NEWSದೇಶ-ವಿದೇಶನಮ್ಮರಾಜ್ಯ

ಇಂದಿನಿಂದ ರಜಾದಿನಗಳಲ್ಲೂ ನೌಕರರ ಬ್ಯಾಂಕ್‌ ಖಾತೆಗೆ ಬರಲಿದೆ ವೇತನ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಇಂದಿನಿಂದ ಇನ್ನು ಮುಂದೆ ನೀವು  ಶನಿವಾರ, ಭಾನುವಾರ ಮತ್ತು ಇತರ ರಜಾದಿನವಾದ್ದರಿಂದ ವೇತನ ಸೋಮವಾರ ಆಗುತ್ತದೆ ಎನ್ನುವ ಚಿಂತೆ ಇಲ್ಲ.

ಹೌದು! ನಿಮ್ಮ ವೇತನ, ಪಿಂಚಣಿ, ಇಎಂಐ ಪಾವತಿಗೆ ಬ್ಯಾಂಕ್‌ ರಜಾ ದಿನಗಳು ಆಗಸ್ಟ್‌ 1ರಿಂದ ಅಡ್ಡಿಯಾಗುತ್ತಿಲ್ಲ. ಆ ರೀತಿ ನ್ಯಾಷನಲ್‌ ಆಟೋಮೇಟೆಡ್‌ ಕ್ಲಿಯರಿಂಗ್‌ ಹೌಸ್‌ನ ಸೇವೆ ವಾರದ ಎಲ್ಲ ದಿನಗಳಲ್ಲೂ, ದಿನದ 24 ಗಂಟೆಯೂ ದೊರೆಯಲಿದೆ.

ಕ್ಲಿಯರಿಂಗ್‌ ಹೌಸ್‌ನ ಸೇವೆ ಇದುವರೆಗೆ ಸೋಮವಾರದಿಂದ ಶುಕ್ರವಾರದ ವರೆಗೆ ಮಾತ್ರ ಲಭ್ಯವಾಗುತ್ತಿತ್ತು. ಇಂದಿನಿಂದ ವಾರದ ಎಲ್ಲ ದಿನವೂ ಸೇವೆ ಲಭ್ಯವಾಗಲಿದೆ. ಈ ಬದಲಾವಣೆ ಬಗ್ಗೆ ಆರ್‌ಬಿಐ ಇತ್ತೀಚೆಗೆ ಸೂಚಿಸಿದ್ದು, ಜಾರಿಯಾಗಿದೆ.

ಹೀಗಾಗಿ ವೇತನ, ಇಎಂಐ, ಬಿಲ್‌ ಪಾವತಿ, ವಿಮೆ ಪ್ರೀಮಿಯಂ ಪಾವತಿ, ಪಿಂಚಣಿ ವರ್ಗಾವಣೆಗಳನ್ನು ವಾರಾಂತ್ಯದ ದಿನಗಳಲ್ಲೂ ಮಾಡಬಹುದು. ಇಲ್ಲಿಯವರೆಗೆ ಬ್ಯಾಂಕ್‌ ರಜಾ ದಿನಗಳಲ್ಲಿ ಇಂಥ ಹಣಕಾಸು ವರ್ಗಾವಣೆಗಳು ನಡೆಯದೆ ವಿಳಂಬವಾಗುತ್ತಿತ್ತು.

ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎನ್‌ಪಿಸಿಐ) ಸಂಸ್ಥೆಯು ನ್ಯಾಷನಲ್‌ ಆಟೋಮೇಟೆಡ್‌ ಕ್ಲಿಯರಿಂಗ್‌ ಹೌಸ್‌ (ಎನ್‌ಎಸಿಎಚ್‌) ಅನ್ನು ನಿರ್ವಹಿಸುತ್ತಿದೆ.

ಬ್ಯಾಂಕ್‌, ಹಣಕಾಸು ಸಂಸ್ಥೆಗಳು, ಕಾರ್ಪೊರೇಟ್‌ ಕಂಪನಿಗಳು, ಸರ್ಕಾರಗಳು ಇದರ ವೆಬ್‌ ಆಧಾರಿತ ಸಲ್ಯೂಷನ್‌ ಸೇವೆಯನ್ನು ಪಡೆಯುತ್ತವೆ. ದೊಡ್ಡ ಮೊತ್ತದ ಆನ್‌ಲೈನ್‌ ಹಣಕಾಸು ವರ್ಗಾವಣೆಗಳಿಗೆ ಇದು ಸುಲಭ.

ಸಬ್ಸಿಡಿ, ಡಿವಿಡೆಂಡ್‌, ಬಡ್ಡಿ ದರ, ವೇತನ, ಪಿಂಚಣಿ ಪಾವತಿಗೆ, ಟೆಲಿಫೋನ್‌, ವಿದ್ಯುತ್‌, ನೀರು, ಸಾಲದ ಇಎಂಐ, ವಿಮೆ, ಮ್ಯೂಚುವಲ್‌ ಫಂಡ್‌ ಪಾವತಿಗೆ ಇದು ಸಹಕಾರಿ. ರಜಾ ದಿನಗಳಲ್ಲಿಯೂ ಇವುಗಳ ವರ್ಗಾವಣೆಗೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ ಎಂದು ಆರ್‌ಬಿಐ ತಿಳಿಸಿದೆ.

ನಂದಿಬೆಟ್ಟ ಬಂದ್: ಬ್ರಹ್ಮಗಿರಿ ಬೆಟ್ಟವೇರಿ ಪ್ರವಾಸಿಗರ ಮೋಜು ಮಸ್ತಿ

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