Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ಕೂಟದ ನೂತನ ಕಚೇರಿ ಲೋಕಾರ್ಪಣೆ : ಉದಾಸೀನತೆಗೆ ಇಲ್ಲಿ ಜಾಗವಿರಬಾರದು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ನೂತನ ಕಚೇರಿಯನ್ನು ಗಣೇಶ ಚತುರ್ಥಿಯ ದಿನವಾದ ಶುಕ್ರವಾರ ಅಧಿಕೃತವಾಗಿ ಉದ್ಘಾಟಿಸಲಾಯಿತು.

ಇಲ್ಲಿಯವರೆಗೆ ಗಾಂಧಿನಗರದಲ್ಲಿರುವ ರೈತ ಸಂಘದ ಕಚೇರಿಯಲ್ಲೇ ಕೂಟಕ್ಕೆ ಸಂಬಂಧಿಸಿದ ಎಲ್ಲ ಕೆಲಸ ಕಾರ್ಯಗಳು ನಡೆಯುತ್ತಿದ್ದವು. ಅದು ತಾತ್ಕಾಲಿವಾಗಿದ್ದರಿಂದ ಇಂದು ಅಧಿಕೃತವಾಗಿ ವಿಲ್ಸನ್‌ಗಾರ್ಡನ್‌ನಲ್ಲಿ ನೂತನ ಕಚೇರಿಯನ್ನು ತೆರೆಯಲಾಗಿದೆ.

ಆದರೆ, ಕಚೇರಿ ಉದ್ಘಾಟನೆಯನ್ನು ತುಂಬಾ ಸಿಂಪಲ್‌ಆಗಿ ನೆರವೇರಿಸಲಾಗಿದೆ. ಹೀಗಾಗಿ ಸಾರಿಗೆಯ ಬಹಳಷ್ಟು ನೌಕರರಿಗೆ ಕಚೇರಿ ಉದ್ಘಾಟನೆಯ ವಿಷಯವೇ ತಿಳಿದಿಲ್ಲ. ಕನಿಷ್ಠಪಕ್ಷ ಒಬ್ಬರು ಸಾಹಿತಿಯೋ, ಹೋರಾಟಗಾರರನ್ನೋ ಇಲ್ಲ ನಿವೃತ್ತ ಸಾರಿಗೆಯ ಅಧಿಕಾರಿಯನ್ನಾದರೂ ಕರೆದು ಅವರ ಮೂಲಕ ಕಚೇರಿ ಉದ್ಘಾಟಿಸಿದ್ದರೆ ಒಂದು ಮರೆಯಲಾಗದ ಸವಿ ನೆನಪಾಗುತ್ತಿತ್ತು ಎಂದು ಹಲವು ನೌಕರರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು 1.30 ಲಕ್ಷ ನೌಕರರ ಹಿತದೃಷ್ಟಿಯಿಂದ ಹುಟ್ಟಿಕೊಂಡಿರುವ ಕೂಟದ ಕಚೇರಿಯನ್ನು ಸಿಂಪಲ್‌ಆಗಿ ಉದ್ಘಾಟಿಸಿರುವುದಕ್ಕೂ ಹಲವು ಕಾರಣಗಳು ಇರಬಹುದು. ಹಾಗಂತ ಕಾರಣಗಳನ್ನೇ ಮುಂದಿಟ್ಟುಕೊಂಡು ಕಚೇರಿಯ ಉದ್ಘಾಟನೆ ವಿಷಯವನ್ನು ನಮ್ಮ ನೌಕರರಿಗೆ ತಿಳಿಸದೆ ಹೋದರೆ ಹೇಗೆ? ಇದು ತಪ್ಪಲ್ಲವೇ ಎಂದು ದೂರದೂರುಗಳಿಗೆ ಮುಷ್ಕರದ ಸಮಯದಲ್ಲಿ ವರ್ಗಾವಣೆಗೊಂಡಿರುವ ಹಲವು ನೌಕರರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಅದು ಏನೆ ಇರಲಿ ಸಾರಿಗೆ ನೌಕರರಿಗೆ ಒಳ್ಳೆದನ್ನು ಮಾಡುವ ಉದ್ದೇಶದಿಂದ ಹುಟ್ಟಿಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟವು ನಿತ್ಯ ನೌಕರರ ಪಾಲಿನ ದೈವವಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸಲು ನಿರತವಾಗಲಿ.

ನೌಕರರ ಹಿತ ಕಾಯುವುದು ಕೂಟದ ಪ್ರತಿಯೊಬ್ಬ ಪದಾಧಿಕಾರಿಯ ಕರ್ತವ್ಯವಾಗಿದ್ದು ಅದನ್ನು ಮರೆಯದೆ ಪಾಲಿಸಬೇಕು. ಆಗ ಮಾತ್ರ ಕೂಟಕ್ಕೂ ಮತ್ತು ಕೂಟದ ಪದಾಧಿಕಾರಿಗಳು ಒಳ್ಳೆ ಹೆಸರು ಬರಲು ಸಾಧ್ಯ ಎಂಬುದನ್ನು ನೆನಪಿಟ್ಟಿಕೊಳ್ಳಬೇಕಾಗಿದೆ.

ಕೂಟದಿಂದ ನೌಕರರಿಗೆ ಒಳ್ಳೆದಾಗುವ ಯಾವ ಕೆಲಸವನ್ನೇ ಮಾಡಿದರು ಆ ಕೆಲಸ ನೌಕರರಿಗೂ ತಿಳಿಸುವುದು ನಿಮ್ಮ ಜವಾಬ್ದಾರಿಗಳಲ್ಲಿ ಒಂದಾಗಿರುತ್ತದೆ. ಇಲ್ಲದಿದ್ದರೆ ಕೂಟ ಮತ್ತು ಕೂಟದ ಪದಾಧಿಕಾರಿಗಳ ಮೇಲೆ ಅನುಮಾನ ಮೂಡುತ್ತದೆ. ಒಮ್ಮೆ ಹೆಸರು ಹೋದರೆ ಅದನ್ನು ಮತ್ತೆ ಸಂಪಾದಿಸಲು ಸಾಧ್ಯವೆ ಇಲ್ಲ ಎಂಬುದನ್ನು ಕೂಟದ ಪದಾಧಿಕಾರಿಗಳು ಮರೆಯಬಾರದು.

ಇಷ್ಟೆಲ್ಲವನ್ನು ಏಕೆ ಹೇಳುತ್ತಿದ್ದೇವೆ ಎಂದರೆ ಕೂಟದ ಪದಾಧಿಕಾರಿಗಳಲ್ಲಿ ಕೆಲವರಿಗೆ ಉದಾಸೀನತೆ ಭಾವನೆ ತುಸು ಹೆಚ್ಚಾಗೆ ಇದೆ ಎಂಬ ಮಾತುಗಳು ನೌಕರರಿಂದ ಕೇಳಿ ಬರುತ್ತಿವೆ. ಹೀಗಾಗಿ ಮುಂದೆ ಇಂಥ ಉದಾಸೀನತೆ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯಲ್ಲಿ ಇರಬಾದರು. ಇದನ್ನು ಸದಾ ಒಬ್ಬ ಮುಖಂಡನಾದವನು ಪಾಲಿಸಬೇಕು. ಈ ಹಿಂದೆ ಹೇಗಿದ್ದೀರಿ ಎಂಬುವುದು ಇಲ್ಲಿ ಮುಖ್ಯವಲ್ಲ ಮುಂದೆ ಹೇಗಿರುತ್ತೀರಿ ಎಂಬುವುದು ಬಹಳ ಮುಖ್ಯವಾಗುತ್ತದೆ.

ನೊಂದ ನೌಕರರ ಕಣ್ಣೀರೊರೆಸುವ ಸ್ಥಾನದಲ್ಲಿ ನಾವಿದ್ದೇವೆ. ಆ ನಿಟ್ಟಿನಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರದ ಮೇಲು ಮುಂದಿನ ಆಗುಹೋಗುಗಳು ಇರುತ್ತವೆ ಎಂಬುವುದು ತಿಳಿದಿರಬೇಕು. ಇದು ಆಟದ ಮೈದಾನವಲ್ಲ ಮೈದಾನರೀತಿ ಕಾಣುತ್ತದೆ ಅಷ್ಟೆ, ಹೀಗಾಗಿ ನಾವು ಇಲ್ಲಿ ಆಟವಾಡಬಾರದು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನ್ಯಾಯಾಲಯದ ರೀತಿ ಕೆಲಸ ಮಾಡಬೇಕು ಎಂಬುದನ್ನು ಅರಿತುಕೊಂಡು ನಡೆಯಬೇಕಿದೆ.

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...