ವಿಜಯಪಥ ಸಮಗ್ರ ಸುದ್ದಿ
ಬನ್ನೂರು : ಕೋವಿಡ್ ಕರ್ತವ್ಯಕ್ಕೆ ತೆರಳುತ್ತಿದ್ದ ಶಿಕ್ಷಕನಿಗೆ ಲಾಕ್‌ಡೌನ್ ನೆಪದಲ್ಲಿ ಬನ್ನೂರು ಪೊಲೀಸ್‌ಠಾಣೆ ದಪೇದಾರ್ ಮಹದೇವಯ್ಯ ಮನ ಬಂದಂತೆ ತಳಿಸಿದ್ದಾರೆ.
ಪಟ್ಟಣದಲ್ಲಿ ಕೋವಿಡ್ ಸಂಬಂಧಿತ ಕರ್ತವ್ಯಕ್ಕೆ ಹಾಜರಾಗಲು ಬುಧವಾರ ಬೆಳಗ್ಗೆ ಶಿಕ್ಷಕ ಬಿ.ಆರ್.ವಿಜೇಂದ್ರಪ್ರಭು ಸೈಕಲ್‌ನಲ್ಲಿ ಪುರಸಭೆಗೆ ತೆರಳುತ್ತಿದ್ದ ವೇಳೆ ಎಸ್‌ಆರ್‌ಪಿ ರಸ್ತೆಯಲ್ಲಿ ಕರ್ತವ್ಯ ನಿರತರಾಗಿದ್ದ ಮುಖ್ಯಪೇದೆ ಮಹದೇವಯ್ಯ ತಡೆದು ನನ್ನ ಮಾತನ್ನು ಕೇಳಿಸಿಕೊಳ್ಳದೆ ಮನಸೋ ಇಚ್ಛೆ ತಳಿಸುವ ಮೂಲಕ ತನ್ನ ದರ್ಪವನ್ನು ತೋರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನು ಕೋವಿಡ್ ಕರ್ತವ್ಯ ಸಂಬಂಧ ಪುರಸಭೆಗೆ ತೆರಳುತ್ತಿದ್ದು, ಈ ಸಂಬಂಧ ನನ್ನ ಬಳಿ ಪತ್ರ ಇದೆ ಎಂದರೂ ಅದನ್ನು ಲೆಕ್ಕಿಸದೆ ತನ್ನ ದರ್ಪವನ್ನು ತೋರಿ ಹಲ್ಲೆ ಮಾಡಿದ್ದಾರೆ. ನಂತರ ಅಲ್ಲೇ ಇದ್ದಂತ ವಾಹನ ಚಾಲಕ ಪೊಲೀಸ್ ಪುಟ್ಟಸ್ವಾಮಿ ಮಧ್ಯ ಪ್ರವೇಶ ಮಾಡಿ ನನ್ನನ್ನು ಕಳುಹಿಸಿದ್ದರು ಎಂದು ತಿಳಿಸಿದ್ದಾರೆ.
ಅಷ್ಟರಲ್ಲೇ ಶಿಕ್ಷಕನಿಗೆ ಹಲವು ಬಾರಿ ಲಾಠಿ ಬೀಸಿದ್ದರು. ಶಿಕ್ಷಕ ತನ್ನದಲ್ಲದ ತಪ್ಪಿಗೆ ಪೆಟ್ಟು ತಿಂದು ನೋವು ಅನುಭವಿಸುವಂತಾಗಿದೆ. ಈ ಸಂಬಂಧ ಪಟ್ಟಣದ ಆರೋಗ್ಯ ಅಧಿಕಾರಿಯನ್ನು ಸಂಪರ್ಕಿಸಿದರೆ ಅವರು, ಕರ್ತವ್ಯಕ್ಕೆ ಗೈರಾಗಿದ್ದು, ಅವರ ಜಾಗದಲ್ಲಿದ್ದ ಅರೆಕಾಲಿಕ ಕರ್ತವ್ಯ ನಿರ್ವಹಿಸುತ್ತಿದ್ದ ಕಾಂತರಾಜು ಅವರು ಇದು ಶಿಕ್ಷಣಾಧಿಕಾರಿಗೆ ಸಂಬಂಧಿಸಿದ ವಿಚಾರ ಎಂದು ತಿಳಿಸಿದರು.
ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಕೇಳಿದರೆ ಇದು ನನ್ನ ಗಮನಕ್ಕೆ ಬಂದಿಲ್ಲ. ಈ ತರಹ ಮಾಡುವುದು ಸರಿಯಲ್ಲ. ಕೋವಿಡ್ ಸಂಬಂಧ ಬನ್ನೂರು ವ್ಯಾಪ್ತಿಯಲ್ಲಿ 6 ಜನ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಅವರಿಗೆ ಸಿಆರ್‌ಪಿಯಿಂದ ಐಡಿ ಕಾರ್ಡ್ ನೀಡಲಾಗಿದೆ ಎಂದು ತಿಳಿಸಿದರು.
ಕೋವಿಡ್ ಕರ್ತವ್ಯಕ್ಕೆ ಲಾಕ್‌ಡೌನ್ ಸಮಯದಲ್ಲಿ ಶಿಕ್ಷಕರನ್ನು ನೇಮಿಸಿ ಈ ತರಹದ ಅತಾಚುರ್ಯಗಳು ನಡೆದರೆ ಮುಂದಿನ ದಿನದಲ್ಲಿ ಯಾವ ಶಿಕ್ಷಕರು ಕರ್ತವ್ಯ ಮಾಡಲು ಮುಂದೆ ಬರುವರು. ಇದನ್ನು ಜಿಲ್ಲಾಧಿಕಾರಿಯವರು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಮನವಿ ಮಾಡಿದ್ದಾರೆ.