NEWSನಮ್ಮರಾಜ್ಯರಾಜಕೀಯ

ಉಚ್ಛಾಟನೆ ಮಾಡಿದರೂ ನಾವು ಬಿಜೆಪಿಗೇ ವೋಟ್ ಹಾಕೋದು: ಶಾಸಕ ಸಿದ್ದು ಸವದಿ ವ್ಯಂಗ್ಯ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಭಾರತೀಯ ಜನತಾ ಪಾರ್ಟಿಯಿಂದ ಉಚ್ಛಾಟನೆ ಮಾಡಿದರೂ ನಾವು ಬಿಜೆಪಿಗೇ ವೋಟ್ ಹಾಕುವುದು ಎಂದು ಸಚಿವ ಸ್ಥಾನ ತಪ್ಪಿದ್ದಕ್ಕೆ ವ್ಯಂಗ್ಯವಾಗಿ ಶಾಸಕ ಸಿದ್ದು ಸವದಿ ಹೇಳಿದ್ದಾರೆ.

ಬೊಮ್ಮಾಯಿ ಸರ್ಕಾರದ ಸಚಿವರ ಪಟ್ಟಿ ಬಿಡುಗಡೆಯಾಗಿದ್ದು, ಸದ್ಯ ಬಿಜೆಪಿಯಲ್ಲಿ ಹಲವು ಶಾಸಕರ ಅಸಮಾಧಾನ ಸ್ಫೋಟವಾಗುತ್ತಿದೆ. ಈ ಬಗ್ಗೆ ಮಾತನಾಡಿದ ಸಿದ್ದು ಸವದಿ, ನನಗೆ ಸಚಿವ ಸ್ಥಾನ ಕೊನೆಯ ಬಾರಿ ಕೈ ತಪ್ಪುವುದು ಅಲ್ಲ ಅವರು ನಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ನಮ್ಮಂತವರು ಲೆಕ್ಕಕ್ಕೇ ಬರಂಗಿಲ್ಲ. ನಮಗಿಂತ ಜ್ಯೂನಿಯರ್ ಗಳನ್ನು, ನಾವೇ ಪಕ್ಷಕ್ಕೆ ಕರೆತಂದವರನ್ನು ಇಂದು ಮಿನಿಸ್ಟರ್ ಮಾಡುತ್ತಿದ್ದಾರೆ. ಹೀಗೆ ಬೇರೆ ಬೇರೆ ರೀತಿಯಿಂದ ಯಾಕೆ ಅವರನ್ನು ಮಂತ್ರಿ ಮಾಡುತ್ತಾರೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಾಳಿದವನೇ ಬಾಳಿಯಾನು ಅಂತಾರಲ್ವ ಹಂಗೆ ಸಹಿಸಿಕೊಳ್ಳುದಷ್ಟೇ. ಕಾರಣ ನಮ್ಮನ್ನು ಮಂತ್ರಿಗಳಾಗಿ ಮಾಡುತ್ತಿಲ್ಲ. ಮಂತ್ರಿಯಾಗಲು ನನಗೇನು ಕೊರತೆ ಇದೆ ಅಂತ ಹೈಕಮಾಂಡ್ ಅವರನ್ನೇ ಕೇಳಬೇಕು. ಮೌನವಾಗಿರುವವರಿಗೆ, ನಿಯತ್ತಾಗಿರುವವರಿಗೆ, ಪಕ್ಷಕ್ಕೆ ಬದ್ಧರಾಗಿರುವವರಿಗೆ ಕೊಡುತ್ತಿಲ್ಲ. ಇವರು ಎಲ್ಲೂ ಹೋಗಂಗಿಲ್ಲ, ಏನೂ ಮಾಡಂಗಿಲ್ಲ ಅನ್ನೋ ವಿಶ್ವಾಸ ಇರಬೇಕು. ಹಾಗಾಗಿ ನಮಗೆ ಸಚಿವ ಸ್ಥಾನ ಕೊಡದೇ ಇರಬಹುದು ಎಂದು ಬೇಸರದ ನುಡಿಗಳನ್ನಾಡಿದರು.

ಡಬಲ್ ಗೇಮ್ ಆಡೋರು, ಪಕ್ಷಕ್ಕೆ ಚೂರಿ ಹಾಕುವವರನ್ನು ಮಂತ್ರಿ ಮಾಡುತ್ತಾರೆ. ಇನ್ನು ನಮ್ಮ ಹಣೆಬರಹ ಚೆನ್ನಾಗಿಲ್ಲ. ಅದಿಕೆ ಮಂತ್ರಿ ಆಗಿಲ್ಲ. ನಾವು ಲಾಬಿ ಮಾಡಲ್ಲ, ನೇರವಾದಿಗಳು. ಮುಂದೆ ಒಳ್ಳೆಯ ಕಾಲ ಬರುತ್ತೆ ಎಂಬ ವಿಶ್ವಾಸ ನನಗಿದೆ ಎಂದರು.

ಸಚಿವಸ್ಥಾನ ಸಿಗದ ಅಸಮಾಧಾನದಿಂದಲೇ ಟಾಂಗ್‌ ಕೊಟ್ಟ ಶಾಸಕ ಎಸ್.ಎ.ರಾಮದಾಸ್‌

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...