- ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ನಾಯಕತ್ವ ಬಗ್ಗೆ ಮತ್ತೆ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕಿಡಿಕಾರಿದ್ದಾರೆ.
ವಿಜಯಪಥ ಹೊಸ ಆಪ್ ಬಿಡುಗಡೆಮಾಡಲಾಗಿದೆ ಎಲ್ಲರೂ ಡೌನ್ಲೋಡ್ ಮಾಡಿಕೊಂಡು ನಿಮ್ಮ ಊರಿನ ಮತ್ತು ಇಷ್ಟವಾದ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/details?id=manyathy.vijayapatha.app
ಯಶವಂತಪುರ ಎಪಿಎಂಸಿ ಯಾರ್ಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಇಂತಹ ವಿಷಯಗಳನ್ನೆಲ್ಲ ಮಾತಾಡಲು ಬಸನಗೌಡ ಪಾಟೀಲ್ ಯಾರು? ಅವರಿಗೆ ಮಾತಾಡೋದು ಇದ್ರೆ ಪಕ್ಷದ ಚೌಕಟ್ಟಿನೊಳಗೆ ಮಾತಾಡಲಿ. ಅವರು ಇಂತಹ ಹೇಳಿಕೆಗಳನ್ನು ಕೊಡೋದನ್ನು ನಿಲ್ಲಿಸಲಿ. ಅವರ ಭವಿಷ್ಯದ ದೃಷ್ಟಿಯಿಂದ ಇಂಥ ಹೇಳಿಕೆಗಳನ್ನು ಯತ್ನಾಳ್ ಕೊಡದಿರಲಿ ಎಂದು ಎಚ್ಚರಿಕೆ ನೀಡಿದರು.
ದಿನನಿತ್ಯ ಮಾಧ್ಯಮಕ್ಕೆ ಹಾಗೂ ಹೊರಗೆ ಮಾತಾಡೋದು ಅವರಿಗೆ ಶೋಭೆ ತರುವುದಿಲ್ಲ. ಅವರು ಏನಾದರೂ ಹೇಳೋದು ಇದ್ರೆ ರಾಷ್ಟ್ರೀಯ ನಾಯಕರು ಅಥವಾ ಪಕ್ಷದ ರಾಜ್ಯಾದ ಅಧ್ಯಕ್ಷರ ಜೊತೆ ಮಾತನಾಡಬೇಕು. ಆದರೆ ಎಲ್ಲೋ ಬಂದು ಬೀದಿಯಲ್ಲಿ ಮಾತನಾಡಿ ಅವರ ಭವಿಷ್ಯದ ಬಗ್ಗೆ ಒಳ್ಳೆಯ ಪರಿಣಾಮ ಬೀರುವುದಿಲ್ಲ. ಯಾರು ಎಲ್ಲಿ ಹೇಳಬೇಕೋ ಅಲ್ಲಿ ಹೇಳಿದ್ರೆ ಮಾತ್ರ ಅದಕ್ಕೆ ನಿಜವಾದ ಅರ್ಥ ಹಾಗೂ ಗೌರವ ಸಿಗುತ್ತದೆ ಎಂದು ಹೇಳಿದರು.
ಇನ್ನು ಅವರೇನು ನಮ್ಮ ಪಕ್ಷದ ರಾಷ್ಟ್ರೀಯ ನಾಯಕ ಅಲ್ಲ. ನಮ್ಮ ರಾಜ್ಯದ ಪಕ್ಷದ ಯಾವುದೇ ಅಧ್ಯಕ್ಷನೂ ಅಲ್ಲ. ಅಥವಾ ಯಾವುದಾದರೂ ಒಂದು ಹೇಳುವ ಸ್ಥಾನದಲ್ಲೂ ಇಲ್ಲ. ಅವರೊಬ್ಬ ಸಾಮಾನ್ಯ ಶಾಸಕ ಅಷ್ಟೇ ಎಂದು ಕಾಲೆಳೆದರು.
ವಿಜಯಪಥ ಹೊಸ ಆಪ್ ಬಿಡುಗಡೆಮಾಡಲಾಗಿದೆ ಎಲ್ಲರೂ ಡೌನ್ಲೋಡ್ ಮಾಡಿಕೊಂಡು ನಿಮ್ಮ ಊರಿನ ಮತ್ತು ಇಷ್ಟವಾದ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/details?id=manyathy.vijayapatha.app
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಯತ್ನಾಳ್ ಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಬೇಸರ ಇದೆ. ಈ ಬೇಸರದಿಂದ ಇಂಥ ಹೇಳಿಕೆ ಕೊಡ್ತಿದ್ದಾರೆ. ಈಗಾಗಲೇ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಹ ನಾಯಕತ್ವ ಬದಲಾವಣೆ ಇಲ್ಲ ಅಂದಿದ್ದಾರೆ. ಯತ್ನಾಳ್ ಅವರ ಹೇಳಿಕೆಗಳನ್ನು ಹೈಕಮಾಂಡ್ ಗಮನಿಸುತ್ತಿದೆ. ಸೂಕ್ತ ಸಂದರ್ಭದಲ್ಲಿ ವರಿಷ್ಠರು ನಿರ್ಧಾರ ತಗೆದುಕೊಳ್ಳುತಾರೆ ಎಂದು ಯತ್ನಾಳ್ ಹೇಳಿಕೆಗೆ ಪರಿಷತ್ ಸದಸ್ಯ ಎನ್.ರವಿಕುಮಾರ್ ತಿರುಗೇಟು ನೀಡಿದ್ದಾರೆ.
