Vijayapatha – ವಿಜಯಪಥ
Friday, November 1, 2024
NEWSನಮ್ಮರಾಜ್ಯಲೇಖನಗಳು

ಸಾರಿಗೆ ಸಂಸ್ಥೆಗಳಲ್ಲಿನ ಅನಾವಶ್ಯಕ ಹುದ್ದೆಗಳ ಕಡಿತಕ್ಕೆ ಸರ್ಕಾರ ಆದೇಶ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಅನಾವಶ್ಯಕ ಹುದ್ದೆಗಳನ್ನು ಕಡಿತಗೊಳಿಸಿ, ಹುದ್ದೆಗಳ ಗಾತ್ರವನ್ನು ಪುನಾರಚಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಕೊರೊನಾ ಸಂಕಷ್ಟದ ಸಮಯದಲ್ಲಿ ನೌಕರರಿಗೆ ಸಮರ್ಪಕವಾಗಿ ವೇತನ ನೀಡಲು ಆಗುತ್ತಿಲ್ಲ. ಇದರ ಜತೆಗೆ ಸಂಸ್ಥೆಗಳಲ್ಲಿ ಅನಾವಶ್ಯಕ ಹುದ್ದೆಗಳಿದ್ದು ಅವುಗಳಿಂದ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಅವುಗಳನ್ನು ಕಡಿತಗೊಳಿಸಿ ಎಂದು ನಾಲ್ಕೂ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಸತ್ಯಾವತಿ ಆದೇಶ ಹೊರಡಿಸಿದ್ದಾರೆ.

ಹೆಚ್ಚಿನ ಮತ್ತು ಅನಾವಶ್ಯಕ ಹುದ್ದೆಗಳನ್ನು ಸರೆಂಡರ್ ಮಾಡುವಂತೆ ತಿಳಿಸಿದ್ದು, ಈ ಬಗ್ಗೆ ಅಧಿಕಾರಿಗಳು ಯಾವರೀತಿ ಅನಾವಶ್ಯಕ ಹುದ್ದೆಗಳನ್ನು ಪಟ್ಟಿ ಮಾಡಿ ಸಲ್ಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಸರ್ಕಾರ ಈ ಹಿಂದಿನಿಂದಲೂ ಅನಾವಶ್ಯಕ ಹುದ್ದೆಗಳನ್ನು ಸರೆಂಡರ್ ಮಾಡುವಂತೆ ತಿಳಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತಿಲ್ಲ.

ಇದರಿಂದ ಅನಾವಶ್ಯಕ ಹುದ್ದೆಗಳನ್ನು ಕಡಿತ ಮಾಡುವ ಸುತ್ತೋಲೆಯನ್ನು ಸರ್ಕಾರ ಹೊರಡಿಸುವುದು ಸಾಮಾನ್ಯ ಎಂಬಂತೆ ಬಿಂಬಿತವಾಗುತ್ತಿದೆ. ಅದರಿಂದ ಸಂಸ್ಥೆಗಳು ಕೋಟ್ಯಂತರ ರೂ. ನಷ್ಟವನ್ನು ಅನುಭವಿಸುವಂತಾಗಿದೆ.

ಇನ್ನಾದರೂ ಅಧಿಕಾರಿಗಳು ಸರ್ಕಾರ ಹೊರಡಿಸಿರುವ ಆದೇಶವನ್ನು ಪಾಲಿಸಬೇಕಿದೆ. ಇಲ್ಲ ಸರ್ಕಾರ ಅನಾವಶ್ಯಕ ಹುದ್ದೆಗಳ ಕಡಿತಕ್ಕೆ ಒಂದು ಕಾಲಮಿತಿಯನ್ನು ಹೇರಿ ಆದೇಶ ಹೊರಡಿಸಬೇಕಿದೆ. ಇದಾವು ಜಾರಿಯಾಗದಿದ್ದರೆ ಸರ್ಕಾರ ಹೊರಡಿಸುವ ಆದೇಶ ಕಾಗದದ ಹುಲಿಯಂತಾಗುತ್ತದೆ.

2 Comments

  • BMTC yalli dc dto dme 4 dc Ofees galu Eve 10 year enda enu laba agilla Dayavittu raddu Madi 1 Dc 1 Dto 1DmE eddar saku 1 Dc Ofees end 15 rinda 20 Laxa ulisabudu

  • First they should cancel all kind of pass…..issued by department let all of them take daily pass or tickets & travel, Assistant traffic supervisor in every depot is not required depot manager and Traffic inspector can do the bookings of routes.so automatically revenue will raise up in department 👍🙏

Leave a Reply

error: Content is protected !!
LATEST
KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ...