ಎಸ್‌ಐಟಿ ಅಧಿಕಾರಿಗಳಿಂದ ಸಂತ್ರಸ್ತ ಯುವತಿ ಇದ್ದ R T ನಗರ ಪಿಜಿ ಸ್ಥಳ ಪರಿಶೀಲನೆ
ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಇದ್ದ ಆರ್.ಟಿ.ನಗರದ ಪಿಜಿಯಲ್ಲಿ ಸ್ಥಳ ಮಹಜರು ಮಾಡಲಾಗುತ್ತಿದೆ.
ಇಂದು ಬೆಳಗ್ಗೆ 10ಗಂಟೆಗೆ ಪಿಜಿಗೆ ಯುವತಿಯೊಂದಿಗೆ ಆಗಮಿಸಿದ ಎಸ್‌ಐಟಿ ಅಧಿಕಾರಿಗಳು ಪೊಲೀಸ್ ಬಿಗಿ ಭದ್ರತೆಯಲ್ಲಿ ಸ್ಥಳ ಮಹಜರ್ ಮಾಡುತ್ತಿದ್ದು, ಇದೇ ವೇಳೆ ಯುವತಿಗೆ ಕೆಲ ಪ್ರಶ್ನೆಗಳನು ಕೇಳುತ್ತಿದ್ದಾರೆ.
ಅದರಲ್ಲಿ ಕೆಲವು ಮುಖ್ಯವಾಗಿ ನಿಮ್ಮೊಂದಿಗೆ ಪಿಜಿಯಲ್ಲಿ ಯಾರು ಇದ್ದರು. ನೀವು ಒಬ್ಬರೆ ಇದಿದ್ದಾ? ಇಲ್ಲಿ ಸುಮಾರು 9-10 ಲಕ್ಷ ರೂ. ಸಿಕ್ಕಿದ್ದು ಈ ಬಗ್ಗೆ ಏನು ಹೇಳುತ್ತೀರಾ? ಇನ್ನು ಇಲ್ಲಿಗೆ ಯಾರೆಲ್ಲ ನಿಮ್ಮನ್ನು ಭೇಟಿಯಾಗಲು ಬರುತ್ತಿದ್ದರು ಎಂಬುವುದು ಸೇರಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ.
ಇನ್ನು ಯುವತಿ ಅಧಿಕಾರಿಗಳು ಕೇಳುತ್ತಿರುವ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಆರ್.ಟಿ.ನಗರ ಪಿಜಿಯಲ್ಲಿ ಸ್ದಳ ಮಹಜರ್ ಮುಗಿದ ಬಳಿಕ ಮಲ್ಲೇಶ್ವರಂನಲ್ಲಿರುವ ಮಂತ್ರಿ ಅಪಾರ್ಟ್‌ಮೆಂಟ್‌ನಲ್ಲೂ ಸ್ಥಳ ಮಹಜರ್ ಮಾಡಲಾಗುವುದು. ಈ ಅಪಾರ್ಟ್‌ಮೆಂಟ್‌ನಲ್ಲಿ ಮಾಜಿ ಮಂತ್ರಿ ಇದ್ದರು. ಈ ವೇಳೆ 3-4 ಬಾರಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಯುವತಿ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಈ ಸ್ಥಳ ಪರಿಶೀಲನೆಗೆ ಅಧಿಕಾರಿಗಳು ತೆರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಒಟ್ಟಾರೆ ಇಂದು ಯುವತಿಯ ಎಲ್ಲ ಹೇಳಿಕೆಗಳನ್ನು ದಾಖಲಿಸುವ ಹಂತವನ್ನು ಎಸ್‌ಐಟಿ ಅಧಿಕಾರಿಗಳು ತಲುಪಿದ್ದು, ಬಹುತೇಕ ಮೂರು ಕಡೆಗಳನ್ನೂ ಸ್ಥಳ ಮಹಜರ್ ಮಗುಯಲಿದೆ ಎಂದು ತಿಳಿದು ಬಂದಿದೆ.