CrimeNEWSನಮ್ಮಜಿಲ್ಲೆ

ರಮೇಶ್‌ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯಬೇಕು ಎನ್ನುವಷ್ಟು ಟಾರ್ಚರ್‌ ಆಗಿದೆ: ಸಂತ್ರಸ್ತ ಯುವತಿ ಮತ್ತೊಂದು ವಿಡಿಯೋ ಹೊರಕ್ಕೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ವಿವಾದ ಮತ್ತಷ್ಟು ಭುಗಿಲೇಳುತ್ತಿದ್ದು, ಈ ನಡುವೆ ಸತ್ರಸ್ತ ಯುವತಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ. ನಮ್ಮ ತಂದೆ, ತಾಯಿ ಅವರಿಗೆ ಸೂಕ್ತ ರಕ್ಷಣೆ ಇಲ್ಲ. ರಕ್ಷಣೆಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಬಿಡುಗಡೆಯಾಗಿರುವ ವಿಡಿಯೋದಲ್ಲಿ ಮಾತನಾಡಿರುವ ಆಕೆ ನನಗೆ ಬದುಕಬೇಕೋ ಅಥವಾ ಸಾಯಬೇಕೋ ಎಂದು ಗೊತ್ತಾಗುತ್ತಿಲ್ಲ. ಯಾವುದೇ ಮಾಹಿತಿ ಸಿಕ್ಕರೂ ಅದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬುದನ್ನು ಪರಿಶೀಲಿಸಿ ಪ್ರಸಾರ ಮಾಡಬೇಕು.

ಸಿಡಿ ಬಿಡುಗಡೆಯಾದ ದಿನ ನನಗೆ ಏನು ಮಾಡಬೇಕು, ಎಲ್ಲಿಗೆ ಹೋಗಬೇಕು, ಯಾರು ಇದನ್ನು ಮಾಡಿದ್ದು ಎಂಬ ಐಡಿಯಾ ಸಹಾಯ ಇರಲಿಲ್ಲ. ಈ ನಡುವೆ ಮಾಧ್ಯಮದಲ್ಲಿ ತುಂಬಾ ಪರಿಚಯವಾಗಿದ್ದ ನರೇಶ್‌ ಎಂಬುವರಿಗೆ ಕರೆ ಮಾಡಿ ನನ್ನ ಸಮಸ್ಯೆ ಹೇಳಿಕೊಂಡೆ. ನೀವು ನ್ಯಾಯ ಕೊಡಿಸುತ್ತೇನೆ ಎಂದು ಹೇಳಿದ ಬಳಿಕ ಏನೆಲ್ಲಾ ಆಗಿದೆ ನೋಡಿ ಅಣ್ಣ ಎಂದು ಹೇಳಿದೆ.

ಈ ವಿಚಾರದಲ್ಲಿ ನಾನು ಚಿಕ್ಕವನು ಇದಕ್ಕೆ ರಾಜಕೀಯ ಬೆಂಬಲ ಬೇಕಾಗುತ್ತದೆ. ನಾವು ಹೋಗಿ ದೊಡ್ಡ ದೊಡ್ಡ ನಾಯಕರ ಬಳಿ ಮಾತನಾಡೋಣ. ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್ ಬಳಿ ಮಾತನಾಡೋಣ. ನಿನಗೆ ನ್ಯಾಯ ಸಿಗುತ್ತದೆ ಯೋಚನೆ ಮಾಡಬೇಡ ಎಂದು ನರೇಶಣ್ಣ ಧೈರ್ಯ ಹೇಳಿದರು. ನಾನಿರುವ ಸ್ಥಳಕ್ಕೆ ಬಂದು ಡಿಕೆಶಿ ಮನೆಗೆ ಕರೆದೊಯ್ದರು ಅಷ್ಟರಲ್ಲಿ ನಮ್ಮ ಮನೆಯಿಂದ ನನಗೆ ಸಾಕಷ್ಟು ಕರೆಗಳು ಬರುತ್ತಿದ್ದವು.

