Vijayapatha - ವಿಜಯಪಥ > Blog > NEWS > Crime > ಮಫ್ತಿಯಲ್ಲಿದ್ದ ಹೆಡ್ ಕಾನ್ಸ್ಟೇಬಲ್ ಚಿನ್ನದ ಸರವನ್ನೇ ಕದ್ದ ಖದೀಮರು
ಮೈಸೂರು: ನಗರದಲ್ಲಿ ಮಫ್ತಿಯಲ್ಲಿದ್ದ ಹೆಡ್ ಕಾನ್ಸ್ಟೇಬಲ್ ಸರ ಕದ್ದು ಪರಾರಿಯಾಗಿಗುತ್ತಿದ್ದ ಖದೀಮರನ್ನು ಸಾರ್ವಜನಿಕರೇ ಬೆನ್ನಟ್ಟಿ ಹಿಡಿದಿದ್ದಾರೆ.
ಸಂತ ಫಿಲೋಮಿನಾ ಚರ್ಚ್ ಬಳಿ ಗುರುವಾರ ರಾತ್ರಿ ಹೆಡ್ ಕಾನ್ಸ್ಟೇಬಲ್ ಇಲಿಯಾಸ್ ಹೋಗುತ್ತಿದ್ದ ವೇಳೆ ಬಂದ ಇಬ್ಬರು ಕಳ್ಳರು ಕುತ್ತಿಗೆಯಲ್ಲಿದ್ದ ಸರ ಕಿತ್ತುಕೊಂಡು ಓಡಲಾರಂಭಿಸಿದ್ದಾರೆ. ಈ ವೇಳೆ ಸಾರ್ವಜನಿಕರು ಚಿನ್ನದ ಸರದ ಸಮೇತ ಹಿಡಿದಿದ್ದಾರೆ.
32 ಗ್ರಾಂ ಚಿನ್ನದ ಸರ ಕಸಿದ ಕಳ್ಳರು, ನಂತರ ಓಡಲಾಗದೆ ಮಿಲಾದ್ ಪಾರ್ಕ್ನಲ್ಲಿ ಅಡಗಿದ್ದರು. ಸಾರ್ವಜನಿಕರು ಇಬ್ಬರನ್ನೂ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಸಹ ಪರಿಶೀಲಿಸುತ್ತಿದ್ದಾರೆ.
Related
Editordev