Vijayapatha – ವಿಜಯಪಥ
Friday, November 1, 2024
CrimeNEWSನಮ್ಮರಾಜ್ಯ

ಮಂಡ್ಯ: ಕೆಲಸ ಕೊಡಿಸುವ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ: ಆರೋಪಿ ಸೆರೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ
  • ವಿಜಯಪಥ ಸಮಗ್ರ ಸುದ್ದಿ
    ಬೆಂಗಳೂರು: ಕೆಲಸ ಕೊಡಿಸುವ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದು ಅಲ್ಲದೆ, ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ಹಾಗೂ ಪದೇಪದೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಆನ್​ಲೈನ್ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಮಂಡ್ಯ ಮೂಲದ ಸಾಗರ್ ಗೌಡ ಬಂಧಿತ ಆರೋಪಿ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಸಂತ್ರಸ್ತ ಯುವತಿ 2018, ಸೆಪ್ಟೆಂಬರ್​ನಲ್ಲಿ ಆಕೆಯ ಸಂಬಂಧಿಕರೊಬ್ಬರ ಬರ್ತಡೇ ಪಾರ್ಟಿಯಲ್ಲಿ ಆರೋಪಿ ಸಾಗರ್ ಗೌಡನ ಪರಿಚಯ ಆಗಿದೆ. ಈಕೆಯ ನಂಬರ್ ಪಡೆದು ವಿನಾಕಾರಣ ಮೆಸೇಜ್​ ಕಳುಹಿಸುತ್ತಿದ್ದ. 2019, ಆಗಸ್ಟ್ 10ರಂದು ಆಕೆ ತನಗೆ ಉದ್ಯೋಗ ಹೋಗಿರುವ ವಿಚಾರವನ್ನು ಆತನಿಗೆ ತಿಳಿಸಿದ್ದಾಳೆ.

ಎರಡು ದಿನದ ಬಳಿಕ ಆತ ರೆಸ್ಯೂಮ್ ಸಮೇತ ನಾಯಂಡಹಳ್ಳಿ ಬಸ್ ನಿಲ್ದಾಣಕ್ಕೆ ಬರಲು ಹೇಳಿದ್ದ. ಅಲ್ಲಿಗೆ ಬಂದ ಆಕೆಗೆ ಮತ್ತುಬರುವ ಕೇಕ್ ತಿನಿಸಿ. ಮಂಪರು ಬಂದ ಆಕೆಗೆ ಸಮೀಪದಲ್ಲೇ ತನ್ನ ಅಕ್ಕನ ಮನೆ ಇದೆ. ಅಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಬಹುದು ಎಂದು ಹೇಳಿ ಮನೆಯೊಂದಕ್ಕೆ ಕರೆದೊಯ್ಯುತ್ತಾನೆ. ಯಾರೂ ಇಲ್ಲದ ಆ ಮನೆಯಲ್ಲಿ ಯುವತಿ ಮೇಲೆ ಆತ ಅತ್ಯಾಚಾರ ಎಸಗಿ ಫೋಟೋ, ವಿಡಿಯೋ ಚಿತ್ರೀಕರಿಸುತ್ತಾನೆ. ಮನೆಗೆ ಹೋದ ಯುವತಿಗೆ ಆ ಕ್ಲಿಪ್​ಗಳನ್ನು ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡುತ್ತಾನೆ. ಬಳಿಕ 1 ಲಕ್ಷ ರೂ. ವಸೂಲಿ ಮಾಡಿದ್ದಾನೆ.

ಇನ್ನು ಅಷ್ಟಕ್ಕೆ ಸುಮ್ಮನಾಗದ ಆತ ತಾನು ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ಹೇಳಿ ಪುಸಲಾಯಿಸಿ ಮತ್ತಷ್ಟು ಹಣ ವಸೂಲಿ ಮಾಡಿದ್ದಾನೆ. ವಿವಿಧ ಸ್ಥಳಗಳಿಗೆ ಕರೆದೊಯ್ದು ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಇದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಬ್ಬಹಳ್ಳಿ ಗ್ರಾಮದ ಸಾಗರ್ ಮನೆಗೆ ನ್ಯಾಯ ಕೇಳಲು ಯುವತಿಹೋದಾಗ ಮನೆಯವರಿಗೆ ಶಾಕ್ ಆಗುತ್ತದೆ.

ಆರೋಪಿ ಸಾಗರ್ ಗೌಡ ಈ ಮುಂಚೆಯೂ 26 ಯುವತಿಯರಿಗೆ ಮೋಸ ಮಾಡಿದ ವಿಚಾರ ಆತನ ಅಪ್ಪ ರಾಮೇಗೌಡರಿಂದ ತಿಳಿಯುತ್ತದೆ. ನ್ಯಾಯದ ಮಾತುಗಳನ್ನಾಡುವ ಬದಲು ಆರೋಪಿ ಸಾಗರ್ ಗೌಡನ ತಂದೆ ರಾಮೇಗೌಡ ಉಡಾಫೆಯಿಂದ ವರ್ತಿಸಿದ್ದಾರೆ. ದೌರ್ಜನ್ಯ ಎಸಗಿದ ಎಲ್ಲಾ ಯುವತಿಯರಿಗೂ ನನ್ನ ಮಗ ಬಾಳು ಕೊಡಲು ಆಗುತ್ತಾ? ನಿಮ್ಮ ಜಾತಿ ಬೇರೆ ನನ್ನ ಜಾತಿ ಬೇರೆ ಎಂದು ಹೇಳಿ ತಮಗೆ ಕೊಲೆ ಬೆದರಿಕೆ ಹಾಕಿದರೆಂದು ನೊಂದ ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಕೊನೆಗೆ ನೊಂದ ಯುವತಿ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಸದ್ಯ ಆರೋಪಿ ಸಾಗರ್ ಗೌಡನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