NEWSನಮ್ಮರಾಜ್ಯವಿಜ್ಞಾನ

ಸಾರಿಗೆ ನೌಕರರಿಗೆ ಅರ್ಧ ಸಂಬಳ ಬೇಡ, ಪೂರ್ತಿ ವೇತನ ನೀಡಿ: ಎಎಪಿ ನಾಗಣ್ಣ ಆಗ್ರಹ

ಲಕ್ಷ್ಮಣ್ ಸವದಿಯವರೇ ನಿಮ್ಮ ಕಾರಿಗೆ ಸಾರಿಗೆ ಇಲಾಖೆ ಪೆಟ್ರೋಲ್ ಬೇಕು, ನೌಕರರು ಬೇಡವೇ?

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವೈಫಲ್ಯಾವಾಗಿದ್ದು, ಜನ ಸಾಮಾನ್ಯರು ನಲುಗುವಂತೆ ಮಾಡಿದೆ. ಜನಸಾಮಾನ್ಯರ ಯಾವುದೇ ಸಮಸ್ಯೆಗಳನ್ನು ಸರಿಯಾಗಿ ನಿಭಾಯಿಸದೆ ವೈಫಲ್ಯಗೊಂಡಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರ ಜೊತೆ ಉದ್ದಟತನದಿಂದ ವರ್ತಿಸುತ್ತಿದ್ದು, ಕಿಂಚಿತ್ತಾದರೂ ಸೌಜನ್ಯ ಕಲಿಯಲಿ, ಕಳೆದ ವರ್ಷ ನಡೆದ ಪ್ರತಿಭಟನೆ ವೇಳೆ ನೀಡಿದ ಭರವಸೆಯನ್ನು ಸರ್ಕಾರ ಈಡೇರಿಸದೆ ದ್ರೋಹ ಎಸಗಿದೆ ಎಂದರು.

ಲಾಕ್‌ಡೌನ್‌ನಿಂದ ನಷ್ಟ ಉಂಟಾಗಿದ್ದು ಸರಿಯಾಗಿ ಸಂಬಳ ನೀಡಲು ಕಷ್ಟ ಎಂದು ಹೇಳಿದ್ದ ಸಾರಿಗೆ ಸಚಿವ ಲಕ್ಷ್ಮಣ್ ಸವಧಿ ಎಲ್ಲಿದ್ದೀರಿ?, ಈಗ ಪೂರ್ಣ ಪ್ರಮಾಣದಲ್ಲಿ ಬಸ್‌ಗಳ ಸಂಚಾರವಿದೆ, ಸಾಕಷ್ಟು ಹಣ ಸಂಗ್ರಹವಾಗಿದೆ, ನೌಕರರು ನೀವು ಕೊಟ್ಟಷ್ಟು ಸಂಬಳ ಪಡೆದುಕೊಳ್ಳಲು ಜೀತದಾಳುಗಳಲ್ಲ ಸಾರ್ವಜನಿಕರ ಸೇವಕರು, ಈ ಕೂಡಲೇ ಪೂರ್ತಿ ಸಂಬಳ ನೀಡ ಎಂದು ಆಗ್ರಹಿಸಿದರು.

ಸಚಿವ ಲಕ್ಷ್ಮಣ್ ಸವಧಿಯವರೇ ನಿಮ್ಮ ಸ್ವಂತ ಕಾರಿಗೆ ಕೆಎಸ್‌ಆರ್‌ಟಿಸಿ ಡಿಪೋಗೆ ಹೋಗಿ ಪೆಟ್ರೋಲ್ ತುಂಬಿಸಿಕೊಳ್ಳುವಷ್ಟು ದಿವಾಳಿಯಾಗಿದ್ದೀರಿ, ನಿಮ್ಮದೆ ಇಲಾಖೆಯ ದುಡ್ಡು ಬೇಕು ಆದರೆ ನೌಕರರು ಬೇಡವೆ. ಪ್ರತಿಭಟನೆ ವೇಳೆ ಕಂಡ ನೀವು ಎಲ್ಲಿ ಕಣ್ಮರೆಯಾಗಿರುವಿರಿ ದಯವಿಟ್ಟು ನೌಕರರ ಸಮಸ್ಯೆ ಬಗೆಹರಿಸಿ ಎಂದರು.

ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಮಾತನಾಡಿ, ಲಕ್ಷಾಂತರ ನೌಕರರ ಭವಿಷ್ಯ ಇಂದಿಗೂ ಭದ್ರವಾಗಿಲ್ಲ ಮುಖ್ಯಮಂತ್ರಿಗಳು ನೇರವಾಗಿ ಈ ಸಮಸ್ಯೆ ಪರಿಹಾರಕ್ಕೆ ಮುಂದೆ ಬರಬೇಕು ಎಂದು ಆಗ್ರಹಿಸಿದರು.

ಯುವ ಘಟಕದ ಬೆಂಗಳೂರು ನಗರ ಉಪಾಧ್ಯಕ್ಷೆ ನಿತನ್ಯಾ ಪವಾರ್ ಮಾತನಾಡಿ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯಲ್ಲಿ ದುಡಿಯುತ್ತಿರುವ ಅನೇಕ ಮಹಿಳೆಯರ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ.‌ ಮಹಿಳೆಯರನ್ನೇ ನೆಚ್ಚಿಕೊಂಡಿರುವ ಅನೇಕ ಕುಟುಂಬಗಳು ಸರಿಯಾದ ಸಂಬಳವಿಲ್ಲದೆ ದಿಕ್ಕುತೋಚದಂತಾಗಿವೆ, ಮಕ್ಕಳ ಶಾಲಾ ಶುಲ್ಕ ಕಟ್ಟಲು ಪರದಾಡುವಂತಾಗಿದೆ, ಆದರೂ ಸರ್ಕಾರಕ್ಕೆ ಹೃದಯವಿಲ್ಲವೇ ಎಂದು ಪ್ರಶ್ನಿಸಿದರು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು