ಹಾಸನ: ನನಗೆ ಬದುಕಲು ಇಷ್ಟವಿಲ್ಲ ಎಂದು ಡೆತ್ನೋಟ್ ಬರೆದಿಟ್ಟು ಸಕಲೇಶಪುರ ಪುರಸಭೆ ಕಂದಾಯ ಅಧಿಕಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.
ಸಿ.ಟಿ.ಗೋಪಾಲಕೃಷ್ಣ(41) ನೇಣಿಗೆ ಶರಣಾದ ಅಧಿಕಾರಿ. ಗೋಪಾಲಕೃಷ್ಣ ಅವರು ಕಳೆದ ಎರಡು ವರ್ಷಗಳಿಂದ ಸಕಲೇಶಪುರ ಪುರಸಭೆ ಕಂದಾಯ ಅಧಿಕಾರಿಯಾಗಿದ್ದರು.
ನನಗೆ ಬದುಕಲು ಇಷ್ಟವಿಲ್ಲ, ಆದ್ದರಿಂದ ಸಾಯುತ್ತಿದ್ದೇನೆ ಎಂದು ಡೆತ್ನೋಟ್ ಬರೆದಿಟ್ಟು ಗೋಪಾಲಕೃಷ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗೋಪಾಲಕೃಷ್ಣ ಹಾಸನ ನಗರದ ಹೊರವಲಯದ ಚಿಕ್ಕಕೊಂಡಗೊಳ ನಿವಾಸಿಯಾಗಿದ್ದು, ಮನೆಯಲ್ಲೇ ನೇಣಿಗೆ ಕೊರಳೊಡ್ಡಿದ್ದಾರೆ.
ಗೋಪಾಲಕೃಷ್ಣ ಆತ್ಮಹತ್ಯೆ ಸಂಬಂಧ ಹಾಸನದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಕೆಲದಿನಗಳ ಹಿಂದೆ ಅನಾರೋಗ್ಯ ಕಾರಣದಿಂದ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ, ಗ್ರಾಮಲೆಕ್ಕಿಗರೊಬ್ಬರು ನೇಣಿಗೆ ಶರಣಾಗಿದ್ದರು.