Please assign a menu to the primary menu location under menu

NEWSನಮ್ಮರಾಜ್ಯರಾಜಕೀಯ

ಪಟ್ಟು ಸಡಿಲಿಸದ ಸಾರಿಗೆ ನೌಕರರು: ಹಠ ಬಿಡದ ಸರ್ಕಾರ- ಮೂರನೇ ದಿನವೂ ಮುಂದುವರಿದ ಮುಷ್ಕರ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮೂರನೇ ದಿನವೂ ಮುಂದುವರಿದಿದ್ದು, ಎರಡನೇ ದಿನವಾದ ನಿನ್ನೆ ಹಲವು ಚಾಲಕರು ಮತ್ತು ನಿರ್ವಾಹಕರು ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಊಹಾಪೋಹಾಗಳು ಎಲ್ಲೆಡೆ ಹರಿದಾಡಿದವು. ಈನಡುವೆ ಡಿಪೋ ಒಂದರ ಮ್ಯಾನೇಜರ್‌ ಚಾಲಕರಾಗಿ ಮತ್ತು ಎಟಿಎಸ್‌ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿದ್ದರು.

ಆದರೆ, ಇವರೆ ಸಾರಿಗೆ ನೌಕರರು ಎಂದು ಕೆಲ ಮಾಧ್ಯಮಗಳು ಬಿಂಬಿಸಿ ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ ಎಂದು ಸುದ್ದಿ ಪ್ರಸಾರಮಾಡಿದವು. ಅದರೆ ಅದರ ಸತ್ಯ ಶೋಧನೆಗೆ ಇಳಿದ ವಿಜಯಪಥಕ್ಕೆ ಅದು ಸುಳ್ಳು ಎಂಬುವುದು ತಿಳಿಯಿತು. ಇನ್ನು ಕೆಲ ನೌಕರರನ್ನು ಅವರ ಮೇಲೆ ಹಿಂದೆ ಇರುವ ಕೆಲ ಪ್ರಕರಣಗಳನ್ನು ವಜಾ ಮಾಡುತ್ತೇವೆ ನೀವು ಕೆಲಸಕ್ಕೆ ಬನ್ನಿ ಎಂದು ಬಲವಂತವಾಗಿ ಕರ್ತವ್ಯಕ್ಕೆ ಕರೆತಂದಿದ್ದಾರೆ. ಅದು ಶೇ.001 ರಷ್ಟು ಮಂದಿ ನೌಕರರು ಮಾತ್ರ ಎಂಬುವುದು ಸ್ಪಷ್ಟವಾಗಿದೆ.

ಕೆಲವು ನೌಕರರು ತಮ್ಮನ್ನು ಒತ್ತಾಯಪೂರ್ವಕವಾಗಿ ಕೆಲಸಕ್ಕೆ ಕರೆಸಿಕೊಂಡಿದ್ದಾರೆ ಎಂದು ಹೇಳಿದರೆ, ಇನ್ನು ಕೆಲವರು ಪ್ರಯಾಣಿಕರು ಸಾಮಾನ್ಯ ಜನತೆ ಕಷ್ಟಪಡುವುದು ನೋಡಲಾರದೆ ಕೆಲಸಕ್ಕೆ ಮರಳಿರುವುದಾಗಿ ಹೇಳಿದ್ದಾರೆ ಎಂದು ಸುದ್ದಿಯಾಗುತ್ತಿಗುತ್ತಿದೆ. ಇದು ಸುಳ್ಳು ಇದರ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳಬೇಡಿ ಎಂದು ಕರ್ನಾಟಕ ರಸ್ತೆಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದ್ದಾರೆ.

ಸಾರಿಗೆ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ, ನಾಲ್ಕೂ ನಿಗಮಗಳಿಗೆ ಸೇರಿದ 446 ಬಸ್‌ಗಳು ನಿನ್ನೆ ಸಂಚಾರ ಆರಂಭಿಸಿದವು. ಸರ್ಕಾರ ಪ್ರಯಾಣಿಕರಿಗೆ ಬದಲಿ ಸಂಚಾರ ಕ್ರಮವಾಗಿ ಸುಮಾರು 4,412 ಖಾಸಗಿ ಬಸ್‌ಗಳನ್ನು ರಾಜ್ಯ ರಸ್ತೆ ಸಾರಿಗೆಗೆ ಪಡೆದಿದ್ದು, ಅವುಗಳಲ್ಲಿ 2,188 ವಾಯವ್ಯ ಸಾರಿಗೆಗೆ, ಉಳಿದ ಬಸ್‌ಗಳನ್ನು ಈಶಾನ್ಯ ಸಾರಿಗೆಗೆ ಸೇರಿಸಿಕೊಂಡಿತ್ತು.

ತಮಿಳು ನಾಡಿನಿಂದ 524 ಬಸ್‌ಗಳು, ಆಂಧ್ರ ಪ್ರದೇಶದಿಂದ 299, ತೆಲಂಗಾಣದಿಂದ 25 ಮತ್ತು ಕೇರಳದಿಂದ 30 ಬಸ್‌ಗಳು ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ಪ್ರಯಾಣಿಕರನ್ನು ಹೊತ್ತು ಸಂಚರಿಸಿವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ವಾಸ್ತವದಲ್ಲಿ ಇಷ್ಟು ಬಸ್‌ಗಳು ರಸ್ತೆಗೆ ಇಳಿದಿಲ್ಲ ಎಂದು ನೌಕರರು ಹೇಳುತ್ತಿದ್ದಾರೆ.

ಆದರೂ ಸರ್ಕಾರ ಕೊಂಟ್ಯಂತರ ರೂ. ಲಾಸ್‌ ಮಾಡಿಕೊಂಡು ನೌಕರರ ಬೇಡಿಕೆಈಡೇರಿಕೆಗೆ ಸ್ಪಂದಿಸದೆ ಈರೀತಿ ಮೊಂಡುತನ ಪ್ರದರ್ಶಿಸುತ್ತಿರುವುದಕ್ಕೆ ಸಾಮಾನ್ಯ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಾರಿಗೆ ಇಲಾಖೆ ನೌಕರರ ಒಕ್ಕೂಟ ತಮ್ಮ ಬಿಗಿ ಪಟ್ಟನ್ನು ಮುಂದುವರಿಸಿದ್ದು ಅಧಿಕಾರಿಗಳು ಅವರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು. ನಿನ್ನೆ ಸಭೆ ನಡೆಸಿದ ಒಕ್ಕೂಟ ಮುಷ್ಕರ ಅನಿರ್ದಿಷ್ಟಾವಧಿಗೆ ಮುಂದೂಡುವುದಾಗಿ ತಿಳಿಸಿದೆ.

Leave a Reply

error: Content is protected !!
LATEST
KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋ... KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌ KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!? BBMP- ₹2 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ : ಆಯುಕ್ತ ತುಷಾರ್ ಗಿರಿನಾಥ್ ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್‌ ಸಮಾವೇಶ ಚನ್ನರಾಯಪಟ್ಟಣ ರೈತ ನಿಯೋಗದಿಂದ ಸಿಎಂ ಭೇಟಿ: ಭೂ ಸ್ವಾಧೀನ ಕೈಬಿಡಲು ಮನವಿ KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..! ಇ-ಖಾತಾ ಕಾಲಮಿತಿಯೊಳಗೆ ಅಧಿಕಾರಿಗಳು ವಿಲೇಮಾಡಿ: ತುಷಾರ್ ಗಿರಿನಾಥ್