ಯತ್ನಾಳ್ ತಿರುಗೇಟು
ಇನ್ನು ಕೇಂದ್ರ ಸಚಿವ ಸದಾನಂದಗೌಡರ ಹೇಳಿಕೆಗೆ ತಿರುಗೇಟು ನೀಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಪ್ರಧಾನಿ ನರೇಂದ್ರ ಮೋದಿಯವರೇ “ನಾನೊಬ್ಬ ಪ್ರಧಾನ ಸೇವಕ” ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ನಾನೊಬ್ಬ ಸಾಮಾನ್ಯ ಶಾಸಕ ಎನ್ನುವ ಸದಾನಂದಗೌಡರ ಹೇಳಿಕೆ ಸತ್ಯವಾದದ್ದು. ನಾನು ರಾಷ್ಟ್ರೀಯ ನಾಯಕನೆಂದು ಎಲ್ಲಿಯೂ ಹೇಳಿಕೊಂಡಿಲ್ಲ ಎಂದಿದ್ದಾರೆ.
ವಿಜಯಪುರದಲ್ಲಿ ಮಾತನಾಡಿ, ಕರ್ನಾಟಕ ಬಿಜೆಪಿಯಲ್ಲಿ ಸದಾನಂದಗೌಡ ಬುದ್ದಿ ಜೀವಿಗಳು. ಅವರಿಗೆ ಅಗಾಧವಾದ ಶಕ್ತಿಯಿದೆ. ಅವರು ನನ್ನ ಬಗ್ಗೆ ಸರಿಯಾಗಿಯೇ ಹೇಳಿದ್ದಾರೆ. ಈ ಹಿಂದೆ ನನ್ನನ್ನು ತಪ್ಪಿಸಿ ಅವರು ರಾಜ್ಯಾಧ್ಯಕ್ಷರಾಗಿದ್ದರು. ಈಗ ಅವರು ನನ್ನ ಬಗ್ಗೆ ಹೇಳುತ್ತಿರುವುದು ವಿಪರ್ಯಾಸವಾಗಿದೆ ಎಂದು ತಿಳಿಸಿದರು.
ವಿಜಯಪಥ ಹೊಸ ಆಪ್ ಬಿಡುಗಡೆಮಾಡಲಾಗಿದೆ ಎಲ್ಲರೂ ಡೌನ್ಲೋಡ್ ಮಾಡಿಕೊಂಡು ನಿಮ್ಮ ಊರಿನ ಮತ್ತು ಇಷ್ಟವಾದ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/details?id=manyathy.vijayapatha.app
ಈಗ ಸದಾನಂದಗೌಡರು ಹಿರಿಯ ನಾಯಕರು, ರಾಷ್ಟ್ರೀಯ ನಾಯಕರು. ರಸ್ತೆಯ ಮೇಲೆ ಅವರು ಮಾತನಾಡುವುದಿಲ್ಲ. ಪಾರ್ಲಿಮೆಂಟ್ ಮೇಲೆ ಕುಳಿತು ಮಾತನಾಡುತ್ತಾರಾ? ನಾನು ಪತ್ರಕರ್ತರು ಎಲ್ಲಿ ಸಿಗುತ್ತಾರೆ ಅಲ್ಲಿ ಮಾತನಾಡುತ್ತೇನೆ. ರಾಜಕಾರಣದಲ್ಲಿ ಹಿರಿಯರಿಗೆ ಬೆಲೆ ಇಲ್ಲ. ಸದಾನಂದಗೌಡರು ಎಲ್ಲರ ಬಗ್ಗೆ ಕೆಳಮಟ್ಟದಲ್ಲಿ ಮಾತನಾಡುವುದು ಸರಿಯಲ್ಲ. ನಾವು ಇರುವ ನಮ್ಮವರ ಜತೆ ಇರುತ್ತೇವೆ. ಅವರ ಬಗ್ಗೆ ಅವರು ಎಚ್ಚರಿಕೆ ವಹಿಸಿಕೊಳ್ಳಲಿ ಎಂದು ಹೇಳಿದರು.