Please assign a menu to the primary menu location under menu

NEWSರಾಜಕೀಯ

ನನ್ನ ವಿರುದ್ಧ ಏನೇ ದೂರು ನೀಡಲಿ, ಯಾವುದಕ್ಕೂ ಜಗ್ಗುವುದಿಲ್ಲ: ಈಶ್ವರಪ್ಪ ಖಡಕ್‌ ಮಾತು

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ನನ್ನ ವಿರುದ್ಧ ಬೇಕಾದರೆ ಶಾಸಕರ ಸಹಿ ಸಂಗ್ರಹ ಮಾಡಲಿ. ನನಗೂ ಬೆಂಬಲ ಇದೆ. ನನ್ನ ವಿರುದ್ಧ ಏನೇ ದೂರು ನೀಡಲಿ, ಯಾವುದಕ್ಕೂ ಜಗ್ಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಖಡಕ್ಕಾಗಿ ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುದಾನ ಹಂಚಿಕೆಯಲ್ಲಿ ಸಿಎಂಗೆ ಪರಮಾಧಿಕಾರ ಇರಬಹುದು. ಆದರೆ, ಬಜೆಟ್​ನಲ್ಲಿ ಬಿಡುಗಡೆ ಆದ ಹಣ ಇಲಾಖೆಗೆ ಬಂದ ಬಳಿಕ ಅದು ಆ ಇಲಾಖೆಯ ಸಚಿವರಿಗೆ ಬಿಟ್ಟಿದ್ದು. ಸಚಿವರ ಗಮನಕ್ಕೆ ತಾರದೇ ಶಾಸಕರಿಗೆ ಆ ಅನುದಾನ ಹಂಚಿಕೆ ಮಾಡಿದ್ದು ಸರಿಯಲ್ಲ. ಹೀಗಾಗಿ, ರಾಜ್ಯಪಾಲರ ಸಲಹೆ ಪಡೆಯಲು ಯತ್ನಿಸಿದೆನೇ ಹೊರತು ಅವರ ವಿರುದ್ಧ ದೂರು ಕೊಟ್ಟಿಲ್ಲ ಎಂದರು.

ತಾನು ಯಡಿಯೂರಪ್ಪ ವಿರುದ್ಧ ದೂರು ನೀಡಲು ರಾಜ್ಯಪಾಲರ ಬಳಿಗೆ ಹೋಗಿದ್ದೆ ಎಂಬ ಮಾತನ್ನು ಅಲ್ಲಗಳೆದ ಅವರು, ಅನುದಾನ ವಿಚಾರದಲ್ಲಿ ನಿಯಮ ಮೀರಿದ್ದು ಕಂಡು ಬಂದಿತ್ತು. ರಾಜ್ಯಪಾಲ ವಜುಭಾಯ್ ರೂಢಭಾಯಿ ವಾಲಾ ಅವರು ಗುಜರಾತ್ ಸರ್ಕಾರದಲ್ಲಿ 9 ವರ್ಷ ಹಣಕಾಸು ಸಚಿವರಾಗಿದ್ದವರು. ಅನುದಾನ ವಿಚಾರದ ಬಗ್ಗೆ ಅವರ ಗಮನಕ್ಕೆ ತಂದು ಸರಿಯೋ ತಪ್ಪೋ ಎಂದು ಸಮಾಲೋಚನೆ ಮಾಡಲು ಹೋಗಿದ್ದೆ ಎಂದು ತಿಳಿಸಿದರು.

ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ನಾನು ಪಕ್ಷದ ನಿಷ್ಠಾವಂತನಾಗಿ ವಿರೋಧ ಮಾಡಿದ್ದೆ. ಬೇಡ ಎಂದು ಸಲಹೆ ನೀಡಿದ್ದೆ. ಆದರೂ ಕೆಲವರ ಮಾತು ಕೇಳಿ ಕೆಜೆಪಿ ಕಟ್ಟಿದರು. ಆದರೆ, ಅವರು ವಾಪಸ್ ಬಿಜೆಪಿಗೆ ಬರಲು ನಾನೂ ಒಬ್ಬ ಕಾರಣನಾಗಿದ್ದೆ. ನಾನು ಸಂಘಟನೆಗೆ ನಿಷ್ಠನಾದವನು. ನಾನು ಯಾವತ್ತಿದ್ದರೂ ರೆಬೆಲ್ ಅಲ್ಲ. ಪಕ್ಷಕ್ಕೆ ನಿಷ್ಠನಾದವನು ಎಂದು ಹೇಳಿದರು.

ಇನ್ನು ನಾನು ಮತ್ತು ಯಡಿಯೂರಪ್ಪ ಬಹಳ ವರ್ಷಗಳಿಂದ ಒಟ್ಟಿಗೆ ಹೋರಾಟ ಮಾಡಿ ಬಂದವರು. ಒಂದೇ ತಟ್ಟೆಯಲ್ಲಿ ಊಟ ಮಾಡಿದವರು. ನಮ್ಮ ಮಧ್ಯೆ ಕೆಲ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದೆಯಾದರೂ ನಾವು ಯಾವತ್ತಿದ್ದರೂ ಒಂದೆಯೇ. ಅವರು ಈಗಲೂ ನನಗೆ ಮುಖ್ಯಮಂತ್ರಿಯೇ. ಅವರ ಮೇಲೆ ನನಗೆ ಯಾವುದೇ ವೈಯಕ್ತಿಕ ಮುನಿಸಿಲ್ಲ. ತಮ್ಮ ಸುತ್ತಮುತ್ತಲ ಜನರ ಮಾತನ್ನು ಅವರು ನಂಬಿದ್ಧಾರೆ. ಈಗ ನನಗೆ ಅನುದಾನದ ವ್ಯವಸ್ಥೆ ಸರಿಯಾಗಬೇಕೆಂಬ ಉದ್ದೇಶ ಮಾತ್ರ ಎಂದು ತಿಳಿಸಿದರು.

Leave a Reply

error: Content is protected !!
LATEST
KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋ... KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌ KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!? BBMP- ₹2 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ : ಆಯುಕ್ತ ತುಷಾರ್ ಗಿರಿನಾಥ್ ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್‌ ಸಮಾವೇಶ ಚನ್ನರಾಯಪಟ್ಟಣ ರೈತ ನಿಯೋಗದಿಂದ ಸಿಎಂ ಭೇಟಿ: ಭೂ ಸ್ವಾಧೀನ ಕೈಬಿಡಲು ಮನವಿ KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..! ಇ-ಖಾತಾ ಕಾಲಮಿತಿಯೊಳಗೆ ಅಧಿಕಾರಿಗಳು ವಿಲೇಮಾಡಿ: ತುಷಾರ್ ಗಿರಿನಾಥ್