ಅರ್ಥ ಅಪಾರ್ಥಗಳ ನಡುವೆ: ಕೋಡಿಹಳ್ಳಿ ಅವರ ಪತ್ರಿಕಾ ಹೇಳಿಕೆಗೆ ಸ್ಪಷ್ಟೀಕರಣ ಕೊಟ್ಟ ಗೃಹ ಸಚಿವರು
ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸಾರಿಗೆ ನೌಕರರು 6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟ ಇಂದು 13ನೇ ದಿನ ಪೂರೈಸಿದ್ದು, ಈ ನಡುವೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ನೌಕರರ ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರ ಶೇಖರ್ ಅವರೊಂದಿಗೆ ಮುಷ್ಕರ ಕೈಬಿಡುವ ಸಂಬಂಧ ಮಾತನಾಡಿದ್ದು, ಈ ಇಬ್ಬರ ನಡುವೆ ನಡೆದ ಮಾತುಕತೆಯಲ್ಲಿ ಸಚಿವರು ಯಾವ ಭರವಸೆಯನ್ನು ಕೊಟ್ಟಿಲ್ಲ.
ಅದನ್ನೇ ಕೋಡಿಹಳ್ಳಿ ಚಂದ್ರಶೇಖರ್ ಅವರು ಹೇಳಿದ್ದಾರೆ. ಆದರೆ ಕೋಡಿಹಳ್ಳಿ ಅವರು ಪತ್ರಿಕಾ ಹೇಳಿಕೆ ನೀಡಿದಂತೆ ನಾನು ಮುಷ್ಕರ ಮುಂದುವರಿಸಿ ಎಂದು ಹೇಳಿಲ್ಲ. ಜತೆಗೆ ಯಾವುದೇ ಭರವಸೆ ಕೊಟ್ಟಿಲ್ಲ ಎಂದು ಬೊಮ್ಮಾಯಿ ಅವರು ಬಿಡುಗಡೆ ಮಾಡಿರುವ ಪತ್ರಿಕೆ ಹೇಳಿಕೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
ಆದರೆ, ಈ ಇಬ್ಬರೂ ಮಾತನಾಡಿರುವ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವುದು ಒಂದೇ ರೀತಿ ಇದೆ. ಅಂದರೆ, ಆರನೇ ವೇತನ ಆಯೋಗ ಜಾರಿ ಮಾಡುವ ಬಗ್ಗೆ ಗೃಹ ಸಚಿವರು ಯಾವುದೇ ಭರವಸೆ ಕೊಟ್ಟಿಲ್ಲ. ಬದಲಿಗೆ ಮುಖ್ಯಮಂತ್ರಿಗಳು ಆಸ್ಪತ್ರೆಯಲ್ಲಿದ್ದು ಹಾಗೆಯೇ ಸಾರಿಗೆ ಸಚಿವರು ಬೆಂಗಳೂರಿನಲ್ಲಿ ಇಲ್ಲದ ಕಾರಣ ಇನ್ನು 2ದಿನದಲ್ಲಿ ಅವರೊಂದಿಗೆ ಮಾತನಾಡಿ ಒಂದು ತೀರ್ಮಾನಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ.
ಇದನ್ನೇ ಕೋಡಿಹಳ್ಳಿ ಚಂದ್ರಶೇಖರ್ ಅವರು ಹೇಳಿದ್ದಾರೆ. ಆದರೂ ಸಚಿವರು ಏಕೆ ಸ್ಪಷ್ಟೀಕರಣ ನೀಡಿದರು. ಶಾಂತಿಯುತವಾಗಿ ಮುಷ್ಕರ ಮುಂದುವರಿಸಿ ಎಂದು ಹೇಳಿಲ್ಲ ಎಂದಷ್ಟೆಯೇ ಎಂದು ಹೇಳಲು ಈ ಸ್ಪಷ್ಟೀಕರಣ ನೀಡಿದ್ದಾರೆ ಇಲ್ಲ ಈ ಇಬ್ಬರ ನಡುವೆ ನಡೆದ ರಹಸ್ಯವನ್ನು ಬಹಿರಂಗ ಪಡಿಸಲು ಹೇಳಿದ್ದಾರ ಎಂಬುವುದು ನೌಕರರಿಗೆ ತಿಳಿಯದಾಗಿದೆ.
ಕೋಡಿಹಳ್ಳಿ ಚಂದ್ರಶೇಖರ್ ಅವರ ಪತ್ರಿಕಾ ಹೇಳಿಕೆ
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಪತ್ರಿಕಾ ಹೇಳಿಕೆ