ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವ ಸರ್ಕಾರದ 29 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು. ಈಗ ಸಚಿವ ಸಂಪುಟ ರಚನೆಯಾಗಿದೆ.
ಇನ್ನು ಯಾರಿಗೆ ಯಾವ ಖಾತೆ ಹಂಚಿಕೆ ಮಾಡಬೇಕು ಎಂಬ ಬಗ್ಗೆ ಸಿಎಂ ಹೈ ಕಮಾಂಡ್ ಮಾರ್ಗದರ್ಶನಲ್ಲಿ ಪಟ್ಟಿ ಸಿದ್ದಪಡಿಸುತ್ತಿದ್ದು, ಬಹುತೇಕ ಯಡಿಯೂರಪ್ಪ ಅವರ ಸಂಪುಟದಲ್ಲಿದ್ದ ಖಾತೆಗಳ ಮರುಹಂಚಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ಇಂದು ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರಿಗೆ ಇನ್ನೂ ಖಾತೆ ಹಂಚಿಕೆ ಆಗಿಲ್ಲ. ಹೀಗಾಗಿ ಸಂಭಾವ್ಯ ಪಟ್ಟಿ ಸಿದ್ಧವಾಗಿದ್ದು ಬಹುತೇಕ ಇದೇ ಖಾತೆಗಳು ಅಂತಿಮವಾಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ. ಆದರೆ ಕೊನೆ ಕ್ಷಣದಲ್ಲಿ ಯಾವ ಬದಲಾವಣೆ ಆಗುತ್ತದೆಯೋ ಗೊತ್ತಿಲ್ಲ.
ಸದ್ಯಕ್ಕೆ ಸಂಭಾವ್ಯ ಖಾತೆ ಪಟ್ಟಿ ಇಂತಿದೆ
ಉಮೇಶ್ ಕತ್ತಿ-ಕಂದಾಯ ಖಾತೆ
ಬಿ.ಶ್ರೀರಾಮುಲು-ಸಮಾಜ ಕಲ್ಯಾಣ ಖಾತೆ
ಡಾ.ಕೆ.ಸುಧಾಕರ್-ಆರೋಗ್ಯ ಖಾತೆ
ಗೋವಿಂದ ಕಾರಜೋಳ-ಲೋಕೋಪಯೋಗಿ
ಕೆ.ಎಸ್. ಈಶ್ವ ರಪ್ಪ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಆರ್.ಅಶೋಕ್-ಗೃಹ ಮತ್ತು ಸಾರಿಗೆ
ಆರಗ ಜ್ಞಾನೇಂದ್ರ-ಅರಣ್ಯ/ ತೋಟಗಾರಿಕೆ ಮತ್ತು ರೇಷ್ಮೆ
ಬಿ.ಸಿ.ಪಾಟೀಲ್-ಕೃಷಿ ಖಾತೆ
ಎಸ್.ಅಂಗಾರ-ಬಂದರು, ಮೀನುಗಾರಿಕೆ, ಒಳನಾಡು ಜಲಸಾರಿಗೆ
ಡಾ.ಅಶ್ವತ್ಥ್ ನಾರಾಯಣ-ಬೆಂಗಳೂರು ನಗರಾಭಿವೃದ್ಧಿ, ಐಟಿ-ಬಿಟಿ
ವಿ.ಸೋಮಣ್ಣ-ವಸತಿ ಖಾತೆ
ನಿರಾಣಿ-ಬೃಹತ್ ಮತ್ತು ಮಧ್ಯಮ ಕೈಗಾರಿಕೆ/ ಗಣಿ ಮತ್ತು ಭೂವಿಜ್ಞಾನ
ಭೈರತಿ ಬಸವರಾಜ್-ನಗರಾಭಿವೃದ್ಧಿ ಖಾತೆ
ಕೆ.ಗೋಪಾಲಯ್ಯ-ಅಬಕಾರಿ ಖಾತೆ
ಜೆ.ಸಿ.ಮಾಧುಸ್ವಾಮಿ-ಸಣ್ಣ ನೀರಾವರಿ, ಉನ್ನತ ಶಿಕ್ಷಣ
ಕೋಟ ಶ್ರೀನಿವಾಸ ಪೂಜಾರಿ-ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಎಸ್.ಟಿ.ಸೋಮಶೇಖರ್-ಸಹಕಾರ
ಶಿವರಾಮ್ ಹೆಬ್ಬಾರ್-ಕಾರ್ಮಿಕ ಇಲಾಖೆ
ಶಶಿಕಲಾ ಜೊಲ್ಲೆ-ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಪ್ರಭು ಚೌಹಾಣ್-ಪಶು ಸಂಗೋಪನೆ
ಮುನಿರತ್ನ-ಸಣ್ಣ ಕೈಗಾರಿಕೆ ಇಲಾಖೆ
ಸುನಿಲ್ ಕುಮಾರ್-ಪ್ರವಾಸೋದ್ಯಮ
ಸಿ.ಸಿ.ಪಾಟೀಲ್-ವಾರ್ತಾ/ ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಎಂಟಿಬಿ ನಾಗರಾಜ್-ಪೌರಾಡಳಿತ ಮತ್ತು ಸಕ್ಕರೆ ಖಾತೆ
ಶಂಕರಪಾಟೀಲ್ ಮುನೇನಕೊಪ್ಪ-ಮೂಲಸೌಕರ್ಯ / ಯೋಜನೆ ಮತ್ತು ಸಾಂಖ್ಯಿಕ
ಬಿ.ಸಿ.ನಾಗೇಶ್-ಪ್ರಾಥಮಿಕ ಮತ್ತು ಶಿಕ್ಷಣ ಇಲಾಖೆ
ಆನಂದ್ ಸಿಂಗ್-ಪರಿಸರ ಮತ್ತು ಜೀವಿಶಾಸ್ತ್ರ/ಮೂಲ ಸೌಕರ್ಯ
ಹಾಲಪ್ಪ ಆಚಾರ್-ಜವಳಿ
ಕೆ.ಸಿ.ನಾರಾಯಣಗೌಡ-ಯುವಜನ ಮತ್ತು ಕ್ರೀಡಾ ಇಲಾಖೆ