NEWSದೇಶ-ವಿದೇಶವಿದೇಶ

ಸಂಭಾವ್ಯ ರಕ್ತಪಾತ ತಪ್ಪಿಸಲು ದೇಶ ತೊರೆದೆನೇ ಹೊರತು ಪ್ರಾಣಭಯದಿಂದ ಅಲ್ಲ: ಆಫ್ಘನ್‌ ಅಧ್ಯಕ್ಷ ಅಶ್ರಫ್ ಘನಿ

ವಿಜಯಪಥ ಸಮಗ್ರ ಸುದ್ದಿ

ದುಬೈ: ತಾಲಿಬಾನ್ ಉಗ್ರರಿಂದ ದೇಶದಲ್ಲಾಗಬಹುದಾದ ಸಂಭಾವ್ಯ ರಕ್ತಪಾತ ತಪ್ಪಿಸಲು ದೇಶ ತೊರೆದೆನೇ ಹೊರತು ಪ್ರಾಣಭಯದಿಂದ ನಾನು ಪರಾರಿಯಾಗಿಲ್ಲ ಎಂದು ಆಫ್ಘನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ.

ಆಫ್ಘಾನಿಸ್ತಾನ ತೊರೆದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಅಧಿಕೃತ ಫೇಸ್ ಬುಕ್ ವಿಡಿಯೋದಲ್ಲಿ ಮಾತನಾಡಿರುವ ಅಶ್ರಫ್ ಘನಿ, ದೇಶದಲ್ಲಿ ತಾಲಿಬಾನಿಗಳು ನಡೆಸಬಹುದಾದ ಸಂಭಾವ್ಯ ರಕ್ತಪಾತವನ್ನು ತಡೆಯುವ ಉದ್ದೇಶದಿಂದ ನಾನು ದೇಶ ತೊರೆದೆ… ಪ್ರಾಣಭೀತಿಯಿಂದ ಪರಾರಿಯಾಗಿಲ್ಲ ಎಂದು ತನ್ನ ದೇಶ ವಾಸಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ದೇಶದ ಸುರಕ್ಷತೆಯನ್ನು ದೇಶದ ಭದ್ರತಾ ಪಡೆಗಳ ಮೇಲೆ ವಹಿಸಿ ನಾನು ದೇಶ ತೊರೆದೆ. ದೇಶ ಬಿಡುವ ಮುನ್ನ ನಾನು ನನ್ನ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೆ. ಈ ವೇಳೆ ಅಧಿಕಾರಿಗಳು ಕೂಡ ಸಂಭಾವ್ಯ ರಕ್ತಪಾತದ ಕುರಿತು ಎಚ್ಚರಿಕೆ ನೀಡಿದ್ದರು. ಹೀಗಾಗಿ 25 ವರ್ಷಗಳ ಹಿಂದೆ ನಡೆದಿದ್ದ ರಕ್ತಪಾತ ಮತ್ತೆ ಸಂಭವಿಸಬಾರದು ಎಂಬ ದೃಢ ನಿರ್ಧಾರ ತೆಗೆದುಕೊಂಡು ಅನಿವಾರ್ಯವಾಗಿ ದೇಶ ತೊರೆದೆ ಎಂದು ವಿವರವಾಗಿ ತಿಳಿಸಿದ್ದಾರೆ.

ಇನ್ನು ಅಂತಹ ನಾಚಿಕೆಗೇಡಿನ ಬೆಳವಣಿಗೆಯನ್ನು ತಪ್ಪಿಸಬೇಕಿತ್ತು. ನನ್ನ “ಮುಖ್ಯ ಆಸ್ತಿ” ಗಳಾಗಿದ್ದ ತನ್ನ ಪುಸ್ತಕಗಳನ್ನು ತೆಗೆದುಕೊಳ್ಳದೆ ದೇಶ ಬಿಟ್ಟುಬಂದೆ. ಕಾಬೂಲ್‌ನ ಅಧ್ಯಕ್ಷೀಯ ಅರಮನೆಯಲ್ಲಿ ಕೆಲವು ಗೌಪ್ಯ ದಾಖಲೆಗಳನ್ನು ಬಿಟ್ಟು ಬರಲಾಗಿದೆ.

ನಮ್ಮ ದೇಶದ ಗೌಪ್ಯ ದಾಖಲೆಗಳು ಇತರರ ಕೈಯಲ್ಲಿದೆ. ನಾನು ದೇಶ ಬಿಟ್ಟು ಬರುವಾಗ ಬಟ್ಟೆಗಳನ್ನು ಹೊರತು ಪಡಿಸಿದರೆ, ಬೇರೇನನ್ನೂ ತಂದಿಲ್ಲ, ಕಾರುಗಳು ಹೆಲಿಕಾಪ್ಟರ್ ತುಂಬಾ ಹಣ ತೆಗೆದುಕೊಂಡು ಬಂದಿದ್ದೇನೆ ಎಂಬ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದು ಘನಿ ಹೇಳಿದ್ದಾರೆ.

ಹಮೀದ್ ಕರ್ಜೈ-ತಾಲಿಬಾನ್ ಭೇಟಿಗೆ ಬೆಂಬಲ
ಇದೇ ವೇಳೆ ದೇಶದಲ್ಲಿ ಸಂಭವಿಸುತ್ತಿರುವ ಅರಾಜಕತೆಯ ನಿಟ್ಟಿನಲ್ಲಿ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಅವರು ನಡೆಸುತ್ತಿರುವ ಮಾತುಕತೆಗಳು ಉತ್ತಮವಾದದ್ದು. ಅಫ್ಘಾನಿಸ್ತಾನಕ್ಕೆ ಶಾಂತಿ ಸಾಧಿಸುವ ಪ್ರಯತ್ನಗಳು ಮುಂದುವರಿಯಬೇಕು ಎಂದು ಹೇಳಿದ್ದಾರೆ.

ನನ್ನ ದೇಶಕ್ಕೆ ಮರಳಲು ಯೋಚಿಸುತ್ತಿದ್ದೇನೆ
“ಸದ್ಯಕ್ಕೆ, ನಾನು ಎಮಿರೇಟ್ಸ್‌ನಲ್ಲಿದ್ದೇನೆ ಇದರಿಂದ ರಕ್ತಪಾತ ಮತ್ತು ಅವ್ಯವಸ್ಥೆ ನಿಲ್ಲುತ್ತದೆ ಎಂದು ಭಾವಿಸಿದ್ದೇನೆ. ಆದರೆ ಶೀಘ್ರದಲ್ಲೇ ನನ್ನ ದೇಶಕ್ಕೆ ವಾಪಸ್ಸಾಗುವ ಕುರಿತು ಯೋಚಿಸುತ್ತಿದ್ದೇನೆ ಎಂದು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಸುಮಾರು 9 ನಿಮಿಷಗಳ ಕಾಲ ವಿವರವಾಗಿ ಎಲ್ಲವನ್ನು ಹಂಚಿಕೊಂಡಿದ್ದಾರೆ.

Leave a Reply

error: Content is protected !!
LATEST
ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