NEWSನಮ್ಮರಾಜ್ಯಶಿಕ್ಷಣ-

ಪದವಿ ಕಾಲೇಜಿನಲ್ಲಿ ಶುಲ್ಕ ಹಣ ದುರುಪಯೋಗದ ಶಂಕೆ: ಜಂಟಿ ನಿರ್ದೇಶಕ ನೇತೃತ್ವದ ತಂಡ ಭೇಟಿ ದಾಖಲೆ ಪರಿಶೀಲನೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ವಿದ್ಯಾರ್ಥಿಗಳ ಶುಲ್ಕ ವಿನಾಯಿತಿ ಹಣವನ್ನು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ಮೇರೆಗೆ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಆರ್.ಮುಗೇಶಪ್ಪ ನೇತೃತ್ವದ ತಂಡ ಕಾಲೇಜಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ನಡೆಸಿದರು.

2013-14 ರಿಂದ 2019-20 ನೇ ಸಾಲಿನ ವರೆಗಿನ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಮಂಜೂರಾದ ಹಣವನ್ನು ವಿದ್ಯಾರ್ಥಿಗಳಿಗೆ ತಲುಪಿಸದೆ ಇಲ್ಲಿನ ಆಡಳಿತ ಮಂಡಳಿ ದುರ್ಬಳಕೆ ಮಾಡಿಕೊಂಡಿದರುವ ಬಗ್ಗೆ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಗೆ ಸಾರ್ವಜನಿಕರು ದೂರವಾಣಿಯ ಮೂಲಕ ಮೌಖಿಕ ದೂರು ನೀಡಲಾಗಿತ್ತು.

ಹೀಗಾಗಿ ಕಳೆದ ಜ.29 ರಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಎಚ್.ಎಸ್.ಬಿಂದ್ಯಾ ನೇತೃತ್ವದಲ್ಲಿ ಅಧಿಕಾರಿಗಳು ದಾಖಲೆಗಳನ್ನು ತಪಾಸಣೆ ನಡೆಸಿದಾಗ ಗುಮಾಸ್ತ ಮಹದೇವಯ್ಯ  ಸೂಕ್ತ ದಾಖಲೆ  ಒದಗಿಸಲಿಲ್ಲ. ಆಗ ಕಾಲೇಜಿನ ಪ್ರಾಂಶುಪಾಲರಿಗೆ ಫೆ.2 ವರಗೆ ಗಡುವು ನೀಡಿ ಹೋಗಿದ್ದರು.

ಹೀಗಿದ್ದರೂ ಇಲ್ಲಿನ ಪ್ರಾಂಶುಪಾಲರು ಮತ್ತು ಗುಮಾಸ್ತ ಮಹದೇವಯ್ಯ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಗೆ ಸೂಕ್ತ  ಮಾಹಿತಿ ನೀಡದ ಕಾರಣ ಜಂಟಿ ನಿರ್ದೆಶಕ ಆರ್.ಮುರುಗೇಶಪ್ಪಮತ್ತು ತಂಡ ಭೇಟಿ ನೀಡಿದೆ.

ಈ ಸಂದರ್ಭದಲ್ಲಿ ಹಣಕಾಸಿನ ವ್ಯವಹಾರ ಶಾಖೆಯನ್ನು ನಿರ್ವಹಣೆ ಮಾಡುತ್ತಿದ್ದ ನೌಕರ ಮಹದೇವಯ್ಯ ಗೈ ರಾಗಿದ್ದು ಕಂಡು ಬಂದು ಅವರು ಯಾವುದೇ ಅನುಮತಿ ಪಡೆಯದೆ ಇದ್ದರೂ ಅವರಿಗೆ ಸಿಎಲ್ ಎಂಟ್ರಿ ಮಾಡಿರುವ ಬಗ್ಗೆ ಪ್ರಾಂಶುಪಾಲ ದೇವರಾಜ್ ಅವರನ್ನು ಜಂಟಿ ನಿರ್ದೇಶಕ ಆರ್.ಮುಗೇಶಪ್ಪ ತರಾಟೆಗೆ ತೆಗೆದುಕೊಂಡರು.

ಕಾಲೇಜಿನ ಕೆಲವು ವಿದ್ಯಾರ್ಥಿಗಳಿಗೆ ಹಲವು ಬಾರಿ ಹಣ ಪಾವತಿಸಿರುವ ಬಗ್ಗೆ ಒಂದೇ ಹೆಸರಿನ ವಿದ್ಯಾರ್ಥಿಗಳು ಹಲವು ಜನರು ಇದ್ದಾರೆ ಎಂದು ಪ್ರಾಂಶುಪಾಲರು ಸಮಜಾಯಿಷಿ ನೀಡಿದರು. ಆದರೆ ಬಿಸಿಎಂ ಶುಲ್ಕ ಮರುಪಾವತಿ ಫಲಾನುಭವಿಗಳ ಪಟ್ಟಿಯಲ್ಲಿ ಮತ್ತು ಕಾಲೇಜು ಹಾಜರಾತಿ ಪುಸ್ತಕದಲ್ಲಿ ಒಂದಕ್ಕಿಂತ ಹೆಚ್ಚಿನ ಹೆಸರು ಇರಲಿಲ್ಲ.

