ತಿಂಗಳಲ್ಲಿ ರಾಜ್ಯಕ್ಕೆ ಬೇಕಿರುವುದು 1,500 ಮೆಟ್ರಿಕ್ ಟನ್ ಆಮ್ಲಜನಕ : ಸಚಿವ ಡಾ.ಸುಧಾಕರ್
ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು 1,500 ಮೆಟ್ರಿಕ್ ಟನ್ ಆಮ್ಲಜನಕ ಮತ್ತು ರೆಮಿಡಿಸಿವರ್ನ ಒಂದು ಲಕ್ಷ ಬಾಟಲ್ಗಳನ್ನು ಪೂರೈಸಲು ಕರ್ನಾಟಕ ಕೇಂದ್ರವನ್ನು ಕೇಳಿದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಮುಂದಿನ ಒಂದು ತಿಂಗಳಲ್ಲಿ ನಮಗೆ 1,500 ಮೆಟ್ರಿಕ್ ಟನ್ ಆಮ್ಲಜನಕ ಬೇಕಾಗಬಹುದು ಎಂದು ನಾವು ಅಂದಾಜು ಮಾಡಿದ್ದೇವೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇಂದ್ರ ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿದ್ದಾರೆ ಹೇಳಿದರು.
ಜತೆಗೆ ನಾನು ಕೂಡ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ್ ವರ್ಧನ್ ಅವರಿಗೆ ಆಮ್ಲಜನಕ ಪೂರೈಕೆಗಾಗಿ ಪತ್ರ ಬರೆದಿದ್ದು, ರಾಜ್ಯದ ಪ್ರಮುಖ ಆಮ್ಲಜನಕ ಉತ್ಪಾದಕ ಸಂಸ್ಥೆಗಳೊಂದಿಗೆ ರಾಜ್ಯ ಸರ್ಕಾರ ಸಭೆ ನಡೆಸಿದೆ. ಅವುಗಳಲ್ಲಿ ಜೆಎಸ್ಡಬ್ಲ್ಯುಸ್ಟೀಲ್ ಮುಖ್ಯವಾದದ್ದು ಎಂದು ತಿಳಿಸಿದರು.
ನಾವು ಸಜ್ಜನ್ ಜಿಂದಾಲ್ ಅವರೊಂದಿಗೆ ಸಭೆ ನಡೆಸಿದ್ದೇವೆ ಮತ್ತು ರಾಜ್ಯಕ್ಕೆ ಅಗತ್ಯವಿರುವಷ್ಟು ಆಮ್ಲಜನಕವನ್ನು ಪೂರೈಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ. ಇನ್ನು ಸಭೆಯ ನಡೆಸಿದ ಬಳಿಕ ಜೆಎಸ್ಡಬ್ಲ್ಯು ಸ್ಟೀಲ್ ಬೆಂಗಳೂರಿಗೆ ಕಳೆದ ಎರಡು ದಿನಗಳಲ್ಲಿ 40 ಮೆಟ್ರಿಕ್ ಟನ್ ಪೂರೈಸಿದೆ. ಇದಲ್ಲದೆ ಕೋವಿಡ್ ಚಿಕಿತ್ಸೆಗೆ ನಿರ್ಣಾಯಕವಾದ ರೆಮಿಡಿಸಿವರ್ ಚುಚ್ಚುಮದ್ದನ್ನು ಹೆಚ್ಚುವರಿ ಸರಬರಾಜು ಮಾಡಲು ರಾಜ್ಯವು ಒತ್ತಾಯಿಸಿದೆ ಎಂದರು.
ರಾಜ್ಯವು 70 ಸಾವಿರ ಬಾಟಲ್ಗಳ ರೆಮಿಡಿಸಿವರ್ ಚುಚ್ಚುಮದ್ದಿಗಾಗಿ ಬೇಡಿಕೆ ಇಟ್ಟಿದೆ. ಅದರಲ್ಲಿ 20 ಸಾವಿರ ಬಂದಿದ್ದು, ಉಳಿದವುಗಳನ್ನು ಮುಂದಿನ ದಿನಗಳಲ್ಲಿ ಪೂರೈಸಲಾಗುವುದು. ನಾವು ಈಗಾಗಲೇ 70 ಸಾವಿರ ಬಾಟಲ್ ರೆಮಿಡಿಸಿವರ್ ಗಬೇಡಿಕೆ ಇರಿಸಿದ್ದೇವೆ. ಇದಲ್ಲದೆ ನಾವು ಒಂದು ಲಕ್ಷ ರೆಮಿಡಿಸಿವರ್ ಬಾಟಲ್ಗಳ ಬೇಡಿಕೆಯನ್ನು ಮುಂದಿಟ್ಟಿದ್ದೇವೆ, ಇದಕ್ಕಾಗಿ ನಾವು ಕೇಂದ್ರಕ್ಕೆ ಪತ್ರ ರೆದಿದ್ದೇವೆ ಎಂದು ಹೇಳಿದರು.