ಬೆಂಗಳೂರು: ಹಲವಾರು ವರ್ಷಗಳಿಂದ ಒಂದೇ ಕಡೆ ಬೇರು ಬಿಟ್ಟುಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳ ವರ್ಗಾವಣೆ ಏಕೆ ಆಗಿಲ್ಲ ಎಂಬ ಬಗ್ಗೆ ಹೈ ಕೋರ್ಟ್ನಲ್ಲಿ ರಿಟ್ ಅರ್ಜಿ ಶೀಘ್ರದಲ್ಲೇ ಸಲ್ಲಿಕೆಯಾಗಲಿದೆ.
ಈ ಬಗ್ಗೆ ಸಾರಿಗೆ ನೌಕರರ ಪರ ಹೈ ಕೋರ್ಟ್ನಲ್ಲಿ ವಕಾಲತ್ತು ವಹಿಸಿರುವ ಕರ್ನಾಟಕ ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು ಅವರ ವಕೀಲರ ತಂಡ ಸದ್ದಿಲ್ಲದೆ ರಿಟ್ ಅರ್ಜಿ ಸಲ್ಲಿಸುವ ಸಿದ್ಧತೆಯಲ್ಲಿ ತೊಡಗಿದ್ದು, ಈಗ ಸಾರಿಗೆಯ KSRTC, BMTC, NWKRTC ಮತ್ತು NEKRTC ಸಂಸ್ಥೆಗಳಲ್ಲಿ ಹತ್ತಾರು ವರ್ಷದಿಂದ ಒಂದೇ ಕಡೆ ಬೇರು ಬಿಟ್ಟಿರುವ ಅಧಿಕಾರಿಗಳ ಎದೆಯಲ್ಲಿ ನಡುಕ ಶುರುವಾಗಿದೆ.
ಮೂರು ವರ್ಷಕ್ಕೊಮ್ಮೆ ವರ್ಗಾವಣೆ ಆಗಬೇಕು ಎಂದು ಕಾನೂನಿದ್ದರೂ ಆ ಕಾನೂನನ್ನೇ ಗಾಳಿಗೆ ತೂರಿರುವ ಅಧಿಕಾರಿಗಳು ತಾವು ವರ್ಗಾವಣೆಯಾಗುವುದನ್ನೆ ಸರ್ಕಾರದ ಮಟ್ಟದಲ್ಲೇ ತಡೆದು ಒಂದೇ ಕಡೆ ಬೇರು ಬಿಟ್ಟಿದ್ದಾರೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿ ಬಂದಿದೆ.
ಇನ್ನು ಡಿಪೋಗಳಿಂದ ಡಿಪೋಗೆ ಒಂದೊಂದು ಕಾನೂನು ರೂಪಿಸಿಕೊಂಡಿರುವ ಅಧಿಕಾರಿಗಳು ಚಾಲನಾ ಸಿಬ್ಬಂದಿಗಳನ್ನು ತಮಗೆ ಇಷ್ಟ ಬಂದಂತೆ ನಡೆಸಿಕೊಳ್ಳುವ ಮೂಲಕ ಅವರ ಮೂಲಭೂತ ಹಕ್ಕನ್ನೆ ಕಸಿದುಕೊಂಡು ದರ್ಪ ಮೆರೆಯುತ್ತಿದ್ದಾರೆ ಎಂಬ ಆರೋಪವೂ ಅಧಿಕಾರಿಗಳ ವಿರುದ್ಧ ಕೇಳಿ ಬರುತ್ತಿದೆ. ಆದಕ್ಕೆ ಸಂಬಂಧಪಟ್ಟ ಸಾರಿಗೆ ಸಚಿವರು ಇದೇನು ನಡೆಯುತ್ತಲೇ ಇಲ್ಲ ಎಂಬಂತೆ ಇದು ವರೆಗೂ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸದೆ ಇರುವುದು ಆಶ್ಚರ್ಯವಾಗಿದೆ.
ಇನ್ನು ಸರ್ಕಾರ ಮತ್ತು ಸಚಿವರು ಸಾರಿಗೆ ಚಾಲನಾ ಸಿಬ್ಬಂದಿ, ಮೆಕ್ಯಾನಿಕ್ ಮತ್ತು ಭದ್ರತಾ ಸಿಬ್ಬಂದಿಗಳ ಬಗ್ಗೆ ಒಂದು ರೀತಿಯ ತಾತ್ಸಾರ ತೋರುತ್ತಿರುವುದು ಈಗಾಗಲೇ ದೃಢಪಟ್ಟಂತೆ ಕಾಣುತ್ತಿದೆ. ಅದಕ್ಕೆ ಬಲವಾದ ಇಂಬು ನೀಡುವಂತ ನಿದರ್ಶನ ಎಂದರೆ ಏ.7ರಿಂದ ಏ.20ರ ವರೆಗೂ ನಡೆದ ಮುಷ್ಕರದ ವೇಳೆ ಸರ್ಕಾರ ಅಥವಾ ಸಚಿವರಾಗಲಿ ನೌಕರರ ಸಮಸ್ಯೆಯನ್ನು ಆಲಿಸುವ ಉದಾರ ಮನಸ್ಸು ಮಾಡದಿದ್ದದ್ದು.
