ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ಹಾಗೂ ಬಾಡಿಗೆದಾರರನ್ನು ಮನೆ, ಪಿಜಿ, ಅಂಗಡಿಗಳಿಂದ ಬಲವಂತವಾಗಿ ತೆರವುಗೊಳಿಸುವುತ್ತಿರುವುದು ಈಗಾಗಲೇ ಗಮನಕ್ಕೆ ಬಂದಿದೆ. ಅವರನ್ನು ತೆರವುಗೊಳಿಸಬಾರದು ಒಂದು ವೇಳೆ ತೆರವುಗೊಳಿಸಿದರೆ ಮಾಲೀಕರ ವಿರುದ್ಧ ಕೇಸು ದಾಖಲಿಸುವ ಮೂಲಕ ಕಾನೂನು ಕ್ರಮ ತೆಗೆದು ಕೊಳ್ಳಬೇಕಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಕರ್ಫ್ಯೂ ಅವಧಿಯ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ನಿಲುವು ಸರಿಯಲ್ಲ. ಹಾಗೆ ಮಾಡಿದರೆ, ಮಾಲೀಕರ ವಿರುದ್ಧ ವಿಪತ್ತು ನಿರ್ವಹಣಾ ಅಧಿನಿಯಮ 2005ರ ಪ್ರಕರಣ 24ರಡಿ ಕ್ರಮ ಜರುಗಿಸುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ತಿಳಿಸಿದೆ.
ಮೊನ್ನೆ ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವ್ ಬಂದಿದ್ದ ಬಾಡಿಗೆ ಮನೆಯಲ್ಲಿದ್ದವರನ್ನು ಬಾಡಿಗೆ ಮನೆಯ ಮಾಲೀಕ ಮನೆಯನ್ನು ಬಿಡುವಂತೆ ಬಾಡಿಗೆದಾರರಿಗೆ ತಾಕೀತು ಮಾಡಿದ್ದ, ಇದರಿಂದ ಎಚ್ಚೆತ್ತಿರುವ ಸರ್ಕಾರ ಇಂಥ ಘಟನೆಗಳು ನಡೆದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.