NEWSಲೇಖನಗಳುಶಿಕ್ಷಣ-ಸಂಸ್ಕೃತಿ

ಪ್ರತಿಯೊಬ್ಬ ಗರ್ಭಿಣಿಯರ ಅಚ್ಚುಮೆಚ್ಚು ಈ ಕೇಸರಿ (Saffron) ಏಕಿಷ್ಟು ದುಬಾರಿ?

ವಿಜಯಪಥ ಸಮಗ್ರ ಸುದ್ದಿ

ಕೇಸರಿ ಎಂದ ಕೂಡಲೇ ಮನಸ್ಸಿನಲ್ಲಿ ಮೂಡುವ ಭಾವನೆ ಎಂದರೆ ಅದು ಪ್ರತಿ ಗರ್ಭಿಣಿಯೂ ತನ್ನ ಮಗು ಬೆಳ್ಳಗೆ ಮತ್ತು ಕೆಂಪಗೆ ಜನಿಸಲಿ ಎಂದು ಹಾಲಿನಲ್ಲಿ ಹಾಕಿಕೊಂಡು ಕುಡಿಯುವ ಒಂದು ಪದಾರ್ಥ ಎಂಬುವುದು. ಆದರೆ ಅದರಿಂದ ಇನ್ನು ಹಲವಾರು ಪ್ರಯೋಜನಗಳಿವೆ ಎಂಬುವುದು ಇನ್ನೂ ಹಲವರಿಗೆ ತಿಳಿಯದ ವಿಷಯ.

ಇನ್ನು ಇದರ ಬೆಲೆ ಕೇಳಿ ಅಬ್ಬಾ ಎನ್ನದಿರುವವರು ತುಂಬಾ ಅಪರೂಪ. ಇದು ಸತ್ಯಕೂಡ ಹೌದು ಅಂದರೆ ಇದು ಒಂದು ಕೆಜಿಗೇ ಲಕ್ಷ ರೂಪಾಯಿ ಬೆಲೆ ಇದೆ ಎಂಬುವುದು ಅಷ್ಟೇ ಸತ್ಯ. ಹೌದು! ಕೇಸರಿ ಹೂವಿನ ಹೆಸರು ಕೇಳದವರಿಲ್ಲ. ಆದರೆ ಅದು ಪ್ರತಿ ಕಿಲೋಗೆ ಲಕ್ಷ ರೂಪಾಯಿಗೆ ಮಾರಾಟವಾಗುತ್ತದೆ. ಒಂದು ಕೆಜಿಗೆ ಕೇಸರಿಗೆ ಸುಮಾರು 2ಲಕ್ಷ ರೂ.ಗಳವರೆಗೆ ಮಾರಾಟವಾಗುತ್ತದೆ. ಇಷ್ಟಾರೂ ಭಾರತೀಯರು ಇದನ್ನು ಹೆಚ್ಚಾಗಿ ಬಳಸುತ್ತಾರೆ ಎಂಬುವುದು ಹೆಮ್ಮೆಯ ವಿಷಯ. ಚಿನ್ನದಂತೆ ಬೆಲೆ ಬಾಳುವ ಕೇಸರಿ ಹೂವು ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಪ್ರಯೋಜನಕಾರಿ.

ಕೇಸರಿ ಹೂವು ಆಹಾರದ ರುಚಿಯನ್ನು ಕೂಡ ಹೆಚ್ಚಿಸುತ್ತದೆ. ಈ ಕಾರಣಕ್ಕೆ ಭಾರತದಲ್ಲಿ ಇದಕ್ಕೆ ಹೆಚ್ಚು ಬೇಡಿಕೆ ಇದೆ. ಆದರೆ ಕೇಸರಿ ಹೂವು ಏಕೆ ಇಷ್ಟು ದುಬಾರಿ ಎಂಬುವುದು ಕೆಲವರಲ್ಲಿ ಗೊಂದಲದ ಗೂಡಾಗಿ ಪರಿಣಮಿಸಿದೆ. ಈ ಕೇಸರಿ ಹೂವು ಬೆಳೆ ಬಗ್ಗೆ ತಿಳಿದುಕೊಂಡಾಗಲೇ ಅದರ ದುಬಾರಿ ನಮಗೆ ತಿಳಿಯುತ್ತದೆ.

ಕೇಸರಿ ಒಂದು ರೀತಿಯ ದುಬಾರಿ ಮಸಾಲಾ ಪದಾರ್ಥ. ಇದನ್ನು ತಂಪಾದ ವಾತಾವರಣದಲ್ಲಿ ಬೆಳೆಸಲಾಗುತ್ತದೆ. ಕೇಸರಿಯ ಉಪಯುಕ್ತ ಭಾಗ – ಕೆಂಪು ಕೇಸರಗಳು ಮಾತ್ರ. ಒಂದು ಕಿಲೋ ಕೇಸರಗಳಿಗೆ ಕನಿಷ್ಠ ಎರಡು ಲಕ್ಷ ಹೂವುಗಳು ಬೇಕಾಗುತ್ತವೆ. ಅದಕ್ಕಾಗಿಯೇ ಕೇಸರಿ ವಿಶ್ವದ ಅತ್ಯಂತ ದುಬಾರಿ ಪದಾರ್ಥವಾಗಿದೆ.

