CrimeNEWSನಮ್ಮರಾಜ್ಯ

ಆ.27ರಂದು ಸಾರಿಗೆ ನೌಕರರಿಗೆ ನ್ಯಾಯಾಲಯದಲ್ಲಿ ಒಳ್ಳೆಯದಾಗುವ ವಿಶ್ವಾಸವಿದೆ: ವಕೀಲ ಅಮೃತೇಶ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಜಾ, ಅಮಾನತು ಮತ್ತು ವರ್ಗಾವಣೆಗೊಂಡಿರುವ ಸಾರಿಗೆ ನೌಕರರಿಗೆ ಮುಂದಿನ ಆ.27ರಂದು ಹೈ ಕೋರ್ಟ್‌ನಲ್ಲಿ  ಪ್ರಕರಣ ವಿಚಾರಣೆಗೆ ಬರಲಿದ್ದು, ಅಂದು ಬಹುತೇಕ ಒಳ್ಳೆಯದಾಗುವ ವಿಶ್ವಾಸವಿದೆ ಎಂದು ನೌಕರರ ಪರ ವಕೀಲ ಅಮೃತೇಶ್‌ ತಿಳಿಸಿದ್ದಾರೆ.

ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಏಪ್ರಿಲ್‌ನಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಿದ ವೇಳೆ ನಾಲ್ಕೂ ನಿಗಮಗಳಲ್ಲಿ ಹಲವು ನೌಕರರಿಗೆ ವಜಾ, ಅಮಾನತು ಮತ್ತು ವರ್ಗಾವಣೆಯಂತಹ ಶಿಕ್ಷೆ ನೀಡಿದ್ದು, ಈ ಸಂಬಂಧ ದಾಖಲಾಗಿರುವ ನೌಕಕರರ ಪ್ರಕರಣ  ಕಳೆದ ಮಂಗಳವಾರ ಹೈ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆ ನಡೆಯಿತು.

ಈ ವೇಳೆ ಸಾರಿಗೆ ನೌಕರರ ಪರ ವಕೀಲ ಅಮೃತೇಶ್‌ ಅವರು, ವಜಾ ಮತ್ತು ವರ್ಗಾವಣೆಗೊಂಡ ನೌಕರರ ಬಗ್ಗೆ ಇದುವರೆಗೂ ಸರಿಯಾದ ನಿಲುವನ್ನು ಸಾರಿಗೆ ಅಧಿಕಾರಿಗಳು ತೆಗೆದುಕೊಂಡಿಲ್ಲ. ತಮಗೆ ಇಷ್ಟ ಬಂದ ಕೆಲವೇ ಕೆಲವು ನೌಕರರ ವರ್ಗಾವಣೆಯನ್ನು ರದ್ದು ಪಡಿಸಿದ್ದು, ಆದರೆ ಅವರಿಗೂ ಮೂಲ ಸ್ಥಳದಲ್ಲೇ ಕರ್ತವ್ಯ ನಿರ್ವಹಿಸಲ ಬಿಡದೆ ಮತ್ತೆ ಬೇರೆ ಡಿಪೋಗಳಿಗೆ ವರ್ಗಾವಣೆ ಮಾಡಲಾಗಿದೆ ಇದು ಯಾವ ನ್ಯಾಯ ಹೇಳಿ ಎಂದು ವಾದ ಮಂಡಿಸಿದರು.

ಇನ್ನು ವಜಾಗೊಂಡ ನೌಕರರ ಬಗ್ಗೆ ಇದುವರೆಗೂ ಮಾನವೀಯತೆ ನೆಲೆಗಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದ್ದ ಸಾರಿಗೆ ನಿಗಮಗಳ ಅಧಿಕಾರಿಗಳು ಅದನ್ನು ಮರೆತು ನೌಕರರಿಗೆ ಅನಾನುಕೂಲವಾಗುವಂತೆ ಮಾಡಿದ್ದು, ಇದರಿಂದ ವಜಾಗೊಂಡಿರುವ ನೌಕರರು ಅತಂತ್ರ ಸ್ಥಿತಿಯನ್ನು ತಲುಪಿದ್ದಾರೆ. ಹೀಗಾಗಿ ಅವರಿಗೆ ಶೀಘ್ರ ಗತಿಯಲ್ಲಿ ನ್ಯಾಯ ದೊರಕಿಸಿಕೊಡುವ ಮೂಲಕ ಅವರ ಕುಟುಂಬಗಳನ್ನು ಗೌರವಯುತವಾಗಿ ಬದುಕುವಂತೆ ಮಾಡಬೇಕು ಎಂದು ಮುಖ್ಯನ್ಯಾಯಮೂರ್ತಿ ಎ.ಎಸ್‌. ಓಕಾ ಮತ್ತು ಸೂರಜ್‌  ಗೋವಿಂದರಾಜ್‌ ಅವರನ್ನೊಳಗೊಂಡ ನ್ಯಾಯಪೀಠದ ಗಮನ ಸೆಳೆದರು.

ಇನ್ನು ಕೆಎಸ್‌ಆರ್‌ಟಿಸಿ ಪರ ವಕೀಲರು ಕೆಲವು ನೌಕರರ ವರ್ಗಾಣೆ ಮತ್ತು ವಜಾವನ್ನು ವಾಪಸ್‌ ತೆಗೆದುಕೊಂಡು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಪೀಠದ ಗಮನಕ್ಕೆ ತಂದರು.

ಎಷ್ಟು ನೌಕರರನ್ನು ವಾಪಸ್‌ ಕರೆಸಿಕೊಂಡಿದ್ದೀರಿ ಎಂದು ಕೇಳಿದಾಗ ಅದಕ್ಕೆ ಸಮಂಜಸವಾದ ಉತ್ತರ ನೀಡದ ಕೆಎಸ್‌ಆರ್‌ಟಿಸಿ ಪರ ವಕೀಲರು ಈ ಬಗ್ಗೆ ಮುಂದಿನ ವಿಚಾರಣೆಯಲ್ಲಿ ಪಕ್ಕ ಮಾಹಿತಿ ಕೊಡುತ್ತೇವೆ ಎಂದರು ಅದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ ನ್ಯಾಯಪೀಠ ಇನ್ನು ಸರಿಯಾದ ಯಾವುದೇ ಕ್ರಮದಲ್ಲಿ ನೌಕರರ ವಿವರ ಕೊಡುತ್ತಿಲ್ಲ ಎಂದರೆ ನೌಕರರ ಬಗ್ಗೆ ನಿಮಗೆ ಎಷ್ಟು ತಾತ್ಸಾರ ಇದೆ ಎಂಬುವುದು ತಿಳಿಯುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಈ ವೇಳೆ ನೌಕರರ ಪರ ವಕೀಲರು ಮಧ್ಯ ಪ್ರವೇಶಿಸಿ ನೌಕರರು ಅತಂತ್ರ ಸ್ಥಿತಿಗೆ ತಲುಪಿದ್ದು, ಅವರ ಕುಟುಂಬ ನಿರ್ವಾಹಣೆಯೇ ಕಷ್ಟವಾಗುತ್ತಿದೆ. ಹೀಗಾಗಿ ಸಾರಿಗೆಯ ಅಡಿಪಾಯವಾಗಿರುವ ಇಂಥ ನೌಕರರ ವಿರುದ್ಧ ಈ ರೀತಿ ನಡೆದುಕೊಳ್ಳುವುದು ಮಾನವೀಯ ನೆಲೆಗಟ್ಟಿನಲ್ಲಿ ಸರಿಯಾದುದಲ್ಲ. ಹೀಗಾಗಿ ಅವರಿಗೆ ನ್ಯಾಯ ದೊರಕಬೇಕಿದೆ ಎಂದು ಪೀಠದ ಗಮನಕ್ಕೆ ತಂದರು.

ಮುಂದಿನ ವಿಚಾರಣೆ ವೇಳೆಗೆ ವಜಾಗೊಂಡವರು ಮತ್ತು ವರ್ಗಾವಣೆ ಗೊಂಡವರಲ್ಲಿ ಎಷ್ಟು ನೌಕರರನ್ನು ವಾಪಸ್‌ ತೆಗೆದುಕೊಂಡಿದ್ದೀರಿ ಎಂ ಬಗ್ಗೆ ಸಮಗ್ರವಾಗಿ ಮಾಹಿತಿಯೊಂದಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಪೀಠ ತಾಕೀತು ಮಾಡಿತು.

ಈ ಎರಡೂ ಕಡೆ ವಕೀಲರ ವಾದ ಪ್ರತಿವಾದವನ್ನು ಆಲಿಸಿದ ದ್ವಿಸದಸ್ಯ ನ್ಯಾಯಪೀಠ ಈ ಪ್ರಕರಣದ ಅರ್ಜಿಗಳನ್ನು ಆ.27ಕ್ಕೆ ಮುಂದೂಡಿತು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು