NEWSನಮ್ಮರಾಜ್ಯರಾಜಕೀಯ

ಸಿಎಂ ಬಿಎಸ್‌ವೈ ಇಂಜಿನ್ ಆಫ್​ ಆಗಿರುವ ಬಸ್​ ಡ್ರೈವರ್​ ಇದ್ದಂತೆ : ಸಿದ್ದರಾಮಯ್ಯ ಗೇಲಿ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಇಂಜಿನ್ ಆಫ್​ ಆಗಿರುವ ಬಸ್​ ಡ್ರೈವರ್​ ಇದ್ದಂತೆ, ಅದಕ್ಕೆ ಇನ್ನೂ ಸರ್ಕಾರ ಟೇಕಾಫ್​ ಆಗಿಲ್ಲ ಎಂದು ಸಿದ್ದರಾಮಯ್ಯ ಇಂದು ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಗೇಲಿ ಮಾಡಿದ್ದಾರೆ.

ಅಧಿವೇಶನದಲ್ಲಿ ಸಿಎಂ ವೈಫಲ್ಯತೆಯ ಕುರಿತು ಮಾತನಾಡಿ, ಇನ್ನೂ ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಎಂಬ ಮಾತೇ ಇಲ್ಲದಂತಾಗಿದೆ . ನಮ್ಮ ಸರ್ಕಾರವನ್ನು ಟೇಕಾಫ್ ಆಗಿಲ್ಲ ಅಂತಾ ಬಿಜೆಪಿ ನಾಯಕರು ಟೀಕಿಸುತ್ತಿದ್ದರು‌. ಆದರೆ, ಈಗ ಯಾವ ಶಾಸಕರನ್ನಾದರೂ ಕೇಳಿ ಯಾರಿಗಾದರೂ ಯಾವುದಾದರೂ ಅನುದಾನ ಬಂದಿದೆಯಾ‌. ಯಾರು ಕೇಳಿದ್ರೂ ಕೊರೊನಾ ಹೆಸರು ನೆಪ ಹೇಳುತ್ತಾರೆ. ದುಡ್ಡಿಲ್ಲ ಎನ್ನುತ್ತಾರೆ‌. ಹಾಗಾದರೆ ಇದ್ದ ಹಣ ಏನಾಯ್ತು?” ಎಂದು ಪ್ರಶ್ನಿಸಿದರು.

ಈ ವರ್ಷದ ಬಜೆಟ್ ಪ್ರಕಾರ 52,000 ಕೋಟಿ ರೂ.ಸಾಲ ಮಾಡಬೇಕಿತ್ತು. ಆದರೆ, 35,000 ಕೋಟಿ ರೂ. ಹೆಚ್ಚುವರಿಯಾಗಿ ತೆಗೆದುಕೊಂಡಿದ್ದೀರಿ. ಸರ್ಕಾರ ಆರ್ಥಿಕ ನಿರ್ವಹಣೆಯಲ್ಲಿ ವಿಫಲವಾಗಲು ಮುಖ್ಯ ಕಾರಣ ಕೇಂದ್ರ ಸರ್ಕಾರ. ಕೇಂದ್ರದ ತೆರಿಗೆ ಬಾಕಿ ಶೇ.39.9ರಷ್ಟು ಕೊರತೆಯಾಗಿದ್ದೇ ಎಲ್ಲ ಸಮಸ್ಯೆಗಳಿಗೆ ಕಾರಣವಾಯ್ತು. ಕೇಂದ್ರ ಪ್ರಾಯೋಜಕತ್ವದ ಗ್ರಾಂಟ್ ಗಳಲ್ಲಿ ಶೇ.24 ಹಾಗೂ ಸ್ಪೆಷಲ್ ಗ್ರಾಂಟ್ 5495 ಕೋಟಿ ರೂ ಏಕೆ ಬರಲಿಲ್ಲ…?” ಎಂದರು.

ಈ ವರ್ಷ ಡಿಸೆಂಬರ್ ವರಗೆ ರಾಜ್ಯ ಸರ್ಕಾರ 63,000 ಕೋಟಿ ರೂ.ಸಾಲ ತೆಗೆದುಕೊಂಡಿದೆ. ಈ ಹಣ ಎಲ್ಲಿ ಹೋಯ್ತು..? ಅಭಿವೃದ್ದಿ ಕಾರ್ಯ ನಡೆಯುತ್ತಿಲ್ಲ. ಆರೋಗ್ಯ ಇಲಾಖೆಯಲ್ಲಿ 1500 ಕೋಟಿ ಮಾತ್ರ ಖರ್ಚಾಗಿದೆ. ಹಾಗಾದರೆ ಉಳಿದ ಹಣ ಎಲ್ಲಿ ಹೋಯ್ತು..?. ಮುಖ್ಯಮಂತ್ರಿ ಯಡಿಯೂರಪ್ಪ ಈವರೆಗೆ ಈ ಹಣಕ್ಕೆ ಲೆಕ್ಕ ಕೊಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.

ಕೇಂದ್ರಕ್ಕೆ ಕರ್ನಾಟಕವೊಂದೇ 2.50ಲಕ್ಷ ಕೋಟಿ ರೂ. ತೆರಿಗೆ ಪಾಲು ನೀಡುತ್ತಿದೆ. ಆದರೆ, ಅದಕ್ಕೆ ಪ್ರತಿಯಾಗಿ ಕರ್ನಾಟಕಕ್ಕೆ ಕೇಂದ್ರದಿಂದ ಬರುತ್ತಿರುವುದು ಎಷ್ಟು? ಪೆಟ್ರೋಲ್ ಸೆಸ್ 23.77ರೂ. ಡೀಸೆಲ್ ಸೆಸ್ 31.84 ರೂ.ಹೆಚ್ಚಳ ಮಾಡಲಾಗಿದೆ. ಇದು ಕೇಂದ್ರ ಸರ್ಕಾರ ಮಾಡುತ್ತಿರುವ ಸುಲಿಗೆ, ಯಾರ ಜೇಬಿಗೆ ಕೇಂದ್ರ ಸರ್ಕಾರ ಕೈ ಹಾಕಿದೆ ಅರ್ಥ ಮಾಡಿಕೊಳ್ಳಿ ಎಂದು ಹೇಳಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರಲ್ ಗೆ 100 ಡಾಲರ್ ಇದ್ದಾಗಲೂ ಪೆಟ್ರೋಲ್ ಬೆಲೆ ಇಷ್ಟೊಂದು ಏರಿಕೆಯಾಗಿರಲಿಲ್ಲ. ಈಗ ಮತ್ತೆ ಪೆಟ್ರೋಲ್ ಮೇಲೆ ಸೆಸ್ ಹಾಕಿದ್ದಾರೆ.  ಅಬಕಾರಿ ಸುಂಕ ಹತ್ತುಪಟ್ಟು ಹೆಚ್ಚಿಸಲಾಗಿದೆ. ಪೆಟ್ರೋಲ್ ಬೆಲೆ 90 ರೂ. ಡೀಸೆಲ್ ಬೆಲೆ 80ರೂ. ಗೆ ಬಂದು ಮುಟ್ಟಿದೆ. ಪೆಟ್ರೋಲ್ ಕಚ್ಚಾ ತೈಲದ ಬೆಲೆ ಬ್ಯಾರಲ್ ಗೆ 50 ಡಾಲರ್ ಗಿಂತ ಕಮ್ಮಿ ಇದೆ. ಆದರೂ ಇಷ್ಟೊಂದು ಪ್ರಮಾಣದಲ್ಲಿ ಬೆಲೆ ಏರಿಕೆ ಏಕೆ? ಎಂದು ಆಕ್ರೋಶ ಹೊರಹಾಕಿದರು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು