ಉತ್ತರ ಪ್ರದೇಶ : ಒಂದು ಅಥವಾ ಎರಡು ಮಕ್ಕಳನ್ನು ಹೊಂದಿದವರಿಗೆ ಮಾತ್ರ ಸರ್ಕಾರಿ ಕೆಲಸ ಎಂಬ ಕಾನೂನು ರೂಪಿಸಲು ಯುಪಿ ಸರ್ಕಾರ ಮುಂದಾಗಿದೆ.
ಹೌದು ಇಂತಹದ್ದೊಂದು ಕಾನೂನು ತರಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದ್ದು, ಕಾನೂನು ಆಯೋಗವು ಕಡಿಮೆ ಮಕ್ಕಳನ್ನ ಹೊಂದಿದವರಿಗೆ ಮಾತ್ರವೇ ಸರ್ಕಾರದ ಸೌಲಭ್ಯ ಸಿಗುವಂತೆ ಕಾನೂನು ಜಾರಿಗೆ ತರಲು ಕರಡು ರೂಪಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.
ರಾಜ್ಯದ ಜನರು ಕಡಿಮೆ ಮಕ್ಕಳನ್ನು ಹೊಂದಬೇಕು. ಇದರಿಂದ ಆ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಉತ್ತರ ಪ್ರದೇಶದ ಕಾನೂನು ಆಯೋಗವು ಈ ಪ್ರೋತ್ಸಾಹ ನೀಡುವ ದೃಷ್ಟಿ ಹೊಂದಿದೆ ಎನ್ನಲಾಗಿದೆ.
ಈ ಕಾನೂನನ್ನು ಮುಂದಿನ 2 ತಿಂಗಳಿನಲ್ಲಿ ಜಾರಿಗೆ ತರುವುದಕ್ಕೆ ಅಗತ್ಯವಾದ ಮಸೂದೆಯ ಕರಡು ರೂಪಿಸುವುದಾಗಿ ಸರ್ಕಾರ ತಿಳಿಸಿದೆ.