NEWSದೇಶ-ವಿದೇಶವಿದೇಶ

ವಿಶ್ವದ 100 ಶ್ರೀಮಂತರ ಪಟ್ಟಿಯಲ್ಲಿ ಡಿಮಾರ್ಟ್​ನ ಮಾಲೀಕ ರಾಧಾಕಿಶನ್ ದಮಾನಿ

ವಿಜಯಪಥ ಸಮಗ್ರ ಸುದ್ದಿ

ಮುಂಬೈ: ವಿಶ್ವದ 100 ಶ್ರೀಮಂತರ ಪಟ್ಟಿಯಲ್ಲಿ ಭಾರತದ ಪ್ರಮುಖ ರೀಟೇಲ್ ಜಾಲ ಡಿಮಾರ್ಟ್​ನ ಮಾಲೀಕ ರಾಧಾಕಿಶನ್ ದಮಾನಿ ಸ್ಥಾನಪಡೆದಿದ್ದಾರೆ.

ರಾಧಾಕಿಶನ್ ದಮಾನಿ 19.2 ಬಿಲಿಯನ್ ಅಮೆರಿಕನ್ ಡಾಲರ್ (1920 ಕೋಟಿ ಅಮೆರಿಕ ಡಾಲರ್- ಭಾರತದ ರೂಪಾಯಿ ಮೌಲ್ಯದಲ್ಲಿ ಇಂದಿಗೆ 1,42,639.39 ಕೋಟಿ) ನಿವ್ವಳ ಮೌಲ್ಯದೊಂದಿಗೆ ವಿಶ್ವದ 100 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಒಬ್ಬ ಬಡತನದಲ್ಲಿ ಬೆಳೆದವ ಹೇಗೆ ಮೇಲೆ ಬಂದ ಎಂಬುದರ ರೋಚಕ ಕತೆಯನ್ನು ಹೇಳುತ್ತಿದೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪಟ್ಟಿಯಲ್ಲಿ ದಮಾನಿ 98ನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಅವರು 117ನೇ ಸ್ಥಾನದಲ್ಲಿದ್ದರು. ಮುಕೇಶ್ ಅಂಬಾನಿ, ಗೌತಮ್ ಅದಾನಿ, ಅಜೀಂ ಪ್ರೇಮ್‌ಜಿ, ಪಲ್ಲೊಂಜಿ ಮಿಸ್ತ್ರಿ, ಶಿವ ನಾಡಾರ್ ಮತ್ತು ಲಕ್ಷ್ಮಿ ಮಿತ್ತಲ್ ಮೊದಲ 100 ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿರುವ ಇತರ ಭಾರತೀಯರು.

ಬಿಲಿಯನೇರ್ ದಮಾನಿ ಅವರು ಮುಂಬೈನ ಒಂದೇ ಕೊಠಡಿಯ ಅಪಾರ್ಟ್​ಮೆಂಟ್​ನ ಮಾರ್ವಾಡಿ ಕುಟುಂಬದಲ್ಲಿ ಬೆಳೆದವರು. ಮುಂಬೈ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ವಿಷಯವನ್ನು ಅಧ್ಯಯನ ಮಾಡಿ, ಒಂದು ವರ್ಷದ ನಂತರ ಆ ಕೋರ್ಸ್ ಕೈಬಿಟ್ಟರು. ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಅವರ ತಂದೆಯ ಮರಣದ ನಂತರ ದಮಾನಿ ತನ್ನ ಬಾಲ್ ಬೇರಿಂಗ್ ವ್ಯಾಪಾರವನ್ನು ತೊರೆದು, ಸ್ಟಾಕ್ ಮಾರ್ಕೆಟ್ ಬ್ರೋಕರ್ ಮತ್ತು ಹೂಡಿಕೆದಾರರಾದರು.

2000ನೇ ಇಸವಿಯಲ್ಲಿ ಸ್ಟಾಕ್ ಮಾರುಕಟ್ಟೆಯನ್ನು ತೊರೆದು, ತಮ್ಮದೇ ಹೈಪರ್ ಮಾರುಕಟ್ಟೆ ಜಾಲ ಡಿಮಾರ್ಟ್ ಅನ್ನು ಆರಂಭಿಸಿದರು. 2002ರಲ್ಲಿ ಪೊವೈಯಲ್ಲಿ ಮೊದಲ ಮಳಿಗೆಯನ್ನು ಸ್ಥಾಪಿಸಿದರು.

2010ರಲ್ಲಿ ಈ ಜಾಲದ 25 ಮಳಿಗೆಗಳನ್ನು ಹೊಂದಿತ್ತು. ಅದರ ನಂತರ ಕಂಪೆನಿಯು ವೇಗವಾಗಿ ಬೆಳೆಯಿತು ಮತ್ತು 2017ರಲ್ಲಿ ಕಂಪೆನಿಯ ಷೇರುಗಳನ್ನು ಸಾರ್ವಜನಿಕ ವಿತರಣೆ ಮಾಡಲಾಯಿತು.

ದಮಾನಿ ಸಾಮಾನ್ಯವಾಗಿ ಲೋ ಪ್ರೊಫೈಲ್ ಇಟ್ಟುಕೊಳ್ಳುತ್ತಾರೆ. ವಿರಳವಾಗಿಯೂ ಯಾವುದೇ ಸಂದರ್ಶನಗಳನ್ನು ನೀಡುವುದಿಲ್ಲ. ಅಂದಹಾಗೆ ಭಾರತೀಯ ಬಿಲಿಯನೇರ್ ರಾಕೇಶ್ ಜುನ್​ಜುನ್​ವಾಲಾಗೆ ತಮ್ಮ ಸ್ಟಾಕ್ ಟ್ರೇಡಿಂಗ್ ತಂತ್ರಗಳನ್ನು ಕಲಿಸಿದ್ದರು ರಾಧಾಕಿಶನ್ ದಮಾನಿ.

Leave a Reply

error: Content is protected !!
LATEST
KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