ಮೆಣಸಿನಕಾಯಿ ಬೆಳೆಯಲು ಸಾಮಾನ್ಯ ಜ್ಞಾನ: ಹೆಚ್ಚಿನ ಆದಾಯಕ್ಕೆ ನಾಂದಿ- ಶಶಿ ಕುಮಾರ್
ಹೊನ್ನರಹಳ್ಳಿ: ಮೆಣಸಿನಕಾಯಿ ಬೆಳೆ ಬೆಳೆಯುವ ಮೊದಲು ರೈತರು ಉತ್ತಮ ಗುಣಮಟ್ಟದ ಬೀಜ ಖರೀದಿ, ತಂತ್ರಜ್ಞಾನದ ಅಳವಡಿಕೆ, ಈ ಬೆಳೆಯಲ್ಲಿ ಬರುವ ಸಾಮಾನ್ಯ ರೋಗ ಮತ್ತು ಕೀಟದ ನಿರ್ವಹಣೆ, ಇದರೊಂದಿಗೆ ಕೊಯ್ಲಿನ ನಂತರದ ವಿಧಾನಗಳ ಅಳವಡಿಕೆಯ ಬಗ್ಗೆ ಪ್ರತಿಯೊಬ್ಬ ರೈತರು ಕೂಡ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳುವುದರೊಂದಿಗೆ ಹೆಚ್ಚಿನ ಆದಾಯ ಪಡೆಯಬಹುದು ಎಂದು ತೋಟಗಾರಿಕಾ ವಿಶ್ವವಿದ್ಯಾಲಯ ಬಾಗಲಕೋಟೆಯ ಪ್ರಾಧ್ಯಪಕರು ಮತ್ತು ವಿಸ್ತರಣಾ ಅಧಿಕಾರಿ ಡಾ. ಎಸ್. ಶಶಿ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ತೋಟಗಾರಿಕಾ ವಿಶ್ವ ವಿದ್ಯಾಲಯ , ಕೃಷಿ ಇಲಾಖೆ, ಕೆಬಿಜೆಎನ್‌ಎಲ್, ಹನಿಯಿಂದ ಮಾರುಕಟ್ಟೆಗೆ ಕೃಷಿ ಕಾರಿಡಾರ್ (ಡಿಮ್ಯಾಕ್), ಅಮೃತ ರೈತ ಉತ್ಪಾದಕರ ಸಂಘ ಸಂಯುಕ್ತಶ್ರಯದಲ್ಲಿ ಹೊನ್ನರಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ಮೆಣಸಿನಕಾಯಿ ಬೆಳೆಯ ಮೇಲೆ ಸಮಗ್ರ ಕೀಟ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೆಣಸಿನಕಾಯಿ ಬೆಳೆಯು ವಾಣಿಜ್ಯ ಬೆಳೆಯಾಗಿದೆ ಮತ್ತು ಈ ಬೆಳೆಯಲ್ಲಿ ಮುಖ್ಯವಾಗಿ ಹೂ ಬಿಡುವ ಸಮಯದಲ್ಲಿ ಹೆಚ್ಚಿನ ಕೀಟಗಳು ಬರುವುದರಿಂದ ಸರಿಯಾದ ಸಮಯದಲ್ಲಿ ಮುನ್ನೆಚರಿಕೆ ಕ್ರಮ ತಗೆದುಕೊಳ್ಳುವುದರಿಂದ ಹೆಚ್ಚಿನ ಇಳುವರಿ ಪಡೆಯಬಹದು ಎಂದರು.
ತೋಟಗಾರಿಕ ವಿಶ್ವವಿದ್ಯಾಲಯ ಬಾಗಲಕೋಟೆಯ ಸಹ ಪ್ರಾಧ್ಯಪಕ ಡಾ.ಎಂ.ಎ.ವಾಸೀಮ್ ಸಮಗ್ರ ರೋಗ ನಿರ್ವಹಣೆ ಕುರಿತು ಮಾತನಾಡಿ ಮುಖ್ಯವಾಗಿ ನಮ್ಮ ಪಾರಂಪರಿಕ ಪದ್ದತಿಯಲ್ಲಿ ಉಪಯೋಗಿಸುವಂತಹ ಬೇವಿನ ಎಣ್ಣೆಯನ್ನು ಮೆಣಸಿನಕಾಯಿ ಗಿಡದ ಮೇಲೆ ಸಿಂಪಡಿಸುವುದರಿAದ ಕೀಟಗಳನ್ನು ಕಡಿಮೆ ಮಾಡಬಹುದು ಮತ್ತು ಇದರೊಂದಿಗೆ ರೈತರು ಕೃಷಿ ವಿಜ್ಞಾನಿಗಳ ಸಲಹೆ ಪಡೆದು ನಂತರ ಔಷಧಿಗಳನ್ನು ಖರೀದಿ ಮಾಡುವುದು ಒಳಿತು ಎಂದರು.
ತೋಟಗಾರಿಕ ವಿಶ್ವವಿದ್ಯಾಲಯ ಬಾಗಲಕೋಟೆಯ ಸಹ ಪ್ರಾಧ್ಯಪಕರಾದ ಡಾ.ನೂರೂಲ್ಲಾ ಹಾವೇರಿ ಮಾತನಾಡಿ ಮುಖ್ಯವಾಗಿ ಕೀಟಗಳು ಬರುವುದು ಸಾಮಾನ್ಯ ಮುಖ್ಯವಾಗಿ ಬೆಳೆಯ¸ ಸುತ್ತ ಸಜ್ಜೆ ಮತ್ತು ಬೆಳೆಯ ಮಧ್ಯ ಚೆಂಡು ಹೂವಿನ ಗಿಡ ಹಾಕುವುದರಿಂದ ಕೀಟಗಳ ಬಾಧೆ ಕಡಿಮೆ ಮಾಡಬಹದು ಎಂದು ಸಲಹೆ ನೀಡಿದರು.
ವಿ-ಫಾರ್ಮ್ಸ್‌ನ ಡಾ. ಮಾನಸ್ ಮಾತನಾಡಿ ಇಂದು ಹೆಚ್ಚಾಗಿ ರಾಸಯಾನಿಕ ಉಪಯೋಗಿಸುತ್ತಿರುವುದರಿಂದ ಇಂದು ಇಂಡೋಲಫರ್Aತಹ ಹಾನಿಕಾರಕ ರಾಸಾಯಾನಿಕ ವಸ್ತುಗಳು ತಾಯಿಯ ಎದೆಯ ಹಾಲಿನಲ್ಲಿ ಕಾಣ ಬರುತ್ತಿರುವುದು ಆಘಾತಕಾರಿ ವಿಷಯ, ಇದಕ್ಕೆ ಮುಖ್ಯ ಕಾರಣ ನಾವು ಉಪಯೋಗಿಸುವ ರಾಸಾಯಾನಿಕ ರಸಗೊಬ್ಬರ ಮತ್ತು ಔಷಧಿಗಳು ರೈತರು ತಮ್ಮ ಮನಸೋ ಇಚ್ಛೆ ರಾಸಾಯಾನಿಕ ವಸ್ತುಗಳನ್ನು ತಮ್ಮ ಹೊಲದಲ್ಲಿ ಉಪಯೋಗಿಸಬಾರದು ಸಾಧ್ಯವಾದಷ್ಟು ಜೈವಿಕ ವಸ್ತುಗಳನ್ನು ಉಪಯೋಗಿಸುವುದು ಒಳಿತು ಎಂದರು.
ತರಬೇತಿಯ ಭಾಗವಾಗಿ ಸಮೀಪದ ಮೆಣಸಿನಕಾಯಿ ಹೊಲಕ್ಕೆ ವಿಜ್ಞಾನಿಗಳ ತಂಡ ಭೇಟಿ ನೀಡಿ ರೈತರೊಂದಿಗೆ ಪ್ರಾತ್ಯಕ್ಷಿಕೆ ಮಾಡುವ ಮೂಲಕ ತಿಳಿಸಿದರು ಮತ್ತು 80 ರೈತರು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಕೋರಮಂಡಲ್ ಇಂಟರ್‌ನ್ಯಾಷನಲ್‌ನ ಬೀರೂರು ಎಸ್, ಕೃಷಿ ಇಲಾಖೆಯ ಆತ್ಮ ಯೋಜನೆಯ ತಾಂತ್ರಿಕ ಸಲಹೆಗಾರರಾದ ಸಜ್ಜನ್, ರೈತರಾದ ಹಿರೇಮಠ, ಗ್ರಾಮ ಪಂಚಾಯಿತಿ ಸದಸ್ಯ ಹಿರೇಗೌಡ ಮಾಗಿ , ಡಿಮ್ಯಾಕ್ ಯೋಜನೆಯ ಸಿಬ್ಬಂದಿ ಭಾಗವಹಿಸಿದ್ದರು.
Related
You Might Also Like
KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋಣ
ಬೆಂಗಳೂರು: ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಬಂದು ಉದ್ಭವವಾಗುವ ಈ ಮಹಾನುಭಾವ ತಮ್ಮ ಸ್ವಾರ್ಥ ಹಾಗೂ ಆರ್ಥಿಕವಾಗಿ ಸಬಲರಾಗಲು ಸರ್ಕಾರದ ಹಾಗೂ ಸಾರಿಗೆ ನಿಗಮದ ಆಡಳಿತ ಮಂಡಳಿಯ ಮುಂದೆ...
KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್ ಬಸ್ಗಳು- ಸಚಿವರಿಂದ ಲೋಕಾರ್ಪಣೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್ ಬಸ್ಗಳಿಗೆ ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಸಚಿವರಾದ ರಾಮಲಿಂಗರೆಡ್ಡಿ ಮತ್ತು...
KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ
ಬೆಂಗಳೂರು: ಶಕ್ತಿ ಯೋಜನೆ ಕರ್ನಾಟಕ ಸರ್ಕಾರದ ಮಹಿಳಾ ಸಬಲೀಕರಣದೆಡೆಗಿನ ದಿಟ್ಟ ಹೆಜ್ಜೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ತಮ್ಮ ಪ್ರತಿಯೊಂದು ಸುಳ್ಳಿನ ಸರಮಾಲೆಯ ಟ್ಟೀಟ್ಗೂ ನಾವು...
ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್
ಹುಬ್ಬಳ್ಳಿ: ಹುಬ್ಬಳ್ಳಿಯ ಸಾಯಿನಗರದಲ್ಲಿ ಅಡುಗೆ ಅನಿಲ ಸ್ಫೋಟದಿಂದ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡು ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಇಂದು ಗೃಹ...
KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!?
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ವೇತನ ಹೆಚ್ಚಳವಾಗಬೇಕು ಅದಾದ ಬಳಿಕ ಅರಿಯರ್ಸ್ ಕೊಡಬೇಕು ಎಂದರೆ ಹೋರಾಟ ಮಾಡುವುದು ನೌಕರರು. ಅದಕ್ಕೆ ಕರೆ ಕೊಡುವುದು...
BBMP- ₹2 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ : ಆಯುಕ್ತ ತುಷಾರ್ ಗಿರಿನಾಥ್
ಬೆಂಗಳೂರು: ಕಳೆದ ಬಾರಿ ಮಳೆಯಿಂದಾದ ಅನಾಹುತಗಳು ಮತ್ತೆ ಮರುಕಳಿಸಬಾರದು ಎಂಬ ದೃಷ್ಟಿಯಿಂದ ಯಲಹಂಕ ವಲಯದ ಟಾಟಾನ ಗರದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು...
ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್ ಸಮಾವೇಶ
ಬಾಗಲಕೋಟೆ: ರಾಷ್ಟ್ರೀಯ ಸಂಘರ್ಷ ಸಮಿತಿಯ NACಯ ರಾಷ್ಟ್ರೀಯ ಅಧ್ಯಕ್ಷ ಕಮಾಂಡರ್ ಅಶೋಕ್ ರಾವುತ್ ಅವರ ನೇತೃತ್ವದಲ್ಲಿ ಒದೇ ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್...
ಚನ್ನರಾಯಪಟ್ಟಣ ರೈತ ನಿಯೋಗದಿಂದ ಸಿಎಂ ಭೇಟಿ: ಭೂ ಸ್ವಾಧೀನ ಕೈಬಿಡಲು ಮನವಿ
ಸರ್ಕಾರ ರೈತರ ಪರವಾಗಿದೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್....
KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..!
ಪಾಪಾ ಸಂಬಳ ಸಾಲುತ್ತಿಲ್ಲವಂತೆ ಅದಕ್ಕೆ ಹೆಚ್ಚಿಗೆ ಸಂಬಳ ಪಡೆಯುತ್ತಿರುವ ಟಿಸಿಗಳ ಕಾಲು ಹಿಡಿದು ಭಿಕ್ಷೆ ಬೇಡುತ್ತಿದ್ದಾರೆ ಪಾಪಿಗಳು ನಾಚಿಕೆ ಬಿಟ್ಟು ಟಿಸಿಗಳ ಸುಲಿಗೆ ಮಾಡುವ ಇಂಥ ನಾಲಾಯಕ್...
ಇ-ಖಾತಾ ಕಾಲಮಿತಿಯೊಳಗೆ ಅಧಿಕಾರಿಗಳು ವಿಲೇಮಾಡಿ: ತುಷಾರ್ ಗಿರಿನಾಥ್
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಅರ್ಜಿಗಳನ್ನು ಕಾಲಮಿತಿಯೊಳಗಾಗಿ ವಿಲೇವಾರಿ ಮಾಡಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಾಲಿಕೆ ವ್ಯಾಪ್ತಿಯ ವಿವಿಧ ವಿಷಯಗಳಿಗೆ...
ಕನಿಷ್ಠ ಪಿಂಚಣಿ ಶೀಘ್ರ ಜಾರಿ: ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಭರವಸೆ
ನ್ಯೂಡೆಲ್ಲಿ: ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರು ಇಪಿಎಸ್-95 ರಾಷ್ಟ್ರೀಯ ಹೋರಾಟ ಸಮಿತಿಯ ನಿಯೋಗದೊಂದಿಗೆ ಶನಿವಾರ ಸಭೆ ನಡೆಸಿದ್ದಾರೆ. ಆ ಸಭೆಯಲ್ಲಿ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ...
ಸಾರಿಗೆ ನೌಕರರ ಕಾರ್ಮಿಕರು ಎಂದು ಸಂಬೋಧಿಸದಿದ್ದರೆ ಜಂಟಿಯವರಿಗೆ ತಿಂದದ್ದು ಜೀರ್ಣವಾಗುವುದಿಲ್ಲವೇ: ಒಕ್ಕೂಟ ಕಿಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮದ ನೌಕರರನ್ನು ಪದೇಪದೆ ಕಾರ್ಮಿಕರು ಎಂದು ಕರೆಯುವ ಈ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಗೆ ನಿಜವಾಗಲು ನೌಕರರ ಬಗ್ಗೆ...