಿ ಮಲಗಿದ್ದ ಸಿಬ್ಬಂದಿಗಳು ವಿಚಲಿತಗೊಂಡಿದ್ದಾರೆ.
ನಮ್ಮನ್ನು ಎಲ್ಲಿ ಎಬ್ಬಿಸಿ ಡ್ರಿಂಕ್ಸ್ ಕಂಟಿನ್ಯೂಟಿ ಪರೀಕ್ಷಿಸಲು ಮಷೀನ್ ಊದುವಂತೆ ಹೇಳುತ್ತಾರೋ ಎಂದು ಹೆದರಿ ಗಲಿಬಿಲಿಗೊಂಡ ಸಿಬ್ಬಂದಿಯೊಬ್ಬ ನಿದ್ದೆಗಣ್ಣಲ್ಲಿ ಮತ್ತು ಇತ್ತ ಗಾಬರಿಗೊಂಡು ಮಹಡಿ ಮೇಲಿನ ಮೆಟ್ಟಲುಗಳಿಂದ ಇಳಿದು ಓಡಲು ಯತ್ನಿಸಿ ಬಿದ್ದು ಎರಡು ಕಾಲುಗಳನ್ನು ಮುರಿದುಕೊಳ್ಳುವ ಮೂಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಘಟಕದ ಚಾಲಕ ಕಂ ನಿರ್ವಾಹಕ ಈರಣ್ಣ ಬಡಿಗೇರ ಎಂಬಾತನೆ ಮೆಟ್ಟಿಲಿನಿಂದ ಆಯತಪ್ಪಿ ಬಿದ್ದು ತನ್ನ ಎರಡೂ ಕಾಲುಗಳ ಮೂಳೆಗಳನ್ನು ಮುರಿದುಕೊಂಡು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿವವರು. ಇನ್ನು ಈತ ಕೆಳಗೆ ಬಿದ್ದಿದ್ದನ್ನು ಗಮನಿಸಿದ ಇದೇ ಭದ್ರತಾ ಅಧಿಕಾರಿಗಳು ತಮ್ಮ ವಾಹನದಲ್ಲೇ ಈರಣ್ಣ ಬಡಿಗೇರ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ.
ಡಿಎಂ ಕಿರುಕುಳವೂ ಹೆಚ್ಚು: ಇನ್ನು ಘಟಕದಲ್ಲಿ ಇರುವ ಘಟಕ ವ್ಯವಸ್ಥಾಪಕ ಇಸ್ಮಾಯಿಲ್ ಅವರ ಮೂಲ ಹುದ್ದೆ ಸಹಾಯಕ ಅಂಕಿ ಅಂಶ ಅಧಿಕಾರಿ, ಆದರೆ ಈತ ಕಳೆದ 2011 ರಿಂದ 2019ರವರೆಗೂ ಇದೇ ಡಿಪೋನಲ್ಲಿ ಡಿಎಂ ಆಗಿದ್ದರು. ಬಳಿಕ ವರ್ಗಾವಣೆ ಮಾಡಲಾಗಿತ್ತು. ತದನಂತರ ನನಗೆ ಇದೇ ಡಿಪೋ ಬೇಕು ಎಂದು ಸ್ಥಳೀಯ ರಾಜಕಾರಣಿಗಳ ಪ್ರಭಾವ ಬೀರಿ ಮತ್ತೆ ಕಳೆದ 2 ವರ್ಷಗಳಿಂದ ಇದೇ ಡಿಪೋದಲ್ಲಿ ಡ್ಯೂಟಿ ಮಾಡುತ್ತಿದ್ದಾರೆ.
ಅಂದರೆ ಒಟ್ಟಾರೆ ಈ ಡಿಎಂ ತಮ್ಮ ಮೂಲ ಹುದ್ದೆ ಬಿಟ್ಟು ಘಟಕ ವ್ಯವಸ್ಥಾಪಕರಾಗಿ 10 ವರ್ಷಕ್ಕೂ ಹೆಚ್ಚು ಕಾಲದಿಂದಲೂ ಈ ಡಿಪೋದಲ್ಲೇ ಕೆಲಸ ಮಾಡುತ್ತಿದ್ದಾರೆ. ಏಕೆ? ಇವರು ತನ್ನ ಮೂಲ ಹುದ್ದೆಗೆ ಹೋಗುತ್ತಿಲ್ಲ ಎಂಬ ಪ್ರಶ್ನೆ ಈಗ ಮೂಡುತ್ತಿದೆ. ಜತೆಗೆ ಇವರು ಡಿಎಂ ಆಗಿರುವುದರಿಂದ ಈ ಹುದ್ದೆಗೆ ಅರ್ಹರಾಗಿರುವವರು ಇವರಿಂದ ಡಿಎಂ ಹುದ್ದೆ ವಂಚಿತರಾಗುತ್ತಿದ್ದಾರೆ.
ಅಲ್ಲದೆ ಡಿಪೋ ಒಳಗೆ ನೌಕರರಿಗೆ ಭಾರಿ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಒಂದು ವೇಳೆ ಯಾವುದೇ ನೌಕರ ಈ ಡಿಎಂ ನಡೆಯನ್ನು ಪ್ರಶ್ನಿಸಿದರೆ ಆತ ಅಲ್ಲಿ ಇರುವಂತಿಲ್ಲ ಎಂಬ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಂಸ್ಥೆಯ ನಿಯಮದಂತೆ ಮೂರು ವರ್ಷಕ್ಕಿಂತ ಯಾವ ಅಧಿಕಾರಿಗಳು ಒಂದೇ ಕಡೆ ಇರಬಾರದೆಂಬ ಆದೇಶ ಇದೆ. ಆದರೂ ಈ ಇಸ್ಮಾಯಿಲ್ ಕಳೆದ 10 ವರ್ಷದಿಂದ (ಪ್ರಸ್ತುತ ಎರಡು ವರ್ಷ ಸೇರಿ) ಒಂದೇ ಘಟಕದಲ್ಲಿದ್ದು ದಬ್ಬಾಳಿಕೆ ನಡೆಸಿ ಭಯದ ವಾತಾವರಣ ನಿರ್ಮಾಣ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ದಯವಿಟ್ಟು ಸಂಬಂಧಪಟ್ಟ ಮೇಲಧಿಕಾರಿಗಳು ಅನ್ಯಾಯಕ್ಕೆ ಒಳಗಾಗುತ್ತಿರುವ ನೌಕರರಿಗೆ ನ್ಯಾಯಕೊಡಿಸುವತ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Related









