CrimeNEWSನಮ್ಮರಾಜ್ಯ

ಶವ ಸಾಗಿಸಲು ನಿರಾಕರಿಸಿದ ಕ್ಯಾಬ್ ಚಾಲಕನ ವಿರುದ್ಧ ಇಲ್ಲಸಲ್ಲದ ಕೇಸ್‌ ಜಡಿದು 7 ಸಾವಿರ ಲಂಚ ಪಡೆದ ಗುಬ್ಬಿ ಪಿಎಸ್‌ಐ: ಖಂಡಿಸಿ ಧರಣಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಗುಬ್ಬಿ: ಮೃತ ದೇಹ ಸಾಗಿಸಲು ಆಗಲ್ಲ ಎಂದ ಮ್ಯಾಕ್ಸಿ ಕ್ಯಾಬ್ ಚಾಲಕನ ಮೇಲೆ ಇಲ್ಲಸಲ್ಲದ ಕೇಸ್ ದಾಖಲಿಸಿದ ಪಿಎಸ್ಐ ಬಳಿಕ ಕ್ಯಾಬ್ ಚಾಲಕನ ಬಳಿಯೇ ತನ್ನ ಜೀಪ್ ಡ್ರೈವರ್ ಖಾತೆಗೆ ಲಂಚದ ಹಣವನ್ನು ಫೋನ್ ಪೇ ಮಾಡಿಸಿಕೊಂಡಿದ್ದಾನೆ ಎಂಬ ಆರೋಪ ತುಮಕೂರು ಜಿಲ್ಲೆ ಗುಬ್ಬಿ ಪೊಲೀಸರ ಮೇಲೆ ಕೇಳಿ ಬಂದಿದೆ.

ಗುಬ್ಬಿಯ ಎಂ.ಎಚ್.ಪಟ್ಟಣದ ಬಳಿ ನಿನ್ನೆ ಅಪಘಾತವಾಗಿ ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಬಳಿಕ ಸ್ಥಳಕ್ಕೆ ತೆರಳಿದ್ದ ಗುಬ್ಬಿ ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ಜ್ಞಾನಮೂರ್ತಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ನಂತರ ಮೃತದೇಹವನ್ನು ಸಾಗಿಸಲು ಮುಂದಾದ ಎಸ್​ಐ ಬೆಂಗಳೂರಿನಿಂದ ಚಿಕ್ಕಮಗಳೂರು ಜಿಲ್ಲೆ ತರೀಕೆರೆಗೆ ಹೋಗುತ್ತಿದ್ದ ತರಕಾರಿ ಸಾಗಿಸುವ ಮ್ಯಾಕ್ಸಿ ಕ್ಯಾಬ್​ನ ಚಾಲಕ ಶಕೀಲ್‌ನ​ನ್ನು ತಡೆದು ಶವವನ್ನು ಸಾಗಿಸುವಂತೆ ತಿಳಿಸಿದ್ದಾರೆ.

ಗುಬ್ಬಿ ಪಿಎಸ್​ಐ ಜ್ಞಾನಮೂರ್ತಿ ಹೇಳಿದ್ದನ್ನು ಒಪ್ಪದ ಶಕೀಲ್, ಗಾಯಾಳು ಗಂಭೀರ ಸ್ಥಿತಿಯಲ್ಲಿ ಇದ್ದಿದರೆ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದೆ. ಆದರೆ, ಶವವನ್ನು ನಾನು ಸಾಗಿಸುವುದಕ್ಕೆ ಆಗಲ್ಲ ಎಂದಿದ್ದಾರೆ.

ಕೂಡಲೇ ದರ್ಪ ತೋರಿದ ಎಸ್​ಐ ಜ್ಞಾನಮೂರ್ತಿ ಮ್ಯಾಕ್ಸಿ ಕ್ಯಾಬ್​ ಅನ್ನು ವಶಕ್ಕೆ ಪಡೆದು ಇಲ್ಲಸಲ್ಲದ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿ, ವಾಹನವನ್ನು ಬಿಡಬೇಕು ಅಂದರೆ ನೂರು ರೂ. ರಶೀದಿ ಪಡೆದು 7 ಸಾವಿರ ರೂ.ಗಳನ್ನು ನನ್ನ ಡ್ರೈವರ್ ಖಾತೆಗೆ ಜಮಾ ಮಾಡು ಎಂದು ಹೇಳಿದ್ದಾರೆ ಎಂದು ಚಾಲಕ ಶಕೀಲ್ ಆರೋಪಿಸಿದ್ದಾರೆ.