2014-15ರಿಂದ 2016ರವರೆಗಿನ ದಾಖಲೆಗಳನ್ನು ಇದುವರೆಗೂ ಬಿಸಿಎಂ ಇಲಾಖೆಗೆ ಮತ್ತು ಜಂಟಿ ನಿರ್ದೇಶಕರ ಕಚೇರಿಗೆ ಏಕೆ ಸಲ್ಲಿಸಿಲ್ಲ ಎಂದು ಪ್ರಶ್ನಿಸಿದರು. ಅಧಿಕಾರಿಗಳ ಪ್ರಶ್ನೆಗೆ ಕಡತಗಳು ಸಿಕ್ಕಿಲ್ಲ ಎಂಬ ಪ್ರಾಂಶುಪಾಲರು ನೀಡಿದ ಉತ್ತರದಿಂದ ಸಮಾಧಾನಗೊಳ್ಳದ ಜಂಟಿ ನಿರ್ದೇಶಕರು ಒಂದು ವಾರದೊಳಗೆ ದಾಖಲೆಗಳನ್ನು ನೀಡಬೇಕು ಇಲ್ಲದಿದ್ದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಸಿಡಿಸಿ ಸದಸ್ಯ ಟಿ.ರಾಜು ನಾಪತ್ತೆಯಾಗಿರುವ ಕಡತಗಳನ್ನು ಉದ್ದೇಶಪೂರ್ವಕವಾಗಿ ಸುಟ್ಟು ಹಾಕಲಾಗಿದೆ ಮತ್ತು ಕೆಲವು ವಿದ್ಯಾರ್ಥಿಗಳ ಹೆಸರಿಗೆ ಹಲವು ಬಾರಿ ಹಣ ದುರುಪಯೋಗ ಪಡಿಸಿಕೊಳ್ಳುವ ಸಲುವಾಗಿ ಚೆಕ್ ನೀಡಲಾಗಿದೆ ಎಂದು ಲಿಖಿತ ದೂರು ನೀಡಿದರು.

ಕಾಲೇಜು ಅಭಿವೃದ್ಧಿಗೆ ಬರುವ ಹಣವನ್ನು ಸಿಡಿಸಿ ಸಮಿತಿಯಿಂದ ಡ್ರಾ ಮಾಡಲು ಶಾಸಕರ ಹೆಸರಿನಲ್ಲಿ ಜಂಟಿ ಖಾತೆ ತೆರೆಯದೆ ಪ್ರಾಂಶುಪಾಲರು ಮಾತ್ರ ತಮ್ಮ ಹೆಸರಿನಲ್ಲಿ ಖಾತೆ ತೆರೆದು ವ್ಯವಹರಿಸುವ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಪುರಸಭೆ ಸದಸ್ಯ ಪ್ರಕಾಶ್ ಸಿಂಗ್ ದೂರಿದರು.

ಪಿರಿಯಾಪಟ್ಟಣದಲ್ಲೂ ನೌಕರಗೆ ಅವಕಾಶ ಕಲ್ಪಿಸಿರುವುದಕ್ಕೆ ಆಕ್ಷೇಪ
ನೌಕರ ಮಹದೇವಯ್ಯ ಫೆ.2ರಿಂದ ಅನಧಿಕೃತವಾಗಿ ಗೈರು ಹಾಜರಾಗುತ್ತಿರುವುದನ್ನು ಗಮನಿಸಿದ್ದು ಕೂಡಲೆ ನೋಟಿಸ್ ಜಾರಿ ಮಾಡುವುದಾಗಿ ಜಂಟಿ ನಿರ್ದೇಶಕರು ತಿಳಿಸಿದರು.

ಮಹದೇವಯ್ಯ ಈ ಹಿಂದೆ ಎಚ್.ಡಿ.ಕೋಟೆಯಲ್ಲಿ ಹಾಸ್ಟೆಲ್ ಉಸ್ತುವಾರಿ ವಹಿಸಿಕೊಂಡಿದ್ದಾಗ ಹಣ ದುರುಪಯೋಗ ಪಡಿಸಿಕೊಂಡಿದ್ದು ತನಿಖೆಯಿಂದ ದೃಢಪಟ್ಟಿದ್ದು ಅವರಿಗೆ ಹಣಕಾಸಿನ ವ್ಯವಹಾರ ಮಾಡಲು ಅವಕಾಶ ಕೊಡಬಾರದು ಎಂದು ಸೇವಾ ಪುಸ್ತಕದಲ್ಲಿ ನಮೂದಿಸಿದ್ದರೂ ಪಿರಿಯಾಪಟ್ಟಣದಲ್ಲಿ ಅವಕಾಶ ಕಲ್ಪಿಸಿರುವುದಕ್ಕೆ ಜಂಟಿ ನಿರ್ದೇಶಕರು ಆಕ್ಷೇಪ ವ್ಯಕ್ತಪಡಿಸಿದರು.

 

ಕಾಲೇಜಿನಲ್ಲಿ ಮೇಲ್ನೋಟಕ್ಕೆ ಹಣ ದುರುಯೋಗವಾಗಿರುವುದು ಕಂಡು ಬಂದಿದ್ದು. ಪೂರ್ಣ ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

l ಹರೀಶ್ ಸಹಾಯಕ ನಿರ್ದೇಶಕ, ಕಾಲೇಜು ಶಿಕ್ಷಣ ಇಲಾಖೆ

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು