ಆಗ ತಾನೇ ಸೂರ್ಯ ಉದಯಿಸುತ್ತಿದ್ದ… ತಂಗಾಳಿಯ ಮಧ್ಯೆ… ರೈತರ ಗುಂಪೊಂದು ಜೊತೆಯಲ್ಲಿ ಕುಳಿತು ಕಲಿಯುತ್ತಿದ್ದರು..ಅರೇ ಇದೇನು ಎಂದು ಯೋಚಿಸುತ್ತಿರುವಿರಾ? ಈ ತರಹ ಶಾಲೆ ಭಾಗಶಹ: ನೀವು ನೋಡಿರುವುದಿಲ್ಲ ಈ ತರಹ ರೈತರ ಪಾಠ ಶಾಲೆ ಕಂಡಿದ್ದು ಚಿತವಾಡಗಿ ರಸ್ತೆಯ ವೀರಾಪುರದಲ್ಲಿರುವ ರೈತರಾದ ನಿಂಗಪ್ಪ ರಾಮವಾಡಗಿ ಹೊಲದಲ್ಲಿ.
ಕೆಬಿಜೆಎನ್‍ಎಲ್, ಕೃಷಿ ಇಲಾಖೆ, ಡಿಮ್ಯಾಕ್, ಅಮೃತ ರೈತ ಉತ್ಪಾದಕರ ಸಂಘ, ತೋಟಗಾರಿಕ ಇಲಾಖೆ ಜೈನ ನೀರಾವರಿ ಜಂಟಿ ಆಯೋಗದಲ್ಲಿ ಈ ಹೊಸ ಪ್ರಯೋಗವನ್ನು ಮಾಡಲಾಯಿತು ಈ ರೈತರ ಪಾಠಶಾಲೆಯಲ್ಲಿ ಮೆಣಸಿನಕಾಯಿ ಬೆಳೆಯ ಸಂಪೂರ್ಣ ಬೇಸಾಯ ಕ್ರಮ ತಿಳಿಸಿಕೊಡಲಾಯಿತು.
ಮೆಣಸಿನ ಕಾಯಿ ಬೆಳೆಯು ವಾಣಿಜ್ಯ ಬೆಳೆಯಾಗಿದ್ದು ಇದು ಮುಖ್ಯವಾಗಿ 180 ದಿನದಲ್ಲಿ ಬೆಳೆ ಬರುತ್ತದೆ. ಇಲ್ಲಿ ರೈತರ ಜೊತೆಯಲ್ಲಿ ಕೃಷಿ ಪದವೀಧರರು ಕೂಡ ಭಾಗವಹಿಸಿ ತಿಳಿವಳಿಕೆ ನೀಡಿದರು.
ಮುಖ್ಯವಾಗಿ ಈ ಪಾಠಶಾಲೆಯಲ್ಲಿ ತಂತ್ರಜ್ಞಾನದ ಮೂಲಕ ಹೇಗೆ ಅಧಿಕ ಇಳುವರಿ ಪಡೆಯಬಹುದು. ಇದರೊಂದಿಗೆ ಪ್ರತಿ ತಿಂಗಳಿಗೊಮ್ಮೆ ರೈತರ ಜಮಿನಿನಲ್ಲಿ ಬಂದು ವೈಜ್ಞಾನಿಕವಾಗಿ ರೈತರು ಬೇಸಾಯದ ಬಗ್ಗೆ ಕಲಿಯುವುದು ಇದರ ಮುಖ್ಯ ಉದ್ದೇಶವಾಗಿದೆ.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಎಎಚ್‍ಒ ಅಧಿಕಾರಿ ಶಕುಂತಲ, ಕೃಷಿ ಅಧಿಕಾರಿ ಹರಿಪ್ರಸಾದ್ ಪುರೋಹಿತ್, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆಯ ಸಂಗಮೇಶ್ ಸಜ್ಜನ್, ಜೈನ ನೀರಾವರಿಯ ಹಿರಿಯ ಸಲಹೆಗಾರಾರದ ಪ್ರಭಾಕರ್ಡಿ.
ಮ್ಯಾಕ್ ಸಂಸ್ಥೆಯ ಯೋಜನ ವ್ಯವಸ್ಥಾಪಕರಾದ ಸುರೇಶ್ ಷಣ್ಮುಗಂ, ದೋನಿ ( ವಿಸ್ತರಣಾ ಅಧಿಕಾರಿ), ಜೂನಿಯರ್ ಅಗ್ರೋನಮಿಸ್ಟ್ ಪರಶುರಾಮ್, ಆಕಾಶ್, ಯೋಜನಾ ಅಧಿಕಾರಿ ಮಾನಸ ಗೌಡ, ಡಾ. ವಿಕ್ಕಿ ( ಸಲಹೆಗಾರಾರದ) ಕ್ಷೇತ್ರ ಸಂಯೋಜಕರಾದ ಬಸವನಗೌಡ ಗೌಡರ್, ಪಾಠ ಶಾಲೆಯಲ್ಲಿ 50 ರೈತರು ಭಾಗವಹಿಸಿದ್ದರು.