- ವಿಜಯಪಥ ಸಮಗ್ರ ಸುದ್ದಿ
ಬಟಿಂಡಾ: ಶಾಂತಿಯುತವಾಗಿ ನಡೆಯುತ್ತಿದ್ದ ರೈತರ ಪ್ರತಿಭಟನೆ ಈಗ ಹಿಂಸಾಚಾರಕ್ಕೆ ತಿರುಗುತ್ತಿದೆ. ಸರ್ಕಾರ ರೈತರು ಧರಣಿ ನಡೆಸುತ್ತಿದ್ದರು ತನ್ನ ಹಠವನ್ನು ಬಿಡುತ್ತಿಲ್ಲ ಎಂದು ಆಕ್ರೋಶಗೊಂಡಿರುವ ರೈತರು ಹಿಂಸಾತ್ಮಕ ಮಾರ್ಗ ಅನುಸರಿಸುತ್ತಿದ್ದಾರೆ ಎಂದು ವರದಿಯಾಗಿದೆ.
ವಿಜಯಪಥ ಹೊಸ ಆಪ್ ಬಿಡುಗಡೆಮಾಡಲಾಗಿದೆ ಎಲ್ಲರೂ ಡೌನ್ಲೋಡ್ ಮಾಡಿಕೊಂಡು ನಿಮ್ಮ ಊರಿನ ಮತ್ತು ಇಷ್ಟವಾದ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/details?id=manyathy.vijayapatha.app
ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ವಿರುದ್ಧದ ರೈತರ ಪ್ರತಿಭಟನೆ ತೀವ್ರವಾಗಿರುವುದರ ಮಧ್ಯೆಯೇ ರೈತರು ತಾಳ್ಮೆ ಕಳೆದುಕೊಂಡಂತೆ ಕಾಣುತ್ತಿದೆ. ನಿನ್ನೆ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿರುವ ಬಗ್ಗೆ ವರದಿಯಾಗಿದೆ.
ಪಂಜಾಬ್ ರಾಜ್ಯದ ಬಟಿಂಡಾದಲ್ಲಿ ರೈತರು ಬಿಜೆಪಿ ಕಚೇರಿ ಮೇಲೆ ಗುರಿಯಾಗಿಟ್ಟು ದಾಳಿ ಮಾಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಪ್ರತಿಭಟನಾ ನಿರತ ರೈತರು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿ ದಾಂಧಲೆ ನಡೆಸಿ ಕುರ್ಚಿಗಳನ್ನು ಮುರಿದು ಹಾಕಿ ಟಿವಿಯನ್ನು ಒಡೆದು ಹಾಕಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗಿದೆ.
ವಿಜಯಪಥ ಹೊಸ ಆಪ್ ಬಿಡುಗಡೆಮಾಡಲಾಗಿದೆ ಎಲ್ಲರೂ ಡೌನ್ಲೋಡ್ ಮಾಡಿಕೊಂಡು ನಿಮ್ಮ ಊರಿನ ಮತ್ತು ಇಷ್ಟವಾದ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/details?id=manyathy.vijayapatha.app
ದಾಂಧಲೆ ವೇಳೆ ಬಟಿಂಡಾದ ಬಿಜೆಪಿ ಮುಖ್ಯಸ್ಥ ವಿನೋದ್ ಗುಪ್ತ ಮತ್ತು ರಾಜ್ಯ ಬಿಜೆಪಿ ಕಾನೂನು ಘಟಕದ ಸಹ ಸಂಚಾಲಕ ರವೀಂದರ್ ಗುಪ್ತ ಸೇರಿದಂತೆ ಐವರು ಪಕ್ಷದ ಕಾರ್ಯಕರ್ತರು ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಈ ಎಲ್ಲಾ ಘಟನಾವಳಿಗಳು ಸಿಸಿ ಕ್ಯಾಮರಾದ ವಿಡಿಯೋದಲ್ಲಿ ಸೆರೆಯಾಗಿದ್ದು ರೈತರು ಹಿಂಸಾಕೃತ್ಯ ನಡೆಸುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಭೀತಿಯಿಂದ ದಿಕ್ಕುಪಾಲಾಗಿ ಓಡುತ್ತಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಗುಂಪನ್ನು ಚದುರಿಸಿದರು ಎನ್ನಲಾಗಿದೆ. ಇ ನಡೆವೆ ನಿನ್ನೆ ದಾಂಧಲೆ ಮಾಡಿದವರು ರೈತರ ಗುಂಪನಲ್ಲಿದ್ದ ಕೆಲವು ಸಮಾಜ ವಿರೋಧಿಗಳು ಕೃತ್ಯದಲ್ಲಿ ತೊಡಗಿದ್ದರು ಎಂದು ರೈತರು ಹೇಳುತ್ತಿದ್ದಾರೆ.
