ಬೆಂಗಳೂರು : ಸಾರಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಏಪ್ರಿನಲ್ಲಿ ಮುಷ್ಕರ ಹಮ್ಮಿಕೊಂಡಿದ್ದ ವೇಳೆ ವಜಾಗೊಂಡಿರುವ ಸಿಬ್ಬಂದಿಗಳನ್ನು ಶೀಘ್ರದಲ್ಲೇ ಮತ್ತೆ ಕೆಲಸಕ್ಕೆ ನಿಯೋಜಿಸಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀ ರಾಮುಲು ಹೇಳಿದ್ದಾರೆ.
ತುಮಕೂರಿನಲ್ಲಿ ನಿನ್ನೆ (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಾರಿಗೆ ನೌಕರರ ಮುಷ್ಕರದ ವೇಳೆ ಕೆಲವು ನೌಕರರನ್ನು ಅಮಾನತು ಮಾಡಲಾಗಿದೆ. ಇನ್ನೂ ಕೆಲವರನ್ನು ಹೊರ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿದೆ. ಹೀಗೆ ವಜಾ, ಅಮಾನತು ಮತ್ತು ಹೊರ ಜಿಲ್ಲೆಗೆ ವರ್ಗಾವಣೆಯಾದ ನೌಕರರ ಪಟ್ಟಿ ನೀಡುವಂತೆ ಅಧಿಕಾರಿಗಳಿಗೆ ಕೇಳಿದ್ದು, ಪಟ್ಟಿ ಬಂದ ಕೂಡಲೇ ನೌಕರರು ಹಾಗೂ ಸಿಬ್ಬಂದಿಗೆ ಅನುಕೂಲವಾಗುವಂತೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಾರಿಗೆ ಸಚಿವರು ಅಧಿಕಾರ ವಹಿಸಿಕೊಂಡ೨ ದಿನದಿಂದಲೂ ಒಂದೇ ಮಂತ್ರ ಪಠಿಸುತ್ತಿದ್ದಾರೆ. ಎಲ್ಲ ನೌಕರರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲಾಗುವುದು, ಅನುಕೂಲ ಮಾಡಿಕೊಡಲಾಗುವುದು ಎಂದು ಆದರೆ ಇದುವರೆಗೂ ಬರಿ ಭರವಸೆಯಲ್ಲೇ ಕಾಲ ಕಳೆದರೇ ಹೊರತು ಜಾರಿಗೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ.
ಅಧಿಕಾರಿಗಳು ವರದಿ ನೀಡುವುದಕ್ಕೆ ವಿಳಂಬ ಮಾಡುತ್ತಿರುವುದೆ ಸಚಿವರ ಈ ನಡೆಗೆ ಕಾರಣ ಎಂದು ಬಲ್ಲ ಮೂಲಗಳು ತಿಳಿಸಿವೆ. ಜತೆಗೆ ಅಧಿಕಾರಿಗಳ ನಡೆಯನ್ನು ಕಾದು ನೋಡಿ ಎಲ್ಲಿ ಬರೆ ಎಳೆಯಬೇಕೊ ಎಲ್ಲಿ ನಮ್ಮ ಸಚಿವರು ಎಳೆಯುತ್ತಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಇನ್ನು ಕೆಲ ಭ್ರಷ್ಟ ಅಧಿಕಾರಿಗಳು ತಾವು ಮಾಡಿರುವ ಅಕ್ರಮವನ್ನು ಮುಚ್ಚಿಕೊಳ್ಳಲು ಶ್ರೀರಾಮುಲು ಅವರಿಗೆ ಸರಿಯಾದ ಮಾಹಿತಿ ಕೊಡದೆ ದಿಕ್ಕು ತಪ್ಪಿಸಿಸುತ್ತಿದ್ದಾರೆ. ಅವರು ಹೇಗೋ 19 ತಿಂಗಳು ಇಲಾಖೆಯಲ್ಲಿ ತುಂಬಿಸಿದರೆ ಮುಂದೆ ಯಾರು ಸಚಿವರಾಗುವರೋ ಆಗ ನೋಡಿಕೊಳ್ಳೋಣ ಎಂಬ ಲೆಕ್ಕಚ್ಚಾರಲ್ಲಿ ಅಧಿಕಾರಿಗಳು ಐಎಎಸ್ ಅಕಾರಿಗಳ ಮೂಲಕವು ಕಿವಿ ಚುಚ್ಚುತ್ತಿದ್ದಾರೆ ಎಂಬ ಮಾತುಗಳು ನಿಗಮಗಳ ಕೆಲ ಅಧಿಕಾರಿಗಳ ಬಾಯಿಂದ ಬಾಯಿಗೆ ಹರಿದಾಡುತ್ತಿದೆ.
ಇನ್ನು ಸಚಿವರು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ 15ದಿನಗಳ ಹಿಂದೆಯೇ ಇನ್ನು ಒಂದುವಾರದೊಳಗೆ ನೌಕರರ ಸಮಸ್ಯೆ ಬಗೆ ಹರಿಸುತ್ತೇವೆ ಎಂದು ಭರವಸೆ ನೀಡಿದ್ದರು, ಈ ಬಗ್ಗೆ ವಿಜಯಪಥದಲ್ಲಿ ವರದಿಯೂ ಪ್ರಕಟವಾಗಿತ್ತು. ಆದರೆ 15 ದಿನಗಳು ಕಳೆದರೂ ಇನ್ನು ಸಿಎಂ ಮತ್ತು ಸಚಿವರು ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಹೇಳಿಕೆಗೆ ಸೀಮಿತವಾಗಿರುವುದು ನೌಕರರನ್ನು ಇನ್ನಷ್ಟು ಖಿನ್ನತೆಗೆ ದೂಡುತ್ತಿದೆ.
ಸೆ.3ರಂದು ನಡೆದ 60 ವರ್ಷ ಸಂಭ್ರಮದಲ್ಲಿ ನೌಕರರಿಗೆ ಸಿಎಂ ಮತ್ತು ಸಾರಿಗೆ ಸಚಿವರು ಸಿಹಿ ಸುದ್ದಿ ನೀಡುವರು ಎಂಬ ಭರವಸೆಯ ಕಣ್ಣುಗಳನ್ನು ಮಿಟುಕಿಸದೆ ನೌಕರರು ಕಾಯುತ್ತಿದ್ದರು. ಆದರೆ ಅವರ ಭರವಸೆ ಹುಸಿಯಾಯಿತು.