ಪಿರಿಯಾಪಟ್ಟಣ : ಒಂದೇ ರಾತ್ರಿಯಲ್ಲಿ ಎರಡು ಹಸುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿದ ಹುಲಿಯನ್ನು ಹಿಡಿಯಲು ಅರಣ್ಯ ಇಲಾಖೆಯ ಆನೆಗಳ ಸಹಕಾರದಿಂದ ಕೂಂಬಿಂಗ್ ನಡೆಸಲಾಗುತ್ತಿದೆ.
ಪಿರಿಯಾಪಟ್ಟಣದಲ್ಲಿ ಕೆಲ ದಿನಗಳ ಹಿಂದೆ ಹುಣಸೇಕುಪ್ಪೆ, ಲಕ್ಷ್ಮಿಪುರ, ಬೂದಿತಿಟ್ಟು ಸೇರಿದಂತೆ ಇನ್ನಿತರ ಮುಂತಾದ ಭಾಗಗಗಳಲ್ಲಿ ಹುಲಿ ಹೆಜ್ಜೆಗುರುತುಗಳು ಕಂಡು ಬಂದಿದ್ದು ಹುಣಸೇಕುಪ್ಪೆ ಗ್ರಾಮದ ಶ್ರೀನಿವಾಸ್ ಎಂಬುವವರಿಗೆ ಹುಲಿ ದರ್ಶನವಾಗಿತ್ತು.
ಹೀಗೆ ಹೆಜ್ಜೆಗುರುತುಗಳು ಮೂಲಕ ಭಯಹುಟ್ಟಿಸುತ್ತಿದ್ದ ವ್ಯಾರ್ಘ ಗುರುವಾರ ರಾತ್ರಿ ಮುತ್ತೂರು ಕಾಳೆತಿಮ್ಮಹಳ್ಳಿ, ಮಲ್ಲೇಗೌಡನ ಕೊಪ್ಪಲು ಮತ್ತು ಮಲ್ಲಯ್ಯನಕೊಪ್ಪಲು ದಡ ಮುಂತಾದ ಕಡೆ ಹಸುಗಳ ಮೇಲೆ ದಾಳಿ ಮಾಡಿ ಈ ಪೈಕಿ ಎರಡು ಹಸುಗಳನ್ನು ಹುಲಿ ಕೊಂದು ಹಾಕಿದ್ದು ಹಸುವಿನ ಕಳೆಬರವನ್ನು ಜೋಳದ ಹೊಲಕ್ಕೆ ಎಳೆದುಕೊಂಡು ಹೋಗಿ ಹಸುವನ್ನು ತಿಂದು ಹಾಕಿತ್ತು.
ಒಂದೆ ರಾತ್ರಿಯಲ್ಲಿ ಎರಡು ಹಸುಗಳ ಮೇಲೆ ದಾಳಿ ಮಾಡಿದ್ದು ಈ ಬಗ್ಗೆ ಎಚ್ಚೆತ್ತ ಅರಣ್ಯ ಇಲಾಖೆ ಶುಕ್ರವಾರ ಬೆಳಗ್ಗೆಯಿಂದಲೆ ಹುಲಿ ಪತ್ತೆಗೆ ಕಾರ್ಯಾಚರಣೆ ನಡೆಸಿತ್ತು.
ತಿಮಕಾಪುರ ಗ್ರಾಮದ ಜೋಳದ ಹೊಲ ಒಂದರಲ್ಲಿ ಸಂಜೆ 5 ಗಂಟೆಯ ವೇಳಗೆ ಹುಲಿ ಹಸು ತಿಂದಿದ್ದ ಜೋಳದ ಹೊಲದ ಬಳಿ ಇರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಸಾಕಾನೆಗಳನ್ನು ಸ್ಥಳಕ್ಕೆ ಕರೆಯಿಸಿ ಕೂಂಬಿಂಗ್ ಕಾರ್ಯಾಚರಣೆ ಮಾಡಲಾಯಿತು.
ತಿಮಕಾಪುರ ಗ್ರಾಮದ ಜೋಳಹೊಲದಲ್ಲಿ ಹುಲಿ ಇರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ತಿಮಕಾಪುರ ಗ್ರಾಮದ ಖಾಸಗಿ ಜಮೀನಿನಲ್ಲಿ ಸಾಕಾನೆಗಳನ್ನು ಕರೆಯಿಸಿ ಕೂಂಬಿಂಗ್ ಮಾಡುಲಾಗುತ್ತಿದ್ದು ಹುಲಿ ಸೆರೆಸಿಕ್ಕುವ ಸಹಾಯಕ ಸಂರಕ್ಷಣಾಧಿಕಾರಿ ಸತೀಶ್‌ಕುಮಾರ್, ಅರಣ್ಯ ರಕ್ಷಕರಾದ ಸಂಜಯ್‌ಕುಮಾರ್, ಬಿ.ಎಸ್.ದಿವಾಕರ್, ರವಿಲಂಬಾಣಿ, ಎಸ್‌ಟಿಪಿಎಫ್ ಸಿಬ್ಬಂದಿ ಹಾಜರಿದ್ದಾರೆ.