NEWSನಮ್ಮಜಿಲ್ಲೆಸಂಸ್ಕೃತಿ

ನಾಡು ಕಂಡ ಶ್ರೇಷ್ಠ ರಾಜಕಾರಣಿ ಮಾಜಿ ಸಿಎಂ ಡಿ.ದೇವರಾಜ ಅರಸು : ರಘು ಕೌಟಿಲ್ಯ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮೈಸೂರು: ನಾಡು ಕಂಡ ಶ್ರೇಷ್ಠ ರಾಜಕಾರಣಿ ಇವರು ನಮ್ಮ ಮೈಸೂರು ಜಿಲ್ಲೆಯವರಾದ ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿ ಯಾದಂತಹ ಸಂದರ್ಭದಲ್ಲಿ ಉಳುವವನಿಗೆ ಭೂಮಿ ಎಂಬ ಕಲ್ಪನೆಯಿಂದ ಹಿಂದುಳಿದ ವರ್ಗದವರ ಹಾಗೂ ರೈತರ ಆಶಾ ಕಿರಣ ವಾದರು ಎಂದು ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಕೌಟಿಲ್ಯ ತಿಳಿಸಿದರು.

ಇಂದು ಮೈಸೂರು ನಗರ ಭಾರತೀಯ ಜನತಾ ಪಾರ್ಟಿಯ ಕಾರ್ಯಲಯದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ದೇವರಾಜ ಅರಸು ಅವರ 106 ಜನ್ಮ ಜಯಂತಿ ಅಂಗವಾಗಿ ಭಾವಚಿತ್ರ ಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಕಾಂಗ್ರೆಸ್ ಪಕ್ಷವು ಇಂತಹ ಮಹಾನ್ ನಾಯಕನ್ನು ಬಳಸಿಕೊಂಡು ಅವರ ಕಡೆಯ ಜೀವನ ಸಂದರ್ಭದಲ್ಲಿ ಇವರನ್ನು ನಿರ್ಲಕ್ಷಿಸಿ ದ್ದು ಬೇಸರದ ಸಂಗತಿ ಎಂದರು.

ಅರಸರ ಆಡಳಿತದ ಸಂದರ್ಭದಲ್ಲಿ ಬಡಜನರಿಗೆ ನೀಡಿದ ಭಾಗ್ಯಜ್ಯೋತಿ ಯೋಜನೆಯನ್ನು ರಾಷ್ಟ್ರದಲ್ಲಿ ಜಾರಿಗೆ ತಂದಿದ್ದು, ಇಂದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹಾಗಾಗಿ ಭಾರತೀಯ ಜನತಾ ಪಾರ್ಟಿ ಅರಸು ಅವರ ತತ್ವ ಸಿದ್ದಾಂತಗಳ ಅನ್ವಯಿಸಿ ಕೊಂಡಿದೆ. ಇಡಿ ಜಗತ್ತಿನಲ್ಲಿ ಅಂಬೇಡ್ಕರ್ ಅವರ ಸಂವಿಧಾನ ಹಾಗೂ ಬಸವಣ್ಣ ಕಲ್ಪನೆಯನ್ನು ಜಾರಿ ತರುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಎಂದರು.

ಇದೇ ಸಂದರ್ಭದಲ್ಲಿ ನಗರ ಅಧ್ಯಕ್ಷ ಟಿ.ಎಸ್.ಶ್ರೀ ವತ್ಸ ಮಾತನಾಡಿ, ಭಾರತೀಯ ಜನತಾ ಪಾರ್ಟಿಯು ಹಿಂದುಳಿದ ವರ್ಗದವರ ಪರ ಇದೆ. ನರೇಂದ್ರ ಮೋದಿ ಯವರು ಇತ್ತೀಚಿನ ಸಚಿವ ಸಂಪುಟದಲ್ಲಿ 27 ಜನ ಮಂತ್ರಿಗಳನ್ನು ಮಾಡಿ ಹಿಂದುಳಿದ, ದಲಿತ, ಪರಿಶಿಷ್ಟ ಪಂಗಡ ದವರ ಪರವಾಗಿ ಇದ್ದೇವೆ ಎಂದು ತೋರಿಸಿದ್ದಾರೆ ಎಂದರು.

ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಜೋಗಿಮಂಜು, ನಗರ ಪಾಲಿಕೆ ಸದಸ್ಯ ಕೆ.ಜೆ.ರಮೇಶ್, ಪ್ರಧಾನ ಕಾರ್ಯದರ್ಶಿ ಗಳಾದ ಗೋಪಾಲ್, ಮಣಿರತ್ನಂ, ಶಿವರಾಜ್, ಸಾಮಾಜಿಕ ಜಾಲತಾಣ ಸಂಚಾಲಕ ಅಭಿಲಾಷ್, ಖಂಡೇಶ್, ಮಹದೇವು, ಹರೀಶ್ ಅಂಕಿತ್, ಯೋಗನಂದ. ಜೀವನ್, ರಮೇಶ್, ಶೋಭಾ ,ಎಸ್.ಟಿ. ಮೋರ್ಚಾ ಅಧ್ಯಕ್ಷರಾದ ಲಕ್ಷಣ್, ಕೃಷ್ಣ ನಾಯಕ್, ಶಿವು, ಮುಂತಾದವರು ಇದ್ದರು.

Leave a Reply

error: Content is protected !!
LATEST
ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