ಬೆಂಗಳೂರು: ಏರಿಕೆಯಾಗುತ್ತಿರುವ ಡೀಸೆಲ್ ದರಗಳಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಸಾರಿಗೆ ಸಂಸ್ಥೆ ಈ ಹೊತ್ತಿನಲ್ಲಿ ಮೈಸೂರು, ಮಡಿಕೇರಿ ಸೇರಿದಂತೆ ರಾಜ್ಯದ ಆರು ಪ್ರಮುಖ ನಗರಗಳ ನಡುವೆ ಶೀಘ್ರವೇ ಕೆಎಸ್‌ಆರ್‌ಟಿಸಿಯ 50 ಐಷಾರಾಮಿ ಎಲೆಕ್ಟ್ರಿಕ್ ಬಸ್‌ಗಳು (ಇ-ವಾಹನಗಳು) ಓಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರಿಂದ ಸಂಸ್ಥೆಗೆ ಕೊಂಚಮಟ್ಟಿಗೆ ಆರ್ಥಿಕ ಹೊರೆ ತಕ್ಕಲಿದೆ ಎಂದು ಭಾವಿಸಲಾಗುತ್ತಿದೆ.
ತಲಾ 43 ಆಸನಗಳಿರುವ 50 ಸಂಪೂರ್ಣ ಹವಾ ನಿಯಂತ್ರಿತ ಇ-ಬಸ್‌ಗಳು ರಸ್ತೆಗಿಳಿಯಲಿವೆ. ಆ ಬಸ್‌ಗಳು ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ವಿರಾಜಪೇಟೆ, ಚಿಕ್ಕಮಗಳೂರು, ದಾವಣಗೆರೆ ಮತ್ತು ಶಿವಮೊಗ್ಗ ನಗರಗಳ ನಡುವೆ ಇಂಟರ್ ಸಿಟಿ ಮಾರ್ಗಗಳಲ್ಲಿ ಸಂಚರಿಲಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
ಹನ್ನೆರಡು ಮೀಟರ್ ಉದ್ದದ ಈ ಬಸ್‌ಗಳ ಎಲೆಕ್ಟ್ರಿಕ್ ಬ್ಯಾಟರಿಯನ್ನು ಒಮ್ಮೆ ಚಾರ್ಚ್ ಮಾಡಿದರೆ 250 ರಿಂದ 300 ಕಿ.ಮೀ.ವರೆಗೆ ಚಲಿಸುತ್ತವೆ. ಹೈದರಾಬಾದ್ ಮೂಲದ ಒಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್ (ಒಜಿಎಲ್) ಇದರ ನಿರ್ವಹಣೆಗಾಗಿ ಕೆಎಸ್‌ಆರ್‌ಟಿಸಿಯಿಂದ 12 ವರ್ಷಗಳ ಗುತ್ತಿಗೆ ಪಡೆದಿದೆ.
ರಾಜ್ಯ ಸಾರಿಗೆ ಸಂಸ್ಥೆಗೆ ಈಗ 88 ರೂ.ಗಳಿಗೆ ಡೀಸೆಲ್ ಲಭಿಸುತ್ತಿದೆ. ಹೈಟೆಕ್ ವೋಲ್ವೊ ಬಸ್‌ಗಳ ಕಾರ್ಯನಿರ್ವಹಣಾ ವೆಚ್ಚ ಪ್ರತಿ ಕಿ.ಮೀ.ಗೆ 52 ರೂ.ಗಳು. ಡಿಸೇಲ್ ದರ ದಿನೇ ದಿನೇ ಹೆಚ್ಚಾಗುತ್ತಿದ್ದು, ಕೆಎಸ್‌ಆರ್‌ಟಿಸಿ ಸಂಕಷ್ಟಕ್ಕೆ ಸಿಲುಕಿದೆ.
ಹೀಗಾಗಿ ಪ್ರಸ್ತುತ ಸಂಸ್ಥೆಗೆ ವೆಚ್ಚ ಕಡಿವಾಣದ ತುರ್ತು ಅಗತ್ಯವಿದೆ. ಈ ಸಂದರ್ಭದಲ್ಲಿ ಎಲೆಕ್ಟ್ರಿಕ್ ಬಸ್‌ಗಳು ನೆರವಾಗುತ್ತವೆ. ದೀರ್ಘ ಅಂತರದ ಸಂಚಾರಕ್ಕೆ ವಿದ್ಯುತ್ ಬಸ್‌ಗಳನ್ನು ಓಡಿಸುವುದು ಲಾಭದಾಯಕ ಎಂದು ಸಂಸ್ಥೆಯ ಅಧಿಕಾರಿ ವಿವರಿಸಿದ್ದಾರೆ.