ನಮ್ಮ ಮನೆಯಲ್ಲಿ ಎಲ್ಲರೂ ಹೆದರಿಕೊಂಡಿದ್ದರು. ನಾನು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆ. ಈ ನಡುವೆ ಡಿಕೆಶಿ ಮನೆಗೆ ಹೋಗುತ್ತಿರುವ ಬಗ್ಗೆಯೂ ಅವರ ಮಬಳಿ ಹೇಳಿದೆ. ಆದರೆ ಅಂದು ಅವರು ಸಿಗಲಿಲ್ಲ. ಅಂದು ತಂದೆ-ತಾಯಿ ಹೆದರಿದ್ದರು. ಈಗ ಆಡಿಯೋ ಕ್ಲಿಪ್‌ ಹೊರಬಂದಿರುವುದು ನೋಡಿದರೆ ನಮ್ಮ ಅಪ್ಪ ಅಮ್ಮಗೆ ಸುರಕ್ಷತೆ ಇಲ್ಲ ಎಂಬುದು ತಿಳಿಯುತ್ತದೆ. ನಾನು ಸೇಫ್ ಆಗಿದ್ದೇನೆ ನನ್ನ ಯಾರು ಅಪಹರಿಸಿಲ್ಲ.

ನಾನು ಎಸ್ಐಟಿ ಅವರಲ್ಲಿ ಕೇಳಿಕೊಳ್ಳುವುದೇನೆಂದರೆ ನಾವು ರಕ್ಷಣೆ ಕೊಡ್ತೀವಿ ಎಂದು ಹೇಳುತ್ತಿದ್ದೀರಾ.. ಹೌದು! ನೀವು ರಕ್ಷಣೆ ಕೊಡುತ್ತಿದ್ದೀರಾ. ಆದರೆ ನಮ್ಮ ತಂದೆ ತಾಯಿ ಮತ್ತು ಇಬ್ಬರು ತಮ್ಮಂದಿರನ್ನೂ ಬೆಂಗಳೂರಿಗೆ ಕರೆ ತನ್ನಿ. 24 ದಿನದಿಂದ ನನಗೆ ತುಂಬಾ ಕಿರುಕುಳವಾಗುತ್ತಿದೆ. ನಾನು ಏನು ಹೇಳಿದರೆ ಇನ್ನೇನು ಆಗುತ್ತೆ. ನನ್ನ ಮಾನ ಮರ್ಯಾದೆ ಹೋಗಿದೆ. ನಾನು ಒಬ್ಬಳು ಸಂತ್ರಸ್ತೆ ಆಗಿರುವುದರಿಂದ ನನಗೆ ನೀವು ನ್ಯಾಯ ಕೊಡಿಸುತ್ತೀರಾ ಎಂದು ಭಾವಿಸಿದ್ದೇನೆ.

ಸರ್ಕಾರವನ್ನೇ ಬೆಳೆಸುತ್ತೇನೆ. ಎಷ್ಟು ದುಡ್ಡು ಖರ್ಚಾದರೂ ಸರಿ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕುವವರು ನಮ್ಮ ಅಪ್ಪ-ಅಮ್ಮನನ್ನು ಸುಮ್ಮನೆ ಬಿಡುತ್ತಾರಾ? ನಾಳೆ ಏನು ಬೇಕಾದರೂ ನಡೆಯಬಹುದು. ನನ್ನನ್ನು ಸಾಯಿಸಬಹುದು. ಹೀಗಾಗಿ ನಮ್ಮ ಅಪ್ಪ-ಅಮ್ಮನನ್ನು ಬೆಂಗಳೂರಿಗೆ ಕರೆತಂದು ಇರಿಸಬೇಕು. ನಾನೇನು ಹೇಳಿಕೆ ಕೊಡಬೇಕೆಂದರೆ ಅಪ್ಪ-ಅಮ್ಮ ನನ್ನ ಇಬ್ಬರು ತಮ್ಮಂದಿರು ಮತ್ತು ನಮ್ಮ ಅಜ್ಜಿ ಕಣ್ಣಮುಂದಿರಬೇಕು.

ಈಗ ಅವರಿಗೆ ರಕ್ಷಣೆ ಇಲ್ಲ ಅನಿಸುತ್ತಿದೆ. ನನಗೆ ಕೊಡುತ್ತಿರುವ ಕಿರುಕುಳಕ್ಕೆಬದುಕಬೇಕೋ ಅಥವಾ ಸಾಯಬೇಕೋ ಎನಿಸುತ್ತಿದೆ. ರಮೇಶ್‌ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯಬೇಕು ಎನ್ನುವಷ್ಟು ಕಿರುಕುಳವಾಗಿದೆ. ಎಲ್ಲಾ ಜನತೆಗೆ ನಾನು ಕೇಳಿಕೊಳ್ಳುವುದಿಷ್ಟೆ ನನಗೆ ನ್ಯಾಯ ಕೊಡಿಸಿ ಎಂದು ಸಂತ್ರಸ್ತ ಯುವತಿ ವಿಡಿಯೋದಲ್ಲಿ ಹೇಳಿದ್ದಾರೆ.

Leave a Reply

error: Content is protected !!
LATEST
APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