ಇನ್ನು ತಮ್ಮ ಕೈ ಯಲ್ಲಿ ಅಧಿಕಾರವಿದೆ ಎಂಬ ದರ್ಪದಿಂದ ಸಾರಿಗೆ ನಿಗಮಗಳ ಅಧಿಕಾರಿ ವರ್ಗ 2 ಸಾವಿರಕ್ಕೂ ಹೆಚ್ಚು ಅಮಾಯಕ ನೌಕರರನ್ನು ವಜಾ, ಅಮಾನತು ಮತ್ತು ವರ್ಗಾವಣೆ ಮಾಡಿ ಅವರನ್ನು ಹೀನಾಯವಾಗಿ ನಡೆಸಿಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ.
ಇದರ ಜತೆಗೆ ಈಗಲೂ ಡಿಪೋಗಳಲ್ಲಿ ಕೆಲಸಕ್ಕೆ ಹಾಜರಾಗುವ ನೌಕರರಲ್ಲಿ ಕೆಲವರನ್ನು ಜೀತದಾಳುಗಳಿಗಿಂತಲೂ ಕೀಳಾಗಿ ನಡೆಸಿಕೊಳ್ಳುತ್ತಿರುವ ಆರೋಪಕ ಕೇಳಿ ಬಂದಿದೆ. ಆದರೆ ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ನಾವು ಆ ರೀತಿ ಯಾರನ್ನೂ ನಡೆಸಿಕೊಳ್ಳುತ್ತಿಲ್ಲ. ನಿಮಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ ಎಂದಷ್ಟೇ ಹೇಳುತ್ತಿದ್ದಾರೆ.
ಈ ಎಲ್ಲದರಿಂದ ನೊಂದ ನಾಲ್ಕೂ ನಿಗಮಗಳ ಹತ್ತಾರು ನೌಕರರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಅವರ ಕುಟುಂಬಕ್ಕೆ ಒಂದು ಸಾಂತ್ವನ ಹೇಳುವ ಸೌಜನ್ಯದ ಮಾತುಗಳನ್ನು ಸಚಿವರಾಗಲಿ ಇಲ್ಲ ಅಧಿಕಾರಿಗಳಾಗಲಿ ಆಡದಿರುವುದು ಹಲವು ನೌಕರರ ಮನಸ್ಸಿನ ಮೇಲೆ ಗಾಯ ಮಾಡಿದೆ.
ಈ ಎಲ್ಲವನ್ನೂ ಬಹಳ ಹತ್ತಿರದಿಂದ ಗಮನಿಸುತ್ತಿರುವ ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು ಅವರು ಈಗ ಹತ್ತಾರು ವರ್ಷಗಳಿಂದ ಒಂದೇಕಡೆ ಬೇರು ಬಿಟ್ಟಿರುವ ಅಧಿಕಾರಿಗಳ ವಿರುದ್ಧ ಸಮರ ಸಾರಿದ್ದು ಶೀಘ್ರದಲ್ಲೇ ಚಾಲನಾ ಸಿಬ್ಬಂದಿಗೆ ಒಂದೊಳ್ಳೆ ಸಂದೇಶವನ್ನು ರವಾನಿಸಲು ಮುಂದಾಗಿದ್ದಾರೆ.
Super sir congrats 😊
Good job
ಒಳ್ಳೆಯ ಬೆಳವಣಿಗೆ ಹಾಗೂ ಸಾಮಾಜಿಕ ಸಾವ೯ಜನಿಕರಿಗೆ ಮತ್ತು ಸಾರಿಗೆ ನಿಗಮದ ನೌಕರರ ಪರವಾಗಿ ಬಂದಂಥ ವಿಜಯದ ಮೊದಲ ಸೂಚನೆ ಅಂದರೆ ಸಾರಿಗೆ ನಿಗಮದ ಭ್ರಷ್ಟ ಅಧಿಕಾರಿಗಳ ಪಾಪದ ಕೊಡ ತುಂಬಿದೆ ಎಂದಥ೯
ಒಳ್ಳೆಯ ಬೆಳವಣಿಗೆ
ನನ್ನ ಮೇಲೆ ಘಟಿಸಿರುವ ಘಟನೆಗಳ ಆಧಾರಿತವಾಗಿ ನಾನು ನಡೆಸುತ್ತಿರುವ ಹೋರಾಟದಲ್ಲಿ ಕಲೆ ಹಾಕಿರುವ ಹಾಗೂ ಹೋರಾಟ ಸಂಬಂಧಿತ ದಾಖಲೆಗಳು ಅವಶ್ಯವೆನಿಸಿ ಈ ಪೂರಕವಾಗಿ ರಿಟ್ ಗೆ ಬೇಕಾದರೆ ಆ ದಾಖಲೆಗಳನ್ನು ತಮಗೆ ಒದಗಿಸಲು ಸಿದ್ದನಿರುವೆನು.
Really good job sir
ನೀವೇ ನಮ್ಮ ದೇವರು ಸರ್
sir good new’s
Asking soon as possible do that work first because they may also know what is transfer suspend
Mysuru ruralu division Ali jasti ne edare sir a one class officers modlu evran etsi sir