Vijayapatha - ವಿಜಯಪಥ > Blog > NEWS > ಆರೋಗ್ಯ > ಕ್ರೀಡಾಪಟುಗಳ 2ನೇ ಡೋಸ್ ಲಸಿಕಾಕರಣಕ್ಕೆ ಚಾಲನೆ
ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳಿಗೆ 2ನೇ ಡೋಸ್ ಕೋವಿಶಿಲ್ಡ್ ಲಸಿಕಾಕಾರಣಕ್ಕೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯ ನಿರ್ದೇಶಕ ಆರ್.ಜಿ. ನಾಡಗೀರ್ ಚಾಲನೆ ನೀಡಿದರು.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಹಾಗೂ ಅರೋಗ್ಯ ಇಲಾಖೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಲಸಿಕಾ ಅಭಿಯಾದಲ್ಲಿ ಈಗಾಗಲೇ ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದಿರುವ ಹಲವಾರು ಕ್ರೀಡಾಪಟುಗಳು 2ನೇ ಡೋಸ್ ಕೋವಿಶಿಲ್ಡ್ ಲಸಿಕೆ ಪಡೆಯಲು ನೋಂದಣಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಹಾಕಿ ತರಬೇತಿದಾರ ಸಂಜಯ ಬಾಣದ್, ಭಾಸ್ಕೆಟ್ಬಾಲ ತರಬೇತಿದಾರ ಪ್ರವೀಣಕುಮಾರ ಪುಣೆ ಹಾಗೂ ಮರೆಪ್ಪ ಕೂಸ್ಮಕರ್ ಮತ್ತಿತರರು ಉಪಸ್ಥಿತರಿದ್ದರು.
Related
Editordev