ವಾಷಿಗ್ಟನ್: ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್ ನಂತರ ಸಿರಿಶಾ ಬಾಹ್ಯಾಕಾಶಕ್ಕೆ ಹಾರುತ್ತಿರುವ ಮೂರನೇ ಭಾರತೀಯ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೆ ಇಂದು ಪಾತ್ರರಾಗುತ್ತಿದ್ದಾರೆ.
ಹೌದು! ಸ್ಪೇಸ್ ಟೂರಿಸಂ ಕನಸು ಕಂಡಿರುವ `ವೆಲ್ತೀ ಡೇರ್ ಡೆವಿಲ್ ಮೊಘಲ್’ ಹೆಸರುವಾಸಿ ವರ್ಜಿನ್ ಕಂಪನಿಯ ಉದ್ಯಮಿ ರಿಚರ್ಡ್ ಬ್ರಾನ್ಸನ್ ಅವರ 10 ವರ್ಷಗಳ ಸಾಹಸ ಇಂದು ಸಾಕಾರವಾಗಲಿದ್ದು, ರಿಚರ್ಡ್ ಬ್ರಾನ್ಸನ್ ಜೊತೆ ಭಾರತೀಯ ಮೂಲದ ಏರೋನಾಟಿಕಲ್ ಇಂಜಿನಿಯರ್ 34ರ ಹರೆಯದ ಸಿರಿಶಾ ಬಾಂದ್ಲಾ ಸಹ ವರ್ಜಿನ್ ಗ್ಯಾಲಕ್ಟಿಕ್ ಗಗನ ನೌಕೆಯೊಂದಿಗೆ ಬಾಹ್ಯಾಕಾಶಕ್ಕೆ ಹಾರಲಿದ್ದಾರೆ.
ವರ್ಜಿನ್ ಗ್ಯಾಲಾಕ್ಟಿಕ್ ಹೋಲ್ಡಿಂಗ್ ಇಂಕ್ ಕಂಪನಿ ನಾಳೆ ಮೊದಲ ಪ್ರಯಾಣಿಕರ ಸ್ಪೇಸ್ ರಾಕೆಟ್ ಅನ್ನು ಲಾಂಚ್ ಮಾಡುತ್ತಿದೆ. ‘ವಿಎಸ್‍ಎಸ್ ಯುನಿಟಿನಿಟಿ’ ಗಗನ ನೌಕೆಯಲ್ಲಿ ಪ್ರಯಾಣಿಸಲಿರುವ ಆರು ಗಗನಯಾತ್ರಿಗಳಲ್ಲಿ ಇಬ್ಬರು ಮಹಿಳೆಯರಿದ್ದು, ಅದರಲ್ಲಿ ಸಿರಿಶಾ ಕೂಡ ಒಬ್ಬರು.
90 ನಿಮಿಷಗಳ ಈ ಮಹಾತ್ಸಾಧನೆಯಲ್ಲಿ ಎಲ್ಲವೂ ಸರಿಯಾದರೆ ನ್ಯೂ ಮೆಕ್ಸಿಕೋ ಮರಳುಗಾಡಿನ ಮೇಲೆ ಭೂಮಿಯ ಪರಿಧಿಯಿಂದ 50 ಮೈಲಿ ಎತ್ತರಕ್ಕೆ ಯುನಿಟಿ-22 ರಾಕೆಟ್ ಹಾರಲಿದೆ. ಇಬ್ಬರು ಪೈಲಟ್‍ಗಳು, ರಿಚರ್ಡ್ ಬ್ರಾನ್ಸನ್ ಸೇರಿ ನಾಲ್ವರು ತರಬೇತಿ ಹೊಂದಿರುವ ತಜ್ಞರು ಸ್ಪೇಸ್ ಸ್ಟೇಷನ್ ಅಂಚಿನಲ್ಲಿ ಕೆಲ ನಿಮಿಷ ರೋಚಕ ಅನುಭವ ಅನುಭವಿಸಲಿದ್ದಾರೆ.
2 days until #Unity22! There’s space for all, so we invited a few special guests to join our global livestream: @StephenAtHome, @thegreatkhalid, @Cmdr_Hadfield, and @KellieGerardi. Watch the launch live this Sunday at 6 am PT | 9 am ET | 2 pm BST on https://t.co/5UalYT7Hjb pic.twitter.com/olJXZS5Q7Z
— Virgin Galactic (@virgingalactic) July 9, 2021