NEWSನಮ್ಮರಾಜ್ಯ

ಇಂದು ಹೈ ಕೋರ್ಟ್‌ನಲ್ಲಿ ಸಾರಿಗೆ ನೌಕರರ ಪ್ರಕರಣದ ವಿಚಾರಣೆ: ಒಳ್ಳೇ ಸುದ್ದಿ ಬರುವ ನಿರೀಕ್ಷೆಯಲ್ಲಿ ನೌಕರರು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಜಾ, ಅಮಾನತು ಮತ್ತು ವರ್ಗಾವಣೆಗೊಂಡಿರುವ ಸಾರಿಗೆ ನೌಕರರ ಪ್ರಕರಣ ಹೈ ಕೋರ್ಟ್‌ನಲ್ಲಿ ಆಗಸ್ಟ್‌ 27ರಂದು ವಿಚಾರಣೆಗೆ ಬರಲಿದೆ. ಬಹುತೇಕ ಒಂದೊಳ್ಳೆ ಸುದ್ದಿ ಸುಗಲಿದೆ ಎಂಬ ವಿಶ್ವಾಸದಲ್ಲಿ ನೌಕರರಿದ್ದಾರೆ.

ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಏಪ್ರಿಲ್‌ನಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಿದ ವೇಳೆ ನಾಲ್ಕೂ ನಿಗಮಗಳಲ್ಲಿ ಹಲವು ನೌಕರರಿಗೆ ವಜಾ, ಅಮಾನತು ಮತ್ತು ವರ್ಗಾವಣೆಯಂತಹ ಶಿಕ್ಷೆ ನೀಡಿದ್ದು, ಈ ಸಂಬಂಧ ದಾಖಲಾಗಿರುವ ನೌಕಕರರ ಪ್ರಕರಣ  ಆಗಸ್ಟ್‌ 3ರಂದು ಹೈ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆ ನಡೆದು ಆಗಸ್ಟ್‌ 27ಕ್ಕೆ ಮುಂದೂಡಲ್ಪಟ್ಟಿತ್ತು.

ಅಂದು ಸಾರಿಗೆ ನೌಕರರ ಪರ ವಕೀಲ ಅಮೃತೇಶ್‌ ಅವರು, ವಜಾ ಮತ್ತು ವರ್ಗಾವಣೆಗೊಂಡ ನೌಕರರ ಬಗ್ಗೆ ಇದುವರೆಗೂ ಸರಿಯಾದ ನಿಲುವನ್ನು ಸಾರಿಗೆ ಅಧಿಕಾರಿಗಳು ತೆಗೆದುಕೊಂಡಿಲ್ಲ.

ತಮಗೆ ಇಷ್ಟ ಬಂದ ಕೆಲವೇ ಕೆಲವು ನೌಕರರ ವರ್ಗಾವಣೆಯನ್ನು ರದ್ದು ಪಡಿಸಿದ್ದು, ಆದರೆ ಅವರಿಗೂ ಮೂಲ ಸ್ಥಳದಲ್ಲೇ ಕರ್ತವ್ಯ ನಿರ್ವಹಿಸಲ ಬಿಡದೆ ಮತ್ತೆ ಬೇರೆ ಡಿಪೋಗಳಿಗೆ ವರ್ಗಾವಣೆ ಮಾಡಲಾಗಿದೆ ಇದು ಯಾವ ನ್ಯಾಯ ಹೇಳಿ ಎಂದು ವಾದ ಮಂಡಿಸಿದರು.

ಇನ್ನು ವಜಾಗೊಂಡ ನೌಕರರ ಬಗ್ಗೆ ಇದುವರೆಗೂ ಮಾನವೀಯತೆ ನೆಲೆಗಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದ್ದ ಸಾರಿಗೆ ನಿಗಮಗಳ ಅಧಿಕಾರಿಗಳು ಅದನ್ನು ಮರೆತು ನೌಕರರಿಗೆ ಅನಾನುಕೂಲವಾಗುವಂತೆ ಮಾಡಿದ್ದು, ಇದರಿಂದ ವಜಾಗೊಂಡಿರುವ ನೌಕರರು ಅತಂತ್ರ ಸ್ಥಿತಿಯನ್ನು ತಲುಪಿದ್ದಾರೆ.

ಹೀಗಾಗಿ ಅವರಿಗೆ ಶೀಘ್ರ ಗತಿಯಲ್ಲಿ ನ್ಯಾಯ ದೊರಕಿಸಿಕೊಡುವ ಮೂಲಕ ಅವರ ಕುಟುಂಬಗಳನ್ನು ಗೌರವಯುತವಾಗಿ ಬದುಕುವಂತೆ ಮಾಡಬೇಕು ಎಂದು ಮುಖ್ಯನ್ಯಾಯಮೂರ್ತಿ ಎ.ಎಸ್‌. ಓಕಾ ಮತ್ತು ಸೂರಜ್‌  ಗೋವಿಂದರಾಜ್‌ ಅವರನ್ನೊಳಗೊಂಡ ನ್ಯಾಯಪೀಠದ ಗಮನ ಸೆಳೆದಿದ್ದರು.

