ಬೆಂಗಳೂರು: ಸಾರಿಗೆ ನೌಕರರ ಸಮಸ್ಯೆ ಪರಿಹರಿಸಬೇಕೆಂಬ ಧ್ಯೇಯದೊಂದಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಡಿಸಿ ಮತ್ತು ಸಿಎಂಇ ಅಧಿಕಾರಿಗಳ ಮುಂದಾಳತ್ವದಲ್ಲಿ ನೂತನ ಸಂಘವೊಂದು ಅತೀ ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರುತ್ತಿದೆ.
ಈ ಮೂಲಕ ಸಾರಿಗೆ ಸಂಸ್ಥೆಯಲ್ಲಿ ಇರುವ ಕೆಲ ಭ್ರಷ್ಟ ಅಧಿಕಾರಿಗಳಿಗೆ ಬೆವರಿಳಿಸಿ ಸೂಕ್ತ ಕಾನೂನು ಪಾಠ ಕಲಿಸಿ, ನೊಂದ ನೌಕರರಿಗೆ ಸಂಜೀವಿಯಾಗುವ ಭರವಸೆ ಇದೆ.
ಹೌದು ! ಕಳೆದ ಏಪ್ರಿಲ್ ತಿಂಗಳಿನಲ್ಲಿ ಸಮಾನ ವೇತನಕ್ಕಾಗಿ ಆಗ್ರಹಿಸಿ ನಡೆಸಿದ ಪ್ರತಿಭಟನೆ ವೇಳೆ ಸಾವಿರಾರು ಅಮಾಯಕ ನೌಕರರನ್ನು ವಜಾ, ಅಮಾನತು ಮತ್ತು ವರ್ಗಾವಣೆ ಮಾಡಲಾಗಿದೆ. ಅವರಲ್ಲಿ ಇನ್ನೂ ಸಾವಿರಾರು ಮಂದಿಗೆ ಕರ್ತತ್ಯಕ್ಕೆ ಮರಳಲಾಗದೆ ಮತ್ತು ದೂರದೂರಿಗೆ ವರ್ಗಾವಣೆಗೊಂಡಿದ್ದು, ಅಲ್ಲಿ ಸೇವೆ ಸಲ್ಲಿಸಲಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಇವರೂ ಸೇರಿದಂತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ನೌಕರರಲ್ಲೂ ಸೌಹಾರ್ದತೆ ವಾತಾವರಣ ನಿರ್ಮಾಣ ಮಾಡಲು ಈ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲು ಉದ್ದೇಶಿಸಲಾಗಿದ್ದು, ಆಗಸ್ಟ್ 30 ರಿಂದ ನೋಂದಣಿ ಪ್ರಾರಂಭ ಮಾಡಲಾಗುತ್ತಿದೆ.
ಈ ಸಂಘದಲ್ಲಿ ಸಾರಿಗೆ ನೌಕರರನ್ನು ಹೊರತು ಪಡಿಸಿ ಬೇರೆ ಯಾರು ಸದಸ್ಯರಾಗಲು ಸಾಧ್ಯವಿಲ್ಲ. ಹೀಗಾಗಿ ಯಾರು ಗೊಂದಲಕ್ಕೆ ಒಳಗಾಗದೇ ಎಲ್ಲ ನೌಕರರು ಸದಸ್ಯತ್ವ ಪಡೆಯುವಂತೆ ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು ತಿಳಿಸಿದ್ದಾರೆ.
ಇನ್ನು ಸಂಘಕ್ಕೆ ಸದಸ್ಯರಾಗಲು ನೋಂದಣಿ ಉಚಿತವಾಗಿದೆ. ನೋಂದಣಿ ಮಾಡಿಕೊಳ್ಳುವ ನೌಕರರು ಸಂಸ್ಥೆಯ ಐಡಿ ಕಾರ್ಡ್, ಆಧಾರ್ ಕಾರ್ಡ್ ಮತ್ತು ಎರಡು ಪೋಟೋಗಳನ್ನು ತರಬೇಕಿದೆ.
ಸಂಘಕ್ಕೆ ಸದಸ್ಯರಾದ ಎಲ್ಲ ನೌಕರರು ಸಂಸ್ಥೆಗೆ ಸಂಬಂಧಪಟ್ಟ ಕಾನೂನು ತೊಡಕುಗಳನ್ನು ಎದುರಿಸುತ್ತಿದ್ದರೆ ಅಥವಾ ಕೋರ್ಟ್‌ನಲ್ಲಿ ಪ್ರಕರಣಗಳಿದ್ದರೆ ಉಚಿತವಾಗಿ ವಕಾಲತ್ತು ವಹಿಸುವ ಮೂಲಕ ನೌಕರರ ಸಮಸ್ಯೆಗೆ ಸ್ಪಂದಿಸಲಾಗುವುದು. ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಸ್ಥಳದಲ್ಲೇ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವುದು ಸಂಘದ ಧ್ಯೇಯಗಳಲ್ಲಿ ಒಂದಾಗಿದೆ.
