NEWSನಮ್ಮಜಿಲ್ಲೆ

ಕೊರೊನಾ ಲಸಿಕೆ ಪಡೆಯಲು ಮಾನಸಿಕ ಧೈರ್ಯ ತುಂಬಿ : ಸಚಿವ ಸೋಮಶೇಖರ್

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ಕೊರೊನಾ ಲಸಿಕೆ ಪಡೆಯಲು ಸಾರ್ವಜನಿಕರು ಮಾನಸಿಕವಾಗಿ ಕುಗ್ಗುತ್ತಿದ್ದು ತಾಲೂಕು ಹಂತದಲ್ಲಿ ತಂಡ ರಚನೆ ಮಾಡಿ ಪ್ರತಿಯೊಬ್ಬ ಸಾರ್ವಜನಿಕರಿಗೂ ಮಾನಸಿಕವಾಗಿ ಧೈರ್ಯ ತುಂಬುವ ಮತ್ತು ಸರಕಾರದ ಸವಲತ್ತುಗಳನ್ನು ತಲಪಿಸುವ ಕೆಲಸವನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾಡಬೇಕು ಎಂದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕೊರೊನಾ ಹಿನ್ನೆಲೆಯಲ್ಲಿ ನಡೆದ ತಾಲೂಕು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ 71 ಲ್ಯಾಬ್‌ಗಳಿಗೆ ಕೊರೊನಾ ತಪಾಸಣೆಗೆ ಅನುಮತಿ ನೀಡಿದ್ದು ಮುಂದಿನ ದಿನಗಳಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ 24 ಗಂಟೆಯ ಒಳಗೆ ಫಲಿತಾಂಶ ದೊರಯಲಿದೆ. ಪೊಲೀಸ್ ಇಲಾಖೆ ಕೊರೊನಾ ಲಾಕ್ಡೌನ್ನಲ್ಲಿ ಅನಧಿಕೃತವಾಗಿ ಓಡಾಟ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ರೈತರು, ರೋಗಿಗಳು ಮತ್ತತಿರರಿಗೆ ಮಾತ್ರ ತಿರುಗಾಡಲು ಅವಕಾಶ ನೀಡಬೇಕು. ನಾನೇ ಕರೆಮಾಡಿ ಶೀಫಾರಸು ಮಾಡಿದರು ಯಾರನ್ನು ಬಿಡಬೇಡಿ, ಪೊಲೀಸರು ಪರಿಸ್ಥಿತಿ ಬಿಗಿಗೊಳಿಸದಿದ್ದರೆ ಲಾಕ್ಡೌನ್ ಪ್ರಯೋಜನವಿಲ್ಲವಾಗುತ್ತದೆ ಎಂದರು.

ಮೈಸೂರು ಜಿಲ್ಲೆಯಲ್ಲಿ ಯಾವುದೆ ಕೊರತೆ ಇಲ್ಲ. ಖಾಸಗಿ ಆಸ್ಪತ್ರೆಗಳಗಿಗೆ ಬೇಕಾಗಿದ್ದ ಇಂಜೆಕ್ಷನ್ ಮತ್ತು ಅಗತ್ಯವಾಗಿದ್ದ ಆಕ್ಸಿಜನ್ ವೆಂಟಿಲೇಟರ್ಗಳನ್ನು ಸರಕಾರದವತಿಯಿಂದ ನೀಡಲಾಗುತ್ತಿದ್ದು ಯಾವುದೆ ಭಯಬೇಡ ಎಲ್ಲವನ್ನು ಸರಕಾರ ನಿಭಾಯಿಸಲಿದೆ. ತಾಲೂಕು ಎಲ್ಲಾ ಇಲಾಖೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೊರೊನಾ ಹತೋಟಿಗೆ ಶ್ರಮಿಸಬೇಕು ಚೈನ್ಲಿಂಕ್ ಕಟ್ ಮಾಡುವ ಸಲುವಾಗಿಯೆ ಲಾಕ್ಡೌನ್ ಮಾಡಲಾಗಿದೆ ಎಂದರು.

ಸಂಸದ ಪ್ರತಾಪ್‌ಸಿಂಹ ಮಾತನಾಡಿ, ತಾಲೂಕು ಹಂತದಲ್ಲಿ ಇರುವ ಆಕ್ಸಿಜನ್ ಬೆಡ್ಗಳ ಸಂಖ್ಯೆ ಕಡಿಮೆಯಾಗಿದ್ದು ಪ್ರತಿ ತಾಲೂಕಿನಲ್ಲಿ ಕನಿಷ್ಠ 150 ಆಕ್ಸಿಜನ್ ಹಾಸಿಗೆಗಳು ಇರುವಂತೆ ಆರೋಗ್ಯಾಧಿಕಾರಿಗಳು ಕ್ರಮವಹಿಸಬೇಕು. ರೋಗಿಗಳ ಬಗ್ಗೆ ಮಾಹಿತಿ ಮತ್ತು ಸಾಂತ್ವನ ಹೇಳುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.

ಶಾಸಕ ಕೆ.ಮಹದೇವ್ ಮಾತನಾಡಿ ತಾಲೂಕಿನಾದ್ಯಂತ ವಾಕ್ಸಿನೇಷನ್ ವಿಚಾರದಲ್ಲಿ ಉತ್ತಮ ಸಾಧನೆ ಮಾಡಿರುವ ಪಿರಿಯಾಪಟ್ಟಣ ತಾಲೂಕು ಅಧಿಕಾರಿಗಳ ಶ್ರಮದಿಂದ ಕೊರೊನಾ ಹತೋಟಿಗೆ ತರುವಲ್ಲಿಯೂ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಪಂಚಾಯಿತ್ ಸಿಇಒ ಯೋಗೀಶ್, ತಹಸೀಲ್ದಾರ್ ಕೆ.ಚಂದ್ರಮೌಳಿ, ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್ಬಾಬು, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಶ್ರೀನಿವಾಸ್, ಸಿಇಒ ಸಿ.ಆರ್.ಕೃಷ್ಣಕುಮಾರ್  ಸಭೆಗೆ ಮಾಹಿತಿ  ನೀಡಿದರು.

ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಕೆ.ಆರ್.ನಿರೂಪ, ಪುರಸಭೆ ಅಧ್ಯಕ್ಷ ಮಂಜುನಾಥ್ಸಿಂಗ್, ಉಪವಿಭಾಗಾಧಿಕಾರಿ ವೀಣಾ, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್, ಒಳಚರಂಡಿ ನಿಗಮದ ನಿರ್ದೇಶಕ ಆರ್.ಟಿ.ಸತೀಶ್, ಡಿವೈಎಸ್ಪಿ ರವಿಪ್ರಸಾದ್, ಸರ್ಕಲ್ ಇನ್ಸ್ಪೆಕ್ಟರ್ ಬಿ.ಆರ್.ಪ್ರದೀಪ್‌ ಕುಮಾರ್  ಮತ್ತಿತರರು ಇದ್ದರು.

Leave a Reply

error: Content is protected !!
LATEST
BMTC: 2020 ಜ.1ರಿಂದ 2023 ಮಾ.31ರ ನಡುವೆ ನಿವೃತ್ತರಾದ ನೌಕರರ ಉಪಧನ, ನಿವೃತ್ತಿ ಗಳಿಕೆ ರಜೆ ನಗದೀಕರಣ ಲೆಕ್ಕಾಚಾರ ಮಾಡ... 4ನಿಗಮಗಳ ಅಧಿಕಾರಿಗಳು-ನೌಕರರಿಗೂ ಸರಿಸಮಾನ ವೇತನ ಕೊಡಿ: ಸಾರಿಗೆ ಸಚಿವರು, ಅಧಿಕಾರಿಗಳಿಗೆ KSRTC ಸಿಬ್ಬಂದಿ, ಲೆಕ್ಕ ಪತ್... ಮಾಧ್ಯಮ ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ “ಮೀಡಿಯಾ ಕಿಟ್” ವಿತರಣೆಗೆ ಅರ್ಜಿ ಆಹ್ವಾನ ಅ.28ರಂದು ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ: BMTC ‍& KSRTC ಸಂಘದ ಕಾರ್ಯಾಧ್ಯಕ್ಷ ನಂಜುಂಡೇಗೌಡ BMTC ಕಂಡಕ್ಟರ್‌ಗೆ ಕಲ್ಲಿನಿಂದ ಹೊಡೆದ ಕಿರಾತಕ: ಆತಂಕದಲ್ಲೇ ಡ್ಯೂಟಿ, ಚಾಲನಾ ಸಿಬ್ಬಂದಿಗಳಿಗಿಲ್ಲ ಜೀವ ರಕ್ಷಣೆ KKRTC ಬಸ್‌ ಪಲ್ಟಿ ಮಹಿಳೆ ಸಾವು- ಒಬ್ಬರ ಸ್ಥಿತಿ ಗಂಭೀರ, 20ಕ್ಕೂ ಹೆಚ್ಚು ಮಂದಿಗೆ ಗಾಯ ವಿಜಯಪಥ ವರದಿ ಪರಿಣಾಮ-KSRTC ಚಾಲಕನಿಗೆ ಕೊಟ್ಟಿದ್ದ ಮೆಮೋ ವಾಪಸ್‌ ಪಡೆದು 20ದಿನಗಳ ರಜೆ ಮಂಜೂರು ಮಾಡಿದ ಡಿಸಿ ಸಾರಿಗೆ ನೌಕರರಿಂದ ಚುನಾಯಿತರಾಗದ ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ ಸರಿ ಸಮಾನ... KSRTC ನೌಕರರ ಸಂಬಳ ಅ.30ರಂದೇ ಬ್ಯಾಂಕ್ ಖಾತೆಗೆ ಜಮೆ: ಸಂಸ್ಥೆ ನಿರ್ದೇಶಕರು ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬರಾಕ್ ಓಬಾಮಾ ಆಹ್ವಾನಕ್ಕೆ ಚಿಂತನೆ : ಸಚಿವ ಎಚ್.ಕೆ. ಪಾಟೀಲ