ವಿಜಯಪಥ ಸಮಗ್ರ ಸುದ್ದಿ
ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲದ ಆಶ್ರಿತಾ ವಿ. ಒಲೆಟೆ ಭಾರತದ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆಗಿ ಆಯ್ಕೆಯಾಗಿದ್ದು, ರಾಜ್ಯಕ್ಕೂ ಕೀರ್ತಿ ತಂದಿದ್ದಾರೆ.
ಭಾರತದ ಏರ್ ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲ್‌ನಿಂದ ಪದವಿ ಪಡೆದಿರುವ ಆಶ್ರಿತಾ ಈ ಕಠಿಣ ತರಬೇತಿ ಮುಗಿಸಿದ ಭಾರತೀಯ ವಾಯುದಳದ ಮೊಟ್ಟ ಮೊದಲ ಮಹಿಳಾ ಅಧಿಕಾರಿ ಎನಿಸಿದ್ದಾರೆ.
ಕೊಳ್ಳೇಗಾಲದ ಒ.ವಿ. ವೆಂಕಟೇಶ್ ಬಾಬು ಹಾಗೂ ಒ.ವಿ. ವಾಣಿ ದಂಪತಿಯ ಪುತ್ರಿ ಆಶ್ರಿತಾ 2014ರಲ್ಲಿ ವಾಯುಪಡೆಯ ಟೆಕ್ನಿಕಲ್ ವಿಭಾಗಕ್ಕೆ ಆಯ್ಕೆಯಾಗಿದ್ದರು.
ಇದೀಗ ಅವರು ಅಯ್ಕೆಗೊಂಡಿರುವುದು ರಾಜ್ಯ ಸೇರಿದಂತೆ ರಾಷ್ಟ್ರಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಅಭಿನಂದನೆಳನ್ನು ಸಲ್ಲಿಸುತ್ತಿದ್ದಾರೆ.