ಇನ್ನು ಆಗಸ್ಟ್ 30ರಿಂದ ಸದಸ್ಯತ್ವ ನೋಂದಣಿ ಆರಂಭವಾಗುತ್ತಿದ್ದು ಸೆಪ್ಟೆಂಬರ್ 10 ಕೊನೆಯ ದಿನವಾಗಿದೆ. ನೋಂದಣಿ ಪೂರ್ಣಗೊಳ್ಳುತ್ತಿದ್ದಂತೆ ನೌಕರರು ಮತ್ತು ಕುಟುಂಬದವರೊಂದಿಗೆ ಒಂದು ಸಮಾರಂಭವನ್ನು ಆಯೋಜಿಸಿ ಅಲ್ಲಿ ನಿಷ್ಠಾವಂತ, ಪ್ರಾಮಾಣಿಕ ನಿವೃತ್ತ ನೌಕರರನ್ನು ಅಭಿನಂದಿಸುವ ಮೂಲಕ ಸಂಘವನ್ನು ಉದ್ಘಾಟಿಸಲಾಗುವುದು ಎಂದು ವಕೀಲರು ತಿಳಿಸಿದ್ದಾರೆ.
ಇನ್ನು ಸದಸ್ಯತ್ವ ಪಡೆದ ನೌಕರರಿಗೆ ಅನುಕೂಲವಾಗುವಂತೆ ಆಯಾಯ ಜಿಲ್ಲೆಗಳಲ್ಲೇ ವಕೀಲರನ್ನು ನೇಮಿಸಿ ಪ್ರಕರಣಗಳ ವಕಾಲತ್ತನ್ನು ಉಚಿತವಾಗಿ ವಹಿಸಲಾಗುವುದು. ನಾವು ಮುಖ್ಯ ಕನೂನು ಸಲಹೆಗಾರರಾಗಿ ಸಂಘದಲ್ಲಿ ಇರಲಿದ್ದೇವೆ ಎಂದು ತಿಳಿಸಿದ್ದಾರೆ.
ನೋಂದಣಿಗೆ ಖುದ್ದು ಸದಸ್ಯತ್ವ ಪಡೆದುಕೊಳ್ಳುವ ನೌಕರರೇ ಹಾಜರಾಬೇಕು. ನೋಂದಣಿ ಸಮಯ ಸಂಜೆ 5ಗಂಟೆಯಿಂದ ರಾತ್ರಿ 8ರವರೆಗೆ. ಮೆಜೆಸ್ಟಕ್ ಪ್ಲಾಟ್‌ಫಾರಂ ನಂ. 8, 9 ಬಸ್ ನಂ.43 ಬಿ, 43ಸಿ, 43ಡಿ, 43ಇ. 43ಎಫ್, 45 ಎ, 45ಬಿ, 45ಸಿ, 45ಡಿ, 45ಇ, 45ಜಿ, 45ಎಚ್. ಬಸ್ ಇಳಿಯುವ ಸ್ಥಳ- ಎಸ್‌ಬಿಎಂ ಕಾಲೋನಿ ಬಸ್ ನಿಲ್ದಾಣ.
ನೋಂದಣಿ ಮಾಡಿಕೊಳ್ಳಲು ಬರಬೇಕಾದ ವಿಳಾಸ:
ಎಚ್.ಬಿ.ಶಿವರಾಜು ವಕೀಲರು,
ಎಚ್‌ಬಿಎಸ್ ಲಾ ಅಸೋಸಿಯೇಟ್ಸ್ ,
ಹಳೇ ನಂ.36ಎ/ ಹೊಸ ನಂ.42,
ಟಿಎನ್‌ಆರ್. ಕಾಂಪ್ಲೆಕ್ಸ್, (ಮೆಡ್‌ಪ್ಲಸ್ ಎದುರು)
1ನೇ ಮುಖ್ಯರಸ್ತೆ, ನಾಗೇಂದ್ರ ಬ್ಲಾಕ್,
ಎಸ್‌ಬಿಎಂ ಕಾಲೋನಿ ಬಸ್ ನಿಲ್ದಾಣದ ಎದುರು
ಬೆಂಗಳೂರು -560050.