ಪಿರಿಯಾಪಟ್ಟಣ: ಕಳೆದ ಮೂವತ್ತು ವರ್ಷಗಳಿಂದ ಅಭಿವೃದ್ಧಿ ಕಾಣದೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಶಕ್ತಿಮೀರಿ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ತಾಲೂಕಿನ ರಾವಂದೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ಗುದ್ದಲಿಪೂಜೆ ಹಾಗೂ ಬೆಟ್ಟದಪುರದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ, ಸರ್ವೋದಯ ಗ್ರಾಮ ಪರಿಕಲ್ಪನೆಯಡಿ ವಿವಿಧ ಯೋಜನೆಗಳ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ರಾವಂದೂರು ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರ ಹೆಚ್ಚು ಜನರು ಶ್ರೀಮಂತರನ್ನು ಹೊಂದಿರುವ ಗ್ರಾಮ ಹಾಗಾಗಿ 40 ವರ್ಷಗಳ ಹಿಂದೆಯೇ ಸಾರ್ವಜನಿಕರ ಉಪಯೋಗಕ್ಕಾಗಿ ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದರೂ ಕಳಪೆ ಗುಣಮಟ್ಟದ ಕಾಮಗಾರಿಯಿಂದ ಈಗ ಆಸ್ಪತ್ರೆಯ ಕಟ್ಟಡ ಶಿಥಲಾವಸ್ಥೆಗೆ ಬಂದು ತಲುಪಿದೆ.
158 ಲಕ್ಷ ರೂ. ವೆಚ್ಚದಲ್ಲಿ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡುವ ಮೂಲಕ ಹೆಚ್ಚು ಕಾಲ ಬಾಳಿಕೆ ಬರುವಂತೆ ಮುತುವರ್ಜಿ ವಹಿಸಬೇಕು. ಸ್ಥಳೀಯ ಮುಖಂಡರು ಈ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದ ಕಾಮಗಾರಿಯನ್ನು ಪ್ರತಿದಿನ ಗಮನಿಸುತ್ತಿರಬೇಕು. ಕಳಪೆ ಕಾಮಗಾರಿ ಎಂದು ಕಂಡು ಬಂದರೆ ತಕ್ಷಣ ನನ್ನ ಅಥವಾ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ಸದ್ಯದಲ್ಲಿಯೇ ರಾವಂದೂರಿಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಟ್ಟಡ ಕಾಮಗಾರಿಗೆ 2 ಕೋಟಿ ರೂ. ಬಿಡುಗಡೆ ಮಾಡಿದ್ದು, ಟೆಂಡರ್ ಹಂತದಲ್ಲಿದೆ. ರಾವಂದೂರು ಅಕ್ಕಪಕ್ಕದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇರುವುದರಿಂದ ರಾವಂದೂರಿನಲ್ಲಿ ಪದವಿ ಕಾಲೇಜು ನಿರ್ಮಿಸುವಂತೆ ಸಾರ್ವಜನಿಕರು ಒತ್ತಡ ಹೇರಿದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವರಿಗೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.
ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ, ಗ್ರಾಪಂ ಪಿಡಿಒಗಳಾದ ದಿವಾಕರ್, ಮಲ್ಲೇಶ್, ಅಧ್ಯಕ್ಷರಾದ ಆರ್.ಎಸ್.ವಿಜಯಕುಮಾರ್, ಮಂಜುಳಾ, ಆಸೀಯಾಖಾನ್, ಗೀತಾ, ಸರ್ವಮಂಗಳ, ಉಪಾಧ್ಯಕ್ಷರಾದ ನೇತ್ರಾವತಿ, ಸೌಮ್ಯ, ಮುಖಂಡರಾದ ಅಣ್ಣಯ್ಯಶೆಟ್ಟಿ, ಎಸ್.ಎ.ಶಿವಣ್ಣ, ಕೆ.ಎಸ್.ಮಂಜುನಾಥ್, ಎಸ್.ರಾಮು, ಮಲ್ಲಿಕಾರ್ಜುನ್. ದೊರೇಕೆರೆ ನಾಗೇಂದ್ರ, ಆರ್.ಎಲ್.ಮಣಿ, ಆರ್.ಟಿ.ಸತೀಶ್.
ಎಇಇಗಳಾದ ದೊರೆಸ್ವಾಮಿ, ಮಂಜುನಾಥ್, ಕುಮಾರ್, ಜಯಂತ್, ಶಿವಕುಮಾರ್, ಬಿಇಒ ವೈ.ಕೆ.ತಿಮ್ಮೇಗೌಡ, ಪಶುಪಾಲಾನ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಡಾ.ಸಂದೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು, ವೈದ್ಯಾಧಿಕಾರಿ ಡಾ.ಸುನಿಲ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಗೊದ್ರೇಜ್ ಜೊತೆ ಕೈಜೋಡಿಸಿರುವ ಅರವಿಂದ್ ಲಿಂಬಾವಳಿ ವಿರುದ್ಧ ತನಿಖೆ ನಡೆಯಲಿ: ಎಎಪಿ ಆಗ್ರಹ