ನ್ಯೂಡೆಲ್ಲಿ: ಕೆಥೊಲಿಕ್ ಪಾದ್ರಿಗಳು ದೊಡ್ಡದೊಂದು ಸೆಕ್ಸ್ ಸ್ಕ್ಯಾಂಡಲ್ನಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಕಳೆದ 30 ತಿಂಗಳಲ್ಲಿ 368 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಕುರಿತು ದೂರುಗಳು ಕೇಳಿಬಂದಿವೆ.
2018ರ ಜುಲೈ 1ರಿಂದ 2020ರ ಡಿಸೆಂಬರ್ 31ರ ಅವಧಿಯಲ್ಲಿ ಇಷ್ಟೊಂದು ಪ್ರಮಾಣದ ಲೈಂಗಿಕ ದೌರ್ಜನ್ಯದ ಪ್ರಕರಣಗಳು ನಡೆದಿರುವುದು ವರದಿಯಾಗಿದೆ. ಪೋಲಂಡ್ನಲ್ಲಿ ಕೆಥೊಲಿಕ್ ಪಾದ್ರಿಗಳಿಂದ ಇಷ್ಟೊಂದು ಲೈಂಗಿಕ ಅನಾಚರಗಳು ನಡೆದಿರುವ ಕುರಿತು ಇನ್ಸ್ಟಿಟ್ಯೂಟ್ ಆಫ್ ಕೆಥೊಲಿಕ್ ಚರ್ಚ್ ಸ್ಟ್ಯಾಟಿಸ್ಟಿಕ್ಸ್ ಸೋಮವಾರ ಪ್ರಕಟಿಸಿದೆ.
ದುರಂತವೆಂದರೆ ಕೆಥೊಲಿಕ್ ಪಾದ್ರಿಗಳು ದಿನಕ್ಕೊಂದು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ವರದಿಯಿಂದ ಬಹಿರಂಗೊಂಡಿದೆ.
ಹೀಗೆ ಬಂದ ರಿಪೋರ್ಟ್‌ಗಳಲ್ಲಿ ಇದು ಎರಡನೆಯದು. ಇದಕ್ಕೂ ಮೊದಲು ಇಂಥ ವರದಿ 2019ರಲ್ಲಿ ಬಿತ್ತರಗೊಂಡಿತ್ತು. ಅದರಲ್ಲಿ 1990ರ ಜನವರಿಯಿಂದ 2018ರ ಜೂನ್ ವರೆಗೂ 382 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದವು.
ಎರಡೂ ವರದಿಯಲ್ಲೂ ಅರ್ಧಕ್ಕರ್ಧದಷ್ಟು ಪ್ರಕರಣಗಳು ಸಂತ್ರಸ್ತೆಯರು 15 ವರ್ಷಕ್ಕಿಂತ ಕಿರಿಯರು ಎಂಬ ಆತಂಕಕಾರಿ ಅಂಶವೂ ಬೆಳಕಿಗೆ ಬಂದಿದೆ.