ಈ ವೇಳೆ ಎಷ್ಟು ನೌಕರರನ್ನು ವಾಪಸ್‌ ಕರೆಸಿಕೊಂಡಿದ್ದೀರಿ ಎಂದು ಕೆಎಸ್‌ಆರ್‌ಟಿಸಿ ಪರ ವಕೀಲರನ್ನು ಸಿಜೆ ಅವರು ಕೇಳಿದ್ದರು. ಅದಕ್ಕೆ ಸಮಂಜಸವಾದ ಉತ್ತರ ನೀಡದ ವಕೀಲರು ಈ ಬಗ್ಗೆ ಮುಂದಿನ ವಿಚಾರಣೆಯಲ್ಲಿ ಸಮಗ್ರ ಮಾಹಿತಿ ಕೊಡುತ್ತೇವೆ ಎಂದಿದ್ದರು.

ಅದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ ನ್ಯಾಯಪೀಠ ಇನ್ನು ಸರಿಯಾದ ಯಾವುದೇ ಕ್ರಮದಲ್ಲಿ ನೌಕರರ ವಿವರ ಕೊಡುತ್ತಿಲ್ಲ ಎಂದರೆ ನೌಕರರ ಬಗ್ಗೆ ನಿಮಗೆ ಎಷ್ಟು ತಾತ್ಸಾರ ಇದೆ ಎಂಬುವುದು ತಿಳಿಯುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಈ ವೇಳೆ ನೌಕರರ ಪರ ವಕೀಲರು ಮಧ್ಯ ಪ್ರವೇಶಿಸಿ ಸಾರಿಗೆಯ ಅಡಿಪಾಯವಾಗಿರುವ ನೌಕರರ ವಿರುದ್ಧ ಈ ರೀತಿ ನಡೆದುಕೊಳ್ಳುವುದು ಮಾನವೀಯ ನೆಲೆಗಟ್ಟಿನಲ್ಲಿ ಸರಿಯಾದುದಲ್ಲ. ಹೀಗಾಗಿ ಅವರಿಗೆ ನ್ಯಾಯ ದೊರಕಬೇಕಿದೆ ಎಂದು ನ್ಯಾಯ ಪೀಠದ ಗಮನ ಸೆಳೆದಿದ್ದರು.

ಮುಂದಿನ ವಿಚಾರಣೆ ವೇಳೆಗೆ ವಜಾಗೊಂಡವರು ಮತ್ತು ವರ್ಗಾವಣೆ ಗೊಂಡವರಲ್ಲಿ ಎಷ್ಟು ನೌಕರರನ್ನು ವಾಪಸ್‌ ತೆಗೆದುಕೊಂಡಿದ್ದೀರಿ ಎಂ ಬಗ್ಗೆ ಸಮಗ್ರವಾಗಿ ಮಾಹಿತಿಯೊಂದಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಪೀಠ ತಾಕೀತು ಮಾಡಿತು.

ಹೀಗಾಗಿ ಇಂದಿನ ವಿಚಾರಣೆ ವೇಳೆ ಕೆಎಸ್‌ಆರ್‌ಟಿಸಿ ಪರ ವಕೀಲರು ಏನು ಮಾಡುತ್ತಾರೆ ಮತ್ತು ನೌಕರರ ಪರ ವಕೀಲರು ಏನು ಮಾಡುತ್ತಾರೆ ಎಂಬ ಕುತೂಹಲದಲ್ಲಿ ನೌಕರರ ಕಾಯುತ್ತಿದ್ದಾರೆ.

ಒಟ್ಟಾರೆ ಇಂದು ನೌಕರರಿಗೆ ಸ್ವಲ್ಪಮಟ್ಟಿಗಾದರೂ ಸಿಹಿ ಸುದ್ದಿ ಸಿಗಬಹುದು ಎಂಬ ವಿಶ್ವಾಸವನ್ನು ವಕೀಲರು ವ್ಯಕ್ತಪಡಿಸಿದ್ದು, ಎಲ್ಲ ನೌಕರರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸೋಣ.

Leave a Reply

error: Content is protected !!
LATEST
ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ ಕೃಷ್ಣರಾಜಪೇಟೆ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಅದ್ದೂರಿಯಾಗಿ ಜರುಗಿದ ಹುಲಿ ವಾಹನ ಉತ್ಸವ