ಇನ್ನು ಉತ್ತರಾಖಂಡ್ ನಲ್ಲಿ ರೈತರು ಪೊಲೀಸರೊಂದಿಗೆ ಚಕಮಕಿ ನಡೆಸಿದ ಘಟನೆ ವರದಿಯಾಗಿದೆ. ದೆಹಲಿಗೆ ಹೊರಟಿದ್ದ ರೈತರನ್ನು ತಡೆದ ಪೊಲೀಸರೊಂದಿಗೆ ಉದಮ್ ಸಿಂಗ್ ನಗರ್ ನಲ್ಲಿ ರೈತರು ಮಾತಿನ ಚಕಮಕಿ ನಡೆಸಿದ್ದಾರೆ.
ವೈರಲ್ ಆದ ವಿಡಿಯೋವೊಂದರಲ್ಲಿ ಟ್ರಾಕ್ಟರ್ ಒಂದರಲ್ಲಿ ಪೊಲೀಸ್ ಬ್ಯಾರಿಕೇಡ್ ನ್ನು ತಳ್ಳುವ ದೃಶ್ಯವಿದೆ. ನಮ್ಮ ಹಕ್ಕುಗಳನ್ನು ಪೊಲೀಸರು ಕಸಿಯಲು ಸಾಧ್ಯವಿಲ್ಲ. ನಾವು ದೆಹಲಿಗೆ ಶಾಂತಿಯುತವಾಗಿ ಮೆರವಣಿಗೆ ಹೊರಟಿದ್ದು ಪೊಲೀಸರು ನಮ್ಮನ್ನು ತಡೆಯುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪಥ ಹೊಸ ಆಪ್ ಬಿಡುಗಡೆಮಾಡಲಾಗಿದೆ ಎಲ್ಲರೂ ಡೌನ್ಲೋಡ್ ಮಾಡಿಕೊಂಡು ನಿಮ್ಮ ಊರಿನ ಮತ್ತು ಇಷ್ಟವಾದ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/details?id=manyathy.vijayapatha.app
ಇದಲ್ಲದೆ ಪಂಜಾಬ್‌ನ ಜಲಂದರ್ ಕಂಟೋನ್ಮೆಂಟ್‌ನಲ್ಲಿ ಸಹ, ಬಿಜೆಪಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ದಾಂಧಲೆ ನಡೆಸಿದ್ದು, ಬಳಿಕ ಬಿಜೆಪಿ ನಾಯಕ ಮನೋರಂಜನ್ ಕಳಿಯಾ ಅವರ ನಿವಾಸಕ್ಕೂ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಪೊಲೀಸರು ಲಾಠಿ ಚಾರ್ಜ್ ಮಾಡಿ ಗುಂಪನ್ನು ಚದುರಿಸಿದರು. ಈ ವೇಳೆ ಕೆಲವು ರೈತರಿಗೆ ಗಾಯಗಳಾಗಿವೆ.
ನಾಲ್ಕೈದು ದಿನಗಳಿಂದ ಪಂಜಾಬ್‌ನ ಖಾಸಗಿ ಟೆಲಿಕಾಂ ಕಂಪನಿಗಳ ಮೊಬೈಲ್ ಟವರ್‌ಗಳನ್ನು ರೈತರು ಗುರಿಯಾಗಿರಿಸಿಕೊಂಡು ದಾಳಿ ಮಾಡಿದ್ದಾರೆ. ಈ ಟವರ್ ಗಳಿಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಸುಮಾರು ಸಾವಿರ ಟವರ್ ಗಳನ್ನು ಹಾನಿ ಮಾಡಲಾಗಿದೆ. ಹೀಗಾಗಿ ಸಾರ್ವಜನಿಕರಿಗೆ ತೊಂದರೆ ಮಾಡದೆ ಮತ್ತು ಶಾಂತಿಯುತವಾಗಿ ಪ್ರತಿಭಟನೆ ಮಾಡಿ ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪ್ರತಿಭಟನಾ ನಿರತ ರೈತರಿಗೆ ಮನವಿ ಮಾಡಿದ್ದಾರೆ.