CrimeNEWSನಮ್ಮರಾಜ್ಯ

ಡ್ರಗ್ಸ್ ಪ್ರಕರಣ: ಚಾರ್ಜ್‌ಶೀಟ್ ಸಲ್ಲಿಸಿದ ಪೊಲೀಸರಿಂದ ಅನುಶ್ರೀ ಹೆಸರು ಉಲ್ಲೇಖ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮಂಗಳೂರು: ಮಾದಕವಸ್ತು ಪ್ರ ಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾ ಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿ ಸಿದ್ದು,  ಆ್ಯಂ ಕರ್ ಹಾಗೂ ನಟಿ ಅನುಶ್ರೀ ಅವರ ಹೆಸರು ಉಲ್ಲೇ ಖಮಾಡಲಾಗಿದೆ.

ಮಂಗಳೂರು ಸಿಸಿಬಿ ಪೊಲೀಸರು ಸಲ್ಲಿ ಸಿರುವ ಚಾರ್ಜ್ ಶೀಟ್‍ನಲ್ಲಿ ಅನುಶ್ರೀ ಹೆಸರು ಇದ್ದು , ಈ ಪ್ರ ಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಹೇಳಿಕೆ ಆಧರಿಸಿ ಈ ಉಲ್ಲೇ ಖಮಾಡಲಾಗಿದೆ.

ಆ್ಯಂಕರ್ ಅನುಶ್ರೀ ಡ್ರ ಗ್ಸ್ ಸೇವನೆಜೊತೆಗೆ ಅದರ ಸಾಗಾಟಮಾಡುತ್ತಿದ್ದರು ಎಂದು ಪ್ರ ಕರಣದ ಎರಡನೇ ಆರೋಪಿ ಕಿಶೋರ್ ಅಮನ್ ಶೆಟ್ಟಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಇದನ್ನು ಆಧರಿಸಿ ಚಾರ್ಜ್ ಶೀಟ್ ನಲ್ಲಿ ಹೆಸರು ಪ್ರಸ್ತಾಪಿಸಲಾಗಿದೆ.

ಅವರ ರೂಂಗೆ ಅನುಶ್ರೀ ಡ್ರಗ್ಸ್ ತರುತ್ತಿದ್ದರು. ಕಿಶೋರ್, ತರುಣ್‌ ಜೊತೆ ಸಾಕಷ್ಟು ಬಾರಿ ಅನುಶ್ರೀ ಕೂಡ ಡ್ರಗ್ಸ್ ಸೇವನೆ ಮಾಡಿದ್ದರು ಎಂದು ಕಿಶೋರ್ ಶೆಟ್ಟಿ ತಿಳಿಸಿದ್ದಾನೆ ಎನ್ನಲಾಗಿದೆ.

2007-08ರಲ್ಲಿ ರಿಯಾಲಿಟಿ ಶೋಗೆ ಸಂಬಂಧಿಸಿದಂತೆ ತರುಣ್ ರೂಮ್‌ನಲ್ಲಿ ಅನುಶ್ರೀಗೆ ಡ್ಯಾನ್ಸ್ ತರಬೇತಿ ನೀಡಿದ್ದ. ಈ ಸಂದರ್ಭದಲ್ಲಿ ಅನುಶ್ರೀ ಡ್ರಗ್ಸ್ ಖರೀದಿಸಿ ತರುತ್ತಿದ್ದರು. ನಮಗೆ ಡ್ರಗ್ಸ್ ನೀಡಿ, ಅನುಶ್ರೀ ಕೂಡ ಊಟದ ಮೊದಲು ಡ್ರಗ್ಸ್ ಸೇವಿಸುತ್ತಿದ್ದರು ಎಂದು ಕಿಶೋರ್ ತಿಳಿಸಿದ್ದಾನೆ ಎನ್ನಲಾಗಿದೆ.

ಆರೋಪಿ ಕಿಶೋರ್ ಹೇಳಿಕೆಯಿಂದ ಪ್ರಕರಣ ಮಹತ್ವ ಪಡೆದಿದೆ. ಇದರ ಆಧಾರದಲ್ಲಿ ಮಂಗಳೂರು ಪೊಲೀಸರು ಆರೋಪ ಪಟ್ಟಿಯಲ್ಲಿ ಅನುಶ್ರೀ ಹೆಸರು ಉಲ್ಲೇಖಿಸಿದ್ದಾರೆ.

ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಶ್ರೀ ಅವರನ್ನು ಮಂಗಳೂರು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಮತ್ತೆ ವಿಚಾರಣೆಗೆ ಕರೆಸಿರಲಿಲ್ಲ. ಪ್ರಕರಣದಲ್ಲಿ ಅನುಶ್ರೀ ಹೆಸರು ಕೈಬಿಡುವಂತೆ ಪ್ರಭಾವಿ ರಾಜಕಾರಣಿಗಳು ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು.

Leave a Reply

error: Content is protected !!
LATEST
LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ ಕೃಷ್ಣರಾಜಪೇಟೆ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಅದ್ದೂರಿಯಾಗಿ ಜರುಗಿದ ಹುಲಿ ವಾಹನ ಉತ್ಸವ ತಿ.ನರಸೀಪುರ: ಭತ್ತದ ಬೆಂಬಲ ಬೆಲೆ ಜತೆಗೆ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಿ - ರೈತ ಮುಖಂಡರ ಆಗ್ರಹ