ಬೇರೆ ದಾರಿ ಇಲ್ಲದೇ ನನ್ನ ಅಕೌಂಟ್​ನಿಂದ ಜೀಪ್ ಡ್ರೈವರ್​ಗೆ ಹಣ ಸಂದಾಯ ಮಾಡಿದ್ದೇನೆ. ಹಣ ಸಂದಾಯ ಆದ್ರೂ ಕ್ಯಾಬ್ ರಿಲೀಸ್ ಮಾಡದ ಎಸ್​ಐ ಸಂಜೆ ವರೆಗೆ ವಾಹನ ಬಿಡದೇ ಸತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸದ್ಯ ಈ ಘಟನೆ ಖಂಡಿಸಿದ ಕ್ಯಾಬ್ ಚಾಲಕರು ಗುಬ್ಬಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಎಸ್ಐ ಜ್ಞಾನಮೂರ್ತಿ ವಿರುದ್ಧ ಆರೋಪ ಮಾಡಿದ್ದಾರೆ. ಇನ್ನೂ ಇದೇ ಎಸ್​ಐ ವಿರುದ್ಧ ಈ ರೀತಿಯ ಆರೋಪಗಳು ಪದೇ ಪದೇ ಕೇಳಿ ಬರುತ್ತಿವೆ. ಸಾರ್ವಜನಿಕರು ಎಸ್​ಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ ಎನ್ನುವುದು ಈ ವೇಳೆ ತಿಳಿದುಬಂದಿದೆ.

ಒಂದು ವೇಳೆ ಮ್ಯಾಕ್ಸಿ ಕ್ಯಾಬ್ ಚಾಲಕನ ಮೇಲೆ ಇಲ್ಲಸಲ್ಲದ ಕೇಸ್ ದಾಖಲಿಸಿ ಲಂಚ ಪಡೆದಿರುವುದು ಸಾಬೀತಾದರೆ ಅಂಥ ಲಂಚಕೋರ ಅಧಿಕಾರಿಯನ್ನು ಒಂದು ಕ್ಷಣವು ಇಟ್ಟುಕೊಳ್ಳದೆ ವಜಾ ಮಾಡಬೇಕು. ಇಲ್ಲ ಸುಖಸುಮ್ಮನೆ ಆರೋಪ ಮಾಡಿದ್ದರೆ ಅಂಥವರಿಗೂ ಕಾನೂನಿನಡಿ ತಕ್ಕ ಪಾಠ ಕಲಿಸಬೇಕು.

ಅದಕ್ಕೆ ಪಿಎಸ್ಐ ಕ್ಯಾಬ್ ಚಾಲಕನ ಬಳಿಯೇ ತನ್ನ ಜೀಪ್ ಡ್ರೈವರ್ ಖಾತೆಗೆ ಲಂಚದ ಹಣವನ್ನು ಫೋನ್ ಪೇ ಮಾಡಿಸಿಕೊಂಡಿದ್ದಾನೆಯೇ ಎಂಬುದನ್ನು ಮೊದಲು ಪರಿಶೀಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

Leave a Reply

error: Content is protected !!
LATEST
NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ ಕೃಷ್ಣರಾಜಪೇಟೆ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಅದ್ದೂರಿಯಾಗಿ ಜರುಗಿದ ಹುಲಿ ವಾಹನ ಉತ್ಸವ ತಿ.ನರಸೀಪುರ: ಭತ್ತದ ಬೆಂಬಲ ಬೆಲೆ ಜತೆಗೆ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಿ - ರೈತ ಮುಖಂಡರ ಆಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