ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಬೌಂಡರಿ ಬಳಿ ಹಿಡಿದ ಕ್ಯಾಚ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ವಿಡಿಯೋ ನೋಡಿದ ಕ್ರಿಕೆಟ್ ಅಭಿಮಾನಿಗಳು ‘ಫ್ಲೈ ಸ್ಮೃತಿ ಫ್ಲೈ’ ಎಂದು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪಂದ್ಯವನ್ನು ಟೀ ಇಂಡಿಯಾ ನಾಲ್ಕು ವಿಕೆಟ್ ಗಳಿಂದ ತನ್ನದಾಗಿಸಿಕೊಂಡಿದೆ.
ಟೀಂ ಇಂಡಿಯಾದ ದೀಪ್ತಿ ಶರ್ಮಾ ಎಸೆದ ಚೆಂಡನ್ನು ಇಂಗ್ಲೆಂಡ್ ಆಟಗಾರ್ತಿ ನತಾಲಿ ಸೈವರ್ ಬೌಂಡರಿಯತ್ತ ಅಟ್ಟಿದ್ದರು. ಆ ಚೆಂಡನ್ನು ಕ್ಯಾಚ್ ಹಿಡಿಯುವ ಮೂಲಕ ಸ್ಮೃತಿ ಮಂಧಾನ, ಅರ್ಧ ಶತಕ ದಾಖಲಿಸಲು ಮುಂದಾಗಿದ್ದ ನತಾಲಿ ವೇಗಕ್ಕೆ ಸೆಕೆಂಡ್‌ನಲ್ಲೇ ಬ್ರೇಕ್ ಹಾಕಿದರು. ಸ್ಮೃತಿ ಮಂಧಾನಾ ಡೈ ಹೊಡೆದು ಬಾಲ್ ಹಿಡಿದ ವಿಡಿಯೋ ಈಗ ವೈರಲ್ ಆಗುತ್ತಿದೆ. ಇತ್ತ ನತಾಲಿ ತಾವು ಬೌಂಡರಿಗೆ ಅಟ್ಟಿದ್ದ ಚೆಂಡನ್ನು ಸ್ಮೃತಿ ಮಂಧಾನ ಕ್ಯಾಚ್ ಹಿಡಿದಿರೋದನ್ನು ಕಂಡು ಒಂದು ಕ್ಷಣ ಆಶ್ಚರ್ಯಚಕಿತರಾಗಿ ನಿಂತರು.
ಭಾರತಕ್ಕೆ ಗೆಲುವು
47 ಓವರ್ ಗಳಲ್ಲಿ ಇಂಗ್ಲೆಂಡ್ ತಂಡ 10 ವಿಕೆಟ್ ಕಳೆದುಕೊಂಡು 219 ರನ್ ಕಲೆಹಾಕಿ ಭಾರತಕ್ಕೆ 220ರ ಗುರಿ ನೀಡಿತ್ತು. ಇಂಗ್ಲೆಂಡ್ ಪರವಾಗಿ ನತಾಲಿ 49, ಎಚ್ ನೈಟ್ 46 ರನ್ ಗಳಿಸಿದ್ದರು. ಇಂಗ್ಲೆಂಡ ನೀಡಿದ ಗುರಿಯನ್ನ ಬೆನ್ನಟ್ಟಿದ ಟೀಂ ಇಂಡಿಯಾ 46.3 ಓವರ್ ನಲ್ಲಿ 6 ವಿಕೆಟ್ ಕಳೆದುಕಂಡು ಗೆಲುವನ್ನ ತನ್ನದಾಗಿಸಿಕೊಂಡಿತು. ತಂಡದ ನಾಯಕಿ ಮಿಥಾಲಿ ರಾಜ್ (ಔಟಾಗದೇ) 75 ರನ್ ಕಲೆ ಹಾಕಿದರು. ಇನ್ನೂ ರೋಚಕ ಕ್ಯಾಚ್ ಪಡೆದುಕೊಂಡಿದ್ದ ಸ್ಮೃತಿ ಮಂಧಾನಾ 49 ರನ್ ಪೇರಿಸಿದರು.
Out of 10, how much would you rate this stunner by Smriti Mandhana? 😍🙌 #ENGvIND #ENGWvINDW pic.twitter.com/M66ivgC88v
— Female Cricket (@imfemalecricket) July 3, 2021
ಮಿಥಾಲಿ ರಾಜ್ ದಾಖಲೆ
ಭಾರತ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ದಾಖಲಿಸಿದ ಆಟಗಾರ್ತಿಯಾಗಿ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ.