NEWSನಮ್ಮರಾಜ್ಯಸಂಸ್ಕೃತಿ

ಬಸವ ಜಯಂತಿ, ರಂಜಾನ್ ಸುರಕ್ಷಿತ ಆಚರಣೆಗೆ ಸಿಎಂ ಬಿಎಸ್‌ವೈ ಕರೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯಾ ಪರ್ವಕಾಲದ ಹಾರ್ದಿಕ ಶುಭಾಶಯಗಳನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಅತ್ಯಂತ ಮಂಗಳಕರವಾದ ಈ ದಿನದಂದು ಸಮಸ್ತ ಜನತೆಗೆ ಯೋಗ, ಕ್ಷೇಮ, ಆರೋಗ್ಯ, ಸುಖ ಸಮೃದ್ಧಿಗಳನ್ನು ಹಾಗೂ ನಾಡಿಗೆ ಶುಭ ಕಾಲವನ್ನು ದೇವರು ಕರುಣಿಸಲಿ ಎಂದು ಮನೆಗಳಲ್ಲಿಯೇ ವಿಶೇಷ ಪೂಜೆ ಪ್ರಾರ್ಥನೆಗಳನ್ನು ಸಲ್ಲಿಸೋಣ ಎಂದು ಸಲಹೆ ನೀಡಿದ್ದಾರೆ.

ನಾಡಿನ ಸಮಸ್ತ ಜನತಗೆ ವಿಶ್ವಗುರು ಅಣ್ಣ ಬಸವಣ್ಣನವರ ಜಯಂತಿಯ ಭಕ್ತಿಪೂರ್ವಕ ಶುಭಕಾಮನೆಗಳು. ಶ್ರಮ ಗೌರವವನ್ನು ಎತ್ತಿ ಹಿಡಿದು, ಕಾಯಕ ದಾಸೋಹ ತತ್ವಗಳ ಮೂಲಕ ನಾವು ಮಾಡುವ ಕೆಲಸಕ್ಕೆ ಆಧ್ಯಾತ್ಮಿಕ ಮುಖವನ್ನು ನೀಡಿದ, ವಚನಗಳ ತಿಳಿನುಡಿಗಳ ಮೂಲಕ ಸಮಾಜಕ್ಕೆ ಸರಿದಾರಿ ತೋರಿದ ಬಸವಣ್ಣನವರ ಉಪದೇಶಗಳ ಬೆಳಕಿನಲ್ಲಿ ಸಾರ್ಥಕ ಜೀವನ ನಡೆಸೋಣ ಎಂದು ತಿಳಿಸಿದ್ದಾರೆ.

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. ಈದ್-ಉಲ್-ಫಿತರ್ ಎಲ್ಲರ ಜೀವನದಲ್ಲಿ ಸಂತೋಷ, ಆರೋಗ್ಯ, ಸಮೃದ್ಧಿಯನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ.

ಜನರ ಆರೋಗ್ಯ, ನಾಡಿನ ಕ್ಷೇಮಕ್ಕಾಗಿ ದೇವರಲ್ಲಿ ವಿಶೇಷವಾಗಿ ಪ್ರಾರ್ಥಿಸೋಣ. ಮನೆಯಲ್ಲೇ ಸುರಕ್ಷಿತವಾಗಿ ರಂಜಾನ್ ಆಚರಣೆ, ಪ್ರಾರ್ಥನೆಗಳನ್ನು ಸಲ್ಲಿಸೋಣ ಎಂದು ತಿಳಿಸಿದ್ದಾರೆ.

Leave a Reply

error: Content is protected !!
LATEST
ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