ಈ ಕೇಸರಿ ಸ್ವಲ್ಪ ಕಹಿ ಮತ್ತು ಸಿಹಿಯಾಗಿರುತ್ತದೆ. ಗರ್ಭಿಣಿಯರು ಆಹಾರದಲ್ಲಿ ಕೇಸರಿ ಹೂವನ್ನು ತೆಗೆದುಕೊಂಡರೆ, ಮಗು ಕಪ್ಪು ಅಥವಾ ಬೂದು ಬಣ್ಣಕ್ಕೆ ಬದಲಾಗಿ ಬಿಳಿ ಅಥವಾ ಕೆಂಪು ಬಣ್ಣದಲ್ಲಿ ಜನಿಸುತ್ತದೆ ಎಂಬುದು ಜನಪ್ರಿಯ ನಂಬಿಕೆ.

15 ವರ್ಷಗಳಿಗೊಮ್ಮೆ ಬಿತ್ತನೆ
ಕೇಸರಿಗೆ ಬೆಲೆ ಹೆಚ್ಚು. ಆದರೆ ಇಳುವರಿ ತುಂಬಾ ಕಡಿಮೆ. ಸುಗ್ಗಿಯ ಸಮಯದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಸಂಪೂರ್ಣ ಕೊಯ್ಲು ಮಾಡಿದ ನಂತರದಲ್ಲಿ ಇದರ ಬೆಳೆಯ ಗಾತ್ರದಲ್ಲಿ ಬದಲಾಗುತ್ತದೆ. ಒಂದೂವರೆ ಚದರ ಅಡಿಗಳಲ್ಲಿ ಕೃಷಿ ಮಾಡಿದರೆ ಕೇವಲ 50 ಗ್ರಾಂ ಕೇಸರಿಯನ್ನು ಕೊಯ್ಲು ಮಾಡಬಹುದು.

ಕೇಸರಿ ಬೀಜಗಳನ್ನು ಬಿತ್ತನೆ ಮಾಡುವುದು 15 ವರ್ಷಗಳಿಗೊಮ್ಮೆ. ಪ್ರತಿ ವರ್ಷ ಹೂವುಗಳು ಬರುತ್ತವೆ. ಆದರೆ 15 ವರ್ಷಗಳ ನಂತರ ಮತ್ತೆ ಬೆಳೆ ತೆಗೆಯಬೇಕು. ಆಗ ಕೇಸರಿ ಗಿಡದ ಗಡ್ಡೆಯಲ್ಲಿ ಇನ್ನಿತರ ಗಡ್ಡೆಗಳು ಬೆಳೆದಿರುತ್ತದೆ ನಂತರ ಅವುಗಳನ್ನು ಬೆಳೆಸಲಾಗುತ್ತದೆ.

ರಕ್ತ ಶುದ್ಧೀಕರಣಕ್ಕೆ ಸಹಕಾರಿ
ಕೇಸರಿ ಗಿಡ ಬೆಳ್ಳುಳ್ಳಿ ಮತ್ತು ಈರುಳ್ಳಿಯಂತಹ ಸಸ್ಯಗಳಂತೆ ಕಾಣುತ್ತದೆ. ಈ ಗಿಡದ ಮಧ್ಯೆ ನೇರಳೆ ಬಣ್ಣದ ಹೂವು ಅರಳಲು ಪ್ರಾರಂಭವಾಗುತ್ತದೆ. ಈ ಹೂವಿನ ಮಧ್ಯದಲ್ಲಿ ಕೇಸರ ಇರುತ್ತದೆ. ಒಂದು ಹೂವಿನಲ್ಲಿ ಕೇವಲ ಮೂರು ಎಸಳುಗಳಷ್ಟೇ ಇರುತ್ತವೆ. ಅದಕ್ಕಾಗಿಯೇ ಒಂದು ಕಿಲೋ ಕೇಸರಿ ಹೂವನ್ನು ತಯಾರಿಸಲು ಸುಮಾರು 50 ಸಾವಿರ ಹೂವುಗಳನ್ನು ಒಟ್ಟುಗೂಡಿಸಬೇಕಂತೆ. ಹಿಂದಿನಿಂದಲೂ ಆಯುರ್ವೇದದಿಂದ ಅಡುಗೆಯವರೆಗೆ ಕೇಸರಿ ಹೂವನ್ನು ಬಳಸಲಾಗುತ್ತದೆ. ಕೇಸರಿ ರಕ್ತವನ್ನು ಶುದ್ಧೀಕರಿಸಲು ಮತ್ತು ಕಡಿಮೆ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

100 ಲೀಟರ್ ಹಾಲಿಗೆ ಒಂದು ಗ್ರಾಂ ಕೇಸರಿ
ಸುಮಾರು 160 ಕೇಸರಿ ಹೂವುಗಳನ್ನು ಹೊರತೆಗೆದಾಗ, ಅದರಿಂದ ಕೇವಲ ಒಂದು ಗ್ರಾಂ ಕೇಸರಿ ಉತ್ಪತ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಅಂದರೆ, ಒಂದು ಗ್ರಾಂ ಕೇಸರಿ ಹೂವಿಗೆ, ತುಂಬಾ ಶ್ರಮಿಸಬೇಕಾಗುತ್ತದೆ. ಅಲ್ಲದೆ ಹೀಗೆ ಸಂಗ್ರಹಿಸಿದ ಒಂದು ಗ್ರಾಂ ಕೇಸರಿ ಹೂವು 100 ಲೀಟರ್ ಹಾಲಿಗೆ ಸಾಕಾಗುವಷ್ಟು ಇರುತ್ತದೆ. ಹೀಗಾಗಿ ಕೇಸರಿ ಹೆಚ್ಚು ದುಬಾರಿಯ ವಸ್ತುವಾಗಿದೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು