NEWSವಿಜ್ಞಾನ

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮೂರು ಘಟಕಗಳಿಗೆ ರಾಜ್ಯಮಟ್ಟದ ಪ್ರಶಸ್ತಿ

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಅತ್ಯಂತ ಹೆಚ್ಚಿನ ಕೆಎಂಪಿಎಲ್ ಸಾಧನೆ ಮಾಡಿದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಪಿಸಿಆರ್‍ಎ ಯಿಂದ ಸಕ್ಷಮ-2021) ಗುರುಮಠಕಲ್ ಘಟಕ, ಶಹಾಪುರ ಘಟಕ ಹಾಗೂ ಕಲಬುರಗಿ ಘಟಕ-4ಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ದೊರೆತ್ತಿದೆ.

ರಾಜ್ಯ ಮಟ್ಟದ ಪ್ರಶಸ್ತಿಗೆ ಕಾರಣರಾದ ಈ ಕೆಳಕಂಡ ಮೂರು ಘಟಕಗಳ ಚಾಲನಾ ಸಿಬ್ಬಂದಿ, ಚಾಲಕ ಬೋಧಕ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ, ಮೇಲ್ವಿಚಾರಕ ಸಿಬ್ಬಂದಿ ಘಟಕ ವ್ಯವಸ್ಥಾಪಕರು, ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಶಾಸಕರು ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ್ ಎಂ. ಅಭಿನಂದಿಸಿದ್ದಾರೆ.

ಸೋಮವಾರ ಬೆಂಗಳೂರಿನಲ್ಲಿ ಜರುಗಿದ ಸಮಾರಂಭದಲ್ಲಿ (ಆನ್‍ಲೈನ್ ಮೂಲಕ) ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ಆಯುಕ್ತಾಲಯ ಸಚಿವ ಕೆ. ಗೋಪಾಲಯ್ಯ ಪ್ರಶಸ್ತಿ ಪ್ರದಾನ ಮಾಡಿದರು. ರಾಜ್ಯಮಟ್ಟದ ಸಾಧನೆಗೆ ಪ್ರತಿ ಘಟಕಕ್ಕೆ 50 ಸಾವಿರ ರೂ.ಗಳ ನಗದು ಬಹುಮಾನ, ಪ್ರಶಸ್ತಿ ಫಲಕ ಹಾಗೂ ಪ್ರಮಾಣಪತ್ರ ವಿತರಿಸಿದರು.

ಗುರುಮಠಕಲ್ ಘಟಕ, ಶಹಾಪುರ ಘಟಕ ಹಾಗೂ ಕಲಬುರಗಿ ಘಟಕ-4ಕ್ಕೆ ಕ್ರಮವಾಗಿ 0.39 ಲಕ್ಷ, 0.71 ಲಕ್ಷ ಹಾಗೂ 0.31 ಲಕ್ಷ ಲೀಟರ್ ಇಂಧನವನ್ನು ಕಡಿಮೆ ಬಳಸಿ ಸಂಸ್ಥೆಗೆ ಕ್ರಮವಾಗಿ ರೂ 26.35, 47.78 ಹಾಗೂ 20.87 ಲಕ್ಷ ರೂ.ಗಳ ಉಳಿತಾಯ ಮಾಡಲಾಗಿದೆ.

ಅಕ್ಟೋಬರ್-2018 ರಿಂದ ಸೆಪ್ಟಂಬರ್-2019 ರ ಅವಧಿಯ ಹೋಲಿಸಿದಾಗ ಅಕ್ಟೋಬರ್-2019 ರಿಂದ ಸೆಪ್ಟೆಂಬರ್-2020 ಅವಧಿಯಲ್ಲಿ ಸಂಸ್ಥೆಯು ಉತ್ತಮ ಇಂಧನ ಉಳಿತಾಯ ಸಾಧನೆ ಮಾಡಿದ್ದಕ್ಕಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗುರುಮಠಕಲ್ ಘಟಕ, ಶಹಾಪೂರ ಘಟಕ ಹಾಗೂ ಕಲಬುರಗಿ ಘಟಕ-4 ಘಟಕಗಳು ರಾಜ್ಯ ಮಟ್ಟದಲ್ಲಿ “Best Depot Award at State Level in KMPL Improvement” ಪ್ರಶಸ್ತಿ ಪಡೆದಿವೆ.

ತೈಲ ಹಾಗೂ ಅನಿಲ ಉಳಿತಾಯವನ್ನು ಪ್ರೊತ್ಸಾಹಿಸಲು, ಪರಿಸರ ಸಂರಕ್ಷಿಸಲು ಹಾಗೂ ಸುಸ್ಥಿರ ಅಭಿವೃದ್ಧಿ (Sustainable Growth) ಸಾಧಿಸಲು ಪ್ರತಿ ವರ್ಷ ಸಂರಕ್ಷಣ ಕ್ಷಮತಾ ಮಹೋತ್ಸವ (ಸಕ್ಷಮ-SAKSHAM) Pಅಖಂ ನಿಂದ SಂಏSಊಂಒ-2021 ಆಯೋಜಿಸಲಾಗುತ್ತಿದೆ.

ಕೇಂದ್ರ ಸರ್ಕಾರದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ Petroleum Conservation Research Association ತೈಲ ಹಾಗೂ ಅನಿಲ ಉಳಿತಾಯದ ಬಗ್ಗೆ ನಿರಂತರವಾಗಿ ಅರಿವು ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್