Please assign a menu to the primary menu location under menu

CrimeNEWSನಮ್ಮರಾಜ್ಯ

ಸಿಡಿ ಸಂತ್ರಸ್ತೆ ಪರ ವಕೀಲರು ಕಿಡಿಕಾರಿದ್ದು ಯಾವ ಬಿಜೆಪಿ ಮುಖಂಡ, ಪೊಲೀಸ್‌ ಅಧಿಕಾರಿ ವಿರುದ್ಧ ಗೊತ್ತೇ?

1.59KViews
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧಿಗಳಿಂದ ನನ್ನ ವಿರುದ್ಧ ದಾಳಿ ಶುರುವಾಗಿದೆ. ಜಗದೀಶ್‌ ಕುಮಾರ್ ಒಬ್ಬ ರೌಡಿಶೀಟರ್, ಅವರ ಜೀವನವೇ ಸರಿಯಿಲ್ಲ ಎಂದು ಪೊಲೀಸರು, ರಾಜಕಾರಣಿಗಳು ಆರೋಪ ಮಾಡುತ್ತಿದ್ದಾರೆ ಎಂದು ಸಂತ್ರಸ್ತೆ ಪರ ವಕೀಲ ಜಗದೀಶ್ ಫೇಸ್‌ಬುಕ್‌ ಲೈವ್‌ ವಿಡಿಯೋದಲ್ಲಿ ಕಿಡಿಕಾರಿದ್ದಾರೆ.

11 ವರ್ಷಗಳ ಹಿಂದಿನ ಸಂಗತಿಗಳನ್ನು ಬಿಚ್ಚಿಟ್ಟಿರುವ ಅವರು ಬಿಜೆಪಿ ಮುಖಂಡ, ಪೊಲೀಸ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಪದೇಪದೇ ನಂದಿ ಅಲ್ಲ ಜಗದೀಶ. ಯೂನಿಫಾರಂ ಹಾಕಿಕೊಂಡ ಕೇಡಿಗಳ ದಾಖಲೆ ಎಲ್ಲಾ ನಮ್ಮ ಬಳಿ ಇದೆ. ಭ್ರಷ್ಟ ಪಿಸಿ, ಭ್ರಷ್ಟ ಐಪಿಎಸ್‌, ಭ್ರಷ್ಟ ಮಂತ್ರಿಯಾದರೂ ಬಿಡಲ್ಲ ಎಂದಿದ್ದಾರೆ ಜಗದೀಶ್.

2010ರಲ್ಲಿ ನಾನು ಒಬ್ಬ ಹೋರಾಟಗಾರನಾಗಿದ್ದೆ ಆ ವೇಳೆ ಕೊಡಿಗೇಹಳ್ಳಿಯಲ್ಲಿ ಅಂಗವಿಕಲರಿಗೆ ಮೀಸಲಾಗಿದ್ದ ಬಡಬಗ್ಗರ ಜಮೀನನ್ನು ಕಂದಾಯ ಸಚಿವ ಆರ್. ಅಶೋಕ್ ಸಂಬಂಧಿಕರು ಖರೀದಿ ಮಾಡಿದ್ದರು. ಈ ಬಗ್ಗೆ ನಾನು ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕೆ ಅಲ್ಲಿನ ಇನ್ಸ್ಪೆಕ್ಟರ್ ಪುನೀತ್ ಮತ್ತು ಡಿಸಿಪಿ ರವಿಕಾಂತೇಗೌಡ ನನ್ನ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿದರು ಎಂದು ಫೇಸ್ಬುಕ್ ವಿಡಿಯೋದಲ್ಲಿ ಪ್ರಕರಣಗಳ ಕುರಿತಂತೆ ವಿವರಣೆ ಕೊಟ್ಟಿದ್ದಾರೆ.

ಇಷ್ಟೇ ಅಲ್ಲ ಇದರಿಂದ ನನ್ನ ಕುಟುಂಬವನ್ನು ಒಡೆಯುತ್ತಾರೆ, ನಾನು ಎಲ್‌ಎಲ್‌ಬಿ ಓದುವಾಗಲೇ ಆ ಎಲ್ಲ ಪ್ರಕರಣಗಳನ್ನು ಖುಲಾಸೆ ಮಾಡಿಕೊಂಡೆ. ನನ್ನನ್ನು ದುರ್ಬಲಗೊಳಿಸಲು ಹೊರಟಿದ್ದ ಪೊಲೀಸ್ ಅಧಿಕಾರಿಗಳ ಅಕ್ರಮಗಳ ದಾಖಲೆಗಳನ್ನು ಎಳೆಎಳೆಯಾಗಿಗಿ ತೆರೆದಿದ್ದೇನೆ. ಐಪಿಎಸ್ ಅಧಿಕಾರಿಗಳ ದಾಖಲೆ ನನ್ನ ಬಳಿ ಇವೆ. ನಿಮ್ಮ ಯೋಗ್ಯತೆಯನ್ನು ಈ ಮೂಲಕ ತೋರಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಕೊಡಿಗೇಹಳ್ಳಿ ಮಾಜಿ ಕಾರ್ಪೊರೇಟರ್ ನನ್ನ ವಿರುದ್ಧ 13 ಕೇಸ್‌ ಹಾಕಿದ್ದರು. ಅವರು ಬಿಜೆಪಿಯ ಮಾಜಿ ಕಾರ್ಪೊರೇಟರ್. ಈ ಬಗ್ಗೆ ಬಿಜೆಪಿ ಉತ್ತರಿಸುತ್ತಾ ಎಂದು ಪ್ರಶ್ನಿಸಿದರು. ಕೆ.ಎನ್‌. ಚಕ್ರಪಾಣಿ ಮನೆಯ ಪಕ್ಕದ ಲೋಕಕಲ್ಯಾಣ ಟ್ರಸ್ಟ್ ಭೂಮಿಯನ್ನು ನುಂಗಿ ಹಾಕಿದರು. ಸರ್ಕಾರಿ ಭೂಮಿ ಬಿಡಿ, ಅಂಗವಿಕಲರ ಜಾಗವನ್ನು ಬಿಡಲಿಲ್ಲ. ಇಂತಹ ಅನ್ಯಾಯದ ವಿರುದ್ಧ ಹೋರಾಡಿದ್ದೇನೆ. ಐಪಿಎಸ್ ಅಧಿಕಾರಿ ಇದ್ದಾನೆ ಅವನ ಹೆಸರು ಹೇಳುವುದಕ್ಕೆ ನನಗೆ ನಾಚಿಕೆ ಆಗುತ್ತೆ. ಅವರು ಭ್ರಷ್ಟ ವ್ಯವಸ್ಥೆಯ ಸಚಿವರಿಗೆ ಹೋರಾಟಗಾರರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿದ್ದರು ಎಂದು ಕಿಡಿಕಾರಿದರು.

ಮಾಜಿ ಕಾರ್ಪೊರೇಟರ್ ಅಶ್ವತ್ಥ ನಾರಾಯಣಗೌಡ ಎಲ್ಲ ಪ್ರಕರಣದ ರೂವಾರಿ. ನನ್ನ ಮೇಲೆ ಯಾವುದೇ ಕೊಲೆ, ವಂಚನೆ ಪ್ರಕರಣ ಇಲ್ಲ. ಆದರೂ ಮಾನಹಾನಿ ಮತ್ತು ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿದ್ದರು. ನನ್ನ ವಿರುದ್ಧ ಎರಡು-ಮೂರು ದಿನಗಳಲ್ಲಿ ರೌಡಿಶೀಟರ್ ಓಪನ್ ಮಾಡಿದ ಮಹಾನ್ ಭ್ರಷ್ಟ, ನಾಯಕ ಈಗ ಸಂತ್ರಸ್ತೆಯ ವಕೀಲರು ರೌಡಿಶೀಟರ್ ಅಂತ ಹೇಳುತ್ತಿದ್ದಾನೆ ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...