NEWSದೇಶ-ವಿದೇಶವಿಜ್ಞಾನ

ಕೋವಿಡ್‌ ಲಸಿಕೆ ತಯಾರಿಸುತ್ತಿರುವ ಭಾರತೀಯ ಕಂಪನಿಗಳ ಹ್ಯಾಕ್‌ ಮಾಡಲು ಯತ್ನಿಸಿದ ಚೀನಾ ಹ್ಯಾಕರ್ಗ‌ಳು

ಸೈ ಫರ್ಮಾದ ಮುಖ್ಯಕಾರ್ಯನಿರ್ವಹಣಾಧಿಕಾರಿ ರೀತೇಶ್‌ ಕುಮಾರ್ ಮಾಹಿತಿ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ದೇಶದ ಕೋವಿಡ್-19 ತಯಾರಿಕಾ ಸಂಸ್ಥೆಗಳಾದ ಭಾರತ್ ಬಯೋಟೆಕ್ ಮತ್ತು ಸೀರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾದ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಹ್ಯಾಕ್‌ ಮಾಡಲು ಚೀನಾ ಸರ್ಕಾರಿ ಬೆಂಬಲಿತ ಹ್ಯಾಕರ್‌ಗಳ ಪ್ರಯತ್ನಿಸಿದ್ದಾರೆ ಎಂದು ಸೈಬರ್ ಗುಪ್ತಚರ ಸಂಸ್ಥೆ ಸೈ ಫರ್ಮಾ ತಿಳಿಸಿದೆ.

ಭಾರತ -ಚೀನಾ ಈ ಎರಡು ದೇಶಗಳು ಕೋವಿಡ್ ಲಸಿಕೆಯನ್ನು ಇತರ ರಾಷ್ಟ್ರಗಳಿಗೆ ಮಾರಾಟ ಹಾಗೂ ಕೊಡುಗೆಯಾಗಿ ನೀಡುತ್ತಿವೆ. ಆದರೆ, ವಿಶ್ವಾದ್ಯಂತ ಮಾರಾಟವಾಗುತ್ತಿರುವ ಎಲ್ಲಾ ಲಸಿಕೆಗಳಲ್ಲಿ ಶೇ.60ಕ್ಕಿಂತ ಹೆಚ್ಚು ಭಾರತದ ಪಾಲಿದೆ.

ಚೀನಾದ ಎಪಿಟಿ 10 ಎಂಬ ಹ್ಯಾಕರಗಳ ತಂಡ ಕಳವು ಮಾಡಲು ಯತ್ನಿಸಿದೆ. ಭಾರತ್ ಬಯೋಟೆಕ್ ಮತ್ತು ಸೀರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾದ ಮೂಲಸೌಕರ್ಯ ಮಾಹಿತಿ ಕದಿಯಲು ಯತ್ನಿಸಿದ ಕೆಲ ಅಂಶಗಳನ್ನು ತಿಳಿದುಕೊಂಡಿದೆ ಎಂದು ಸಿಂಗಾಪುರ ಮತ್ತು ಟೋಕಿಯೋ ಮೂಲದ ಬೆಂಬಲಿತ ಸೈ ಫರ್ಮ ಹೇಳಿದೆ.

ಬೌದ್ಧಿಕ ಆಸ್ತಿಯನ್ನು ಕಳು ಮಾಡುವುದು ಮತ್ತು ಭಾರತೀಯ ಔಷಧಿಯ ಕಂಪನಿಗಳ ವಿರುದ್ಧ ಸ್ಪರ್ಧಾತ್ಮಕ ಲಾಭ ಪಡೆಯುವ ನಿಟ್ಟಿನಲ್ಲಿ ಹ್ಯಾಕರಗಳು ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ಸೈ ಫರ್ಮಾದ ಮುಖ್ಯಕಾರ್ಯನಿರ್ವಹಣಾಧಿಕಾರಿ ರೀತೇಶ್‌ ಕುಮಾರ್ ಹೇಳಿದ್ದಾರೆ.

ರೀತೇಶ್‌ ಕುಮಾರ್ ಈ ಹಿಂದೆ ವಿದೇಶ ಗುಪ್ತಚರ ಸಂಸ್ಥೆ ಎಂ 16 ನಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಎಪಿಟಿ 10 ಯು ನಿರಂತರವಾಗಿ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವನ್ನು ಗುರಿಯಾಗಿಸುತ್ತದೆ ಶ್ರೀರಾಮ್ ಇನ್ಸ್ಟಿಟ್ಯೂಟ್ ಆಫ್ ಅನೇಕ ದೇಶಗಳಿಗೆ ಆಸ್ಟ್ರಾಝೆನೆಕಾ ಲಸಿಕೆ ತಯಾರಿಸುತ್ತಿದ್ದು ಸದ್ಯದಲ್ಲೇ ನಾವ್ಯಾಕ್ಸ್‌ ಲಸಿಕೆ ತಯಾರಿಕೆ ಆರಂಭಿಸಲಿದೆ.

ಸೀರಂ ಇಸ್ಟಿಟ್ಯೂಟ್ ನ ದುರ್ಬಲ ಪಬ್ಲಿಕ್ ವೆಬ್ ಸರ್ವರ್ ಗಳ ಬಗ್ಗೆ ಅವರು ತಿಳಿದುಕೊಂಡಿದ್ದಾರೆ ಎಂದು ಹ್ಯಾಕರಗಳನ್ನು ಉಲ್ಲೇಖಿಸಿ ರಿತೇಶ್ ಮಾಹಿತಿ ನೀಡಿದ್ದಾರೆ.  ಅವರು ದುರ್ಬಲ ವೆಬ್ಸೈಟ್ ಅಪ್ಲಿಕೇಶನ್, ದುರ್ಬಲ ವಿಷಯ ನಿರ್ವಹಣಾ ವ್ಯವಸ್ಥೆಯ ಬಗ್ಗೆಯೂ ಮಾತನಾಡುತ್ತಿದ್ದಾರೆ. ಇದು ಸಾಕಷ್ಟು ಆತಂಕಕಾರಿಯಾಗಿದೆ ಎಂದು ಹೇಳಿದ್ದಾರೆ.

ಆದರೆ, ಈ ವಿಷಯ ಕುರಿತು ಚೀನಾ ವಿದೇಶಾಂಗ ಸಚಿವಾಲಯ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.

Leave a Reply

error: Content is protected !!
LATEST
KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್ ದೆಹಲಿ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಅತಿಶಿ: ಎಎಪಿ ನಾಯಕರ ಸಭೆಯಲ್ಲಿ ನಿರ್ಧಾರ BMTC 1500 ನಿವೃತ್ತ ನೌಕರರ ಗ್ರಾಚ್ಯುಟಿ, EL ಹಣ 400 ಕೋಟಿ ರೂ.ಬಾಕಿ: 16-18 ತಿಂಗಳಿನಿಂದ ಕೇಂದ್ರ ಕಚೇರಿಗೆ ಅಲೆದಾಟ!! ಸುಪ್ರೀಂ ಕೋರ್ಟ್ ಅಧಿಕೃತ  ಭಾಷೆ ಇಂಗ್ಲಿಷ್- ಹಿಂದಿಯಲ್ಲಿ ವಾದಕ್ಕೆ ಅನುಮತಿ ಇಲ್ಲ: ವಕೀಲರಿಗೆ ನೆನಪಿಸಿದ ಕೋರ್ಟ್‌ ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿ ಮಾಡದಂತ ಕಟ್ಟುನಿಟ್ಟಿನ ಕಾನೂನು ಜಾರಿಗೆ ರೈತ ಮುಖಂಡರ ಆಗ್ರಹ KSRTC ಬಸ್‌ -ಕಾರು ನಡುವೆ ಅಪಘಾತ: ಅನಾರೋಗ್ಯದ ನಡುವೆ ಕಾರು ಚಲಾಯಿಸಿದ ಪತಿ ಮೃತ- ಪತ್ನಿ ಪ್ರಾಣಾಪಾಯದಿಂದ ಪಾರು