ಬೆಂಗಳೂರು: ಸಾರಿಗೆ ನೌಕರರ ಮುಷ್ಕರದ ವೇಳೆ ಆಗಿರುವ ನಷ್ಟ ಕುರಿತು ಸರ್ಕಾರ ಸಲ್ಲಿಸಿರುವ ತನಿಖಾ ವರದಿಯನ್ನು ಅಂಗೀಕರಿಸಲು ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನು ಒಳಗೊಂಡ ಪೀಠ ನಿರಾಕರಿಸಿದೆ. ಅಲ್ಲದೆ ಸಾರಿಗೆ ನೌಕರರ ಮುಷ್ಕರದ ವೇಳೆ ಆಗಿರುವ ನಷ್ಟ ಕುರಿತ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಆ. 31 ರೊಳಗೆ ಸಲ್ಲಿಸಲು ಸೂಚಿಸಿದೆ.
ಸಾರಿಗೆ ನೌಕರರ ಮುಷ್ಕರದ ವೇಳೆ ಆಗಿರುವ ನಷ್ಟವನ್ನು ವಸೂಲಿ ಮಾಡುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿವಿಚಾರಣೆ ಬುಧವಾರ ಹೈಕೋರ್ಟ್‌ನಲ್ಲಿ ನಡೆಯಿತು. ಸಾರಿಗೆ ನೌಕರರ ಮುಷ್ಕರದ ವೇಳೆ ನಡೆದ ಹೋರಾಟ, ಗಲಾಟೆಯಿಂದ ಆಗಿರುವ ಸಾರ್ವಜನಿಕ ನಷ್ಟದ ಕುರಿತು ಸರ್ಕಾರ ತನಿಖಾ ಪ್ರಗತಿ ವರದಿಯನ್ನು ಸಲ್ಲಿಸಿತು. ಆದರೆ ಸಿಸಿ ಕ್ಯಾಮರಾ ದೃಶ್ಯ, ಸಿಡಿಗಳಿಲ್ಲದ ಕಾರಣ ಸಲ್ಲಿಸಿದ ತನಿಖಾ ಪ್ರಗತಿ ವರದಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.
ಡಿಸೆಂಬರ್‌ನಲ್ಲಿ ನಡೆದ ದಿಢೀರ್ ಪ್ರತಿಭಟನೆಯಿಂದ ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆ ಸ್ಥಗಿತವಾಯಿತು. ಇದರಿಂದ ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗಿದ್ದರು. ಬಸ್ ಸಂಚಾರ ವಿಲ್ಲದೇ ಜನರು ಹಿಡಿಶಾಪ ಹಾಕಿದ್ದರು. ಮಾತ್ರವಲ್ಲ, ಸಾರಿಗೆ ನಿಗಮಗಳು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದ್ದವು. ಅಂತಿಮವಾಗಿ ಸರ್ಕಾರದ ಜತೆಗಿನ ಸಂಧಾನದಿಂದ ಸಾರಿಗೆ ನೌಕರರು ಮುಷ್ಕರ ಹಿಂಪಡೆದಿದ್ದರು.
ಇದೀಗ ಸಾರಿಗೆ ನೌಕರರ ಮುಷ್ಕರದಿಂದ ಆಗಿರುವ ನಷ್ಟವನ್ನು ಹೋರಾಟಗಾರರಿಂದ ವಸೂಲಿ ಮಾಡುವಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಹೋರಾಟದ ವೇಳೆ ಆಗಿರುವ ನಷ್ಟವನ್ನು ನಷ್ಟ ಮಾಡಿದವರೇ ಭರಿಸಬೇಕಾಗಿ ಬರಬಹುದು. ಅದರೆ, ಸರ್ಕಾರ ಆಸ್ತಿ ಪಾಸಿ ನಷ್ಟ ಮಾಡಿರುವುದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಲು ವಿಫಲವಾದಂತೆ ಈಗಾಗಲೇ ಕಾಣುತ್ತಿದೆ.
ಹೀಗಾಗಿ ನ್ಯಾಯ ಪೀಠ ಸೂಚಿಸಿರುವಂತೆ ಆಗಸ್ಟ್ 31ರೊಳಗೆ ಮುಚ್ಚಿದ ಲಕೋಟೆಯಲ್ಲಿ ನಷ್ಟಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವುದು ಸರ್ಕಾರಕ್ಕೂ ಒಂದು ಸವಾಲೇ ಆಗಿದೆ. ಕಾರಣ ಇಲ್ಲಿ ಆಸ್ತಿಪಾಸ್ತಿ ನಷ್ಟ ಮಾಡಿದವರು ಸರ್ಕಾರಿ ಪ್ರಾಯೋಜಿತ ವ್ಯಕ್ತಿಗಳೇ ಎಂಬ ಅನುಮಾನ ಮೂಡಿದೆ. ಹೀಗಾಗಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳಿಂದ ಎಲ್ಲಿ ಸತ್ಯ ಹೊರ ಬರುವುದೋ ಎಂಬ ಆತಂಕದಲ್ಲಿ ಸರ್ಕಾರವು ಇದೆ.
ಅಂದಿನ ಸಚಿವರು, ಅಧಿಕಾರಿಗಳಿಂದಲೇ ನಷ್ಟ ವಸೂಲಿ ಮಾಡಬೇಕು
ಅಂದರೆ ಮುಷ್ಕರ ನಿರತರೇ ಸರ್ಕಾರದ ಆಸ್ತಿ ಪಾಸ್ತಿ ನಷ್ಟ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಇನ್ನೊಂದು ಕಡೆ ಮುಷ್ಕರ ನಿರತರು ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದೆವು ನಾವು ಯಾವುದೇ ಹಾನಿ ಮಾಡಿಲ್ಲ. ಅದು ಆಗಿರುವುದು ಬೇರೆಯವರಿಂದ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಮುಷ್ಕರದ ವೇಳೆ ಹಾನಿ ಮಾಡಿರುವವರು ಯಾರು ಎಂಬುದಕ್ಕೆ ಪೂರಕವಾದ ಪುರಾವೆಗಳನ್ನು ಸರ್ಕಾರ ಸಲ್ಲಿಸಬೇಕಿದೆ.
ಇಲ್ಲಿ ಡಿಸೆಂಬರ್‌ನಲ್ಲಿ ಶಾಂತಿಯುತ ಹೋರಾಟ ಮಾಡುತ್ತಿದ್ದ ನೌಕರರ ಸಮಸ್ಯೆಯನ್ನು ಅಂದಿನ ಸಚಿವರು ಅಥವಾ ಸಂಬಂಧಪಟ್ಟ ಅಧಿಕಾರಿಗಳು ಬಂದು ಆಲಿಸಿ ಪರಿಹರಿಸುವ ಭರವಸೆ ನೀಡಿದ್ದರೆ, ಅಂದು ಪ್ರತಿಭಟನೆಯೇ ನಡೆಯುತ್ತಿರಲಿಲ್ಲ.
ಸಚಿವರು ನಾವು ದೇವಲೋಕದಿಂದ ಇಳಿದು ಬಂದ್ದಿದ್ದೇವೆ ಎಂಬಂತೆ ನೌಕರರ ಸಮಸ್ಯೆ ಕೇಳಲು ಹೋಗದೆ ಒಂದು ರೀತಿ ಉದ್ಧಟತನದಿಂದ ವರ್ತಿಸಿದ್ದರು. ಇದು ಪ್ರತಿಭಟನಾ ನಿರತ ನೌಕರರ ಆಕ್ರೋಶಕ್ಕೆ ಕಾರಣವಾಯಿತು. ಇದರಿಂದ ಜನಸಾಮಾನ್ಯರು ತೊಂದರೆ ಪಡುವಂತಾಯಿತು.
ಇದನ್ನು ಗಮನಿಸಿದರೆ ನಿಜವಾಗಲು ತಪ್ಪು ಮಾಡಿರುವುದು ಸರ್ಕಾರವೇ ಎಂದು ಅನಿಸುತ್ತದೆ. ಹೀಗಾಗಿ ಮುಷ್ಕರದ ವೇಳೆ ಆಗಿರುವ ನಷ್ಟವನ್ನು ಸರ್ಕಾರದ ಅಂದಿನ ಸಚಿವರು ಮತ್ತು ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು ಎಂದು ಸಾರ್ವಜನಿಕರು ಕೋರ್ಟ್‌ಗೆ ಮನವಿ ಮಾಡುತ್ತಿದ್ದಾರೆ.
ಸರ್ಕಾರ ಸಾರಿಗೆ ನೌಕರರಿಗೆ ಮೋಸ ಮಾಡಿದೆ ಕೊಟ್ಟ ಮಾತು ತಪ್ಪಿದ ಸಾರಿಗೆ ಸಚಿವರು..? ಸರ್ಕಾರಕ್ಕೆ ಮನವಿ ದಯವಿಟ್ಟು ಸಾರಿಗೆ ನೌಕರರ ಬೇಡಿಕೆಯನ್ನು ಈಡೇರಿಸಿ ..